ಭಕ್ತಿ ಮತ್ತು ಶಿಸ್ತು ಜೊತೆಯಾಗಿದ್ದರೆ ಸಾಧನೆ ಸಾಧ್ಯವಾಗುತ್ತದೆ ಎಂಬುದಕ್ಕೆ ನಮ್ಮ ಚರ್ಚ್ ವ್ಯಾಪ್ತಿಯ ಕ್ರೈಸ್ತಪ್ರಜೆಗಳೇ ಸಾಕ್ಷಿಯಾಗಿದ್ದಾರೆ ಎಂದು ಸೂರಿಕುಮೇರು ಚರ್ಚ್ ಧರ್ಮಗುರು ವಂದನೀಯ ಫಾದರ್ ಗ್ರೆಗರಿ ಪಿರೇರಾ ಹೇಳಿದರು.
ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಕ್ರಿಸ್ಮಸ್ ಸಂಭ್ರಮ ಕಾರ್ಯಕ್ರಮದಲ್ಲಿ ಕ್ರಿಸ್ಮಸ್ ಸಂದೇಶ ನೀಡಿದ ರವರು, ಇಂತಹಾ ಕಾರ್ಯಕ್ರಮಗಳು ಹಾಗೂ ಕೂಟ ಗಳಿಂದಾಗಿ ಕ್ರಿಸ್ಮಸ್ ಹಬ್ಬದ ಆಚರಣೆಯೂ ಅರ್ಥಪೂರ್ಣವಾಗುತ್ತದೆ , ಪರಸ್ಪರ ಪ್ರೀತಿ ವಿಶ್ವಾಸ ನಂಬಿಕೆಯ ಬದುಕು ಎಲ್ಲರದ್ದಾಗಲಿ ಎಂದವರು ಹಾರೈಸಿದರು.
ಇದೇ ಸಂದರ್ಭ ಚರ್ಚ್ ಪಾಲನಾ ಸಮಿತಿಯಲ್ಲಿ ಎರಡು ಅವಧಿಯಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಚರ್ಚ್ ನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ, ರೋಷನ್ ಬೊನಿಫಾಸ್ ಮಾರ್ಟಿಸ್ ರವರನ್ನು ಸನ್ಮಾನಿಸಲಾಯಿತು. ಧರ್ಮಗುರುಗಳಾದ ಫಾದರ್ ವಿಕ್ಟರ್ ಡಯಾಸ್ , ಫಾದರ್ ಜಯಕುಮಾರ್, ಪಾಲನಾ ಸಮಿತಿ ಕಾರ್ಯದರ್ಶಿ ಪ್ರೀತಿ ಪಿರೇರಾ, ಸಿಸ್ಟರ್ ನ್ಯಾನ್ಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭ ಐಸಿವೈಎಂ ನ ಸೂರಿಕುಮೇರು ಘಟಕದ ವತಿಯಿಂದ ಕ್ರಿಸ್ಮಸ್ ಅಂಗವಾಗಿ ಏರ್ಪಡಿಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅನಿತಾ ರೋಷನ್ ಮಾರ್ಟಿಸ್ ನಿರ್ದೇಶನದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸಾಂತಾಕ್ಲಾಸ್ ಹಾಗೂ ವಿವಿಧ ಮನರಂಜನಾ ನೃತ್ಯಗಳು, ಆಟಗಳನ್ನೂ ಆಯೋಜಿಸಲಾಗಿತ್ತು.