ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ವತಿಯಿಂದ ರಾಷ್ಟ್ರೀಯ ವಿದ್ಯಾರ್ಥಿ ವೇತನ ಅಭಿಯಾನದ ಭಾಗವಾಗಿ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವು ಮುಹಿಯುದ್ದೀನ್ ಮಿತ್ತಬೈಲ್ ಸಭಾಭವನ ಕೈಕಂಬದಲ್ಲಿ ನಡೆಯಿತು. ವಿದ್ಯಾರ್ಥಿ ವೇತನದ ಪ್ರಥಮ ಕಂತಿನ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 180 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಅಬ್ದುಲ್ ಸಲೀಂ ಫರಂಗಿಪೇಟೆ ವಹಿಸಿದ್ದರು ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಯಾಸಿರ್ ಹಸನ್ ಪಾಪ್ಯುಲರ್ ಫ್ರಂಟ್ ನ ಶೈಕ್ಷಣಿಕ ಪರ ಅಭಿಯಾನಗಳಾದ ಸ್ಕೂಲ್ ಚಲೋ, ಆರ್.ಟಿ.ಇ ಹಾಗು ರಾಷ್ಟ್ರೀಯ ವಿದ್ಯಾರ್ಥಿ ವೇತನ ಅಭಿಯಾನಗಳು ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಮೇಲೆತ್ತಲು ಸಹಕಾರಿಯಾಗುವ ಕಾರ್ಯವಾಗಿದೆ. ವಿದ್ಯಾರ್ಥಿ ವೇತನದಿಂದ ಹಲವಾರು ವಿದ್ಯಾರ್ಥಿಗಳು ಫಲಾನುಭವಿಗಳಾಗಿದ್ದು ಅವರು ಉನ್ನತ ಸ್ಥಾನಕ್ಕೇರಲು ಇದು ಸಹಕಾರಿಯಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ರಂಗದಲ್ಲಿ ಮೇಲೆ ಬರಲು ಹಲವಾರು ಅವಕಾಶಗಳಿದ್ದು ಎಲ್ಲವನ್ನು ಸದುಪಯೋಗ ಪಡೆಯಬೇಕು ಹಾಗೂ ಇದರೊಂದಿಗೆ ಸಮಾಜದ ಬದಲಾವಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷರಾದ ಇಲ್ಯಾಸ್ ಮುಹಮ್ಮದ್ ಮಾತನಾಡಿ ಜೀವನದ ಉದ್ದೇಶವು ಕೇವಲ ಸ್ವಾರ್ಥ ಹಿತಾಸಕ್ತಿಯನ್ನು ಹೊಂದಿರಬಾರದು ಶಿಕ್ಷಣದ ಉನ್ನತ ಸ್ಥಾನಕ್ಕೆ ತಲುಪುವ ಮೂಲಕ ಸಮಾಜಕ್ಕೆ ಹಾಗೂ ಸಮುದಾಯಕ್ಕೆ ಉಪಯೋಗವಾಗಬೇಕು ಎಂದು ಹೇಳಿದರು. ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಶ್ವನ್ ಸಾಧಿಕ್, ಎನ್.ಡಬ್ಲ್ಯೂ.ಎಫ್ ರಾಜ್ಯಾಧ್ಯಕ್ಷೆ Zeenath Firoz, ಅಡ್ವೋಕೇಟ್ ಕಬೀರ್ ಮತ್ತು ಕೈಕಂಬ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯೆ ಹಸೀನಾ ಮತ್ತು ಮೊಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲು ಅಧ್ಯಕ್ಷ ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಕ್ಬರಲಿ ಪೊನ್ನೋಡಿ ನಿರೂಪಿದರು. ಬಂಟ್ವಾಳ ತಾಲೂಕು ಕಾರ್ಯದರ್ಶಿ ಶಬೀರ್ ರಹಮಾನ್ ಸ್ವಾಗತಿಸಿ ಮೊಯ್ದಿನ್ ಖಾದರ್ ವಂದಿಸಿದರು.