www.bantwalnews.com Editor: Harish Mambady
ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರ (ರಿ) ಪುತ್ತೂರು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಡಿ.28ರಂದು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನೃತ್ಯ ರಂಜಿನಿ ಎಂಬ ಕಾರ್ಯಕ್ರಮ ನಡೆಯಲಿದೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರದ ಸಂಚಾಲಕ ಉದಯ ವೆಂಕಟೇಶ ಭಟ್, ಸಂಜೆ 3.30ಕ್ಕೆ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ವೃಕ್ಷಾಭಿಯಾನ ಅಂಗವಾಗಿ ಯೋಧ ಪ್ರಕಾಶ್ ಕೆ. ಅವರು ಸಸಿ ನೆಡಲಿದ್ದಾರೆ. 4 ಗಂಟೆಗೆ ದೀಪಪ್ರಜ್ವಲನ, ಅಂತಾರಾಷ್ಟ್ರೀಯ ನೃತ್ಯಪಟು ವಿದ್ವಾನ್ ಕೋಲಾರ ರಮೇಶ್ ಮತ್ತು ತಂಡದಿಂದ ನೃತ್ಯ ಕಾರ್ಯಕ್ರಮ, ಬೆಂಗಳೂರಿನ ದೇವರಾಜ್ ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮಮ ನಡೆಯಲಿದೆ. 4.45ಕ್ಕೆ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ನೃತ್ಯರಂಜಿನಿ ಕಾರ್ಯಕ್ರಮ ನಡೆಯಲಿದೆ ಎಂದರು. ಸಂಜೆ 6.30ಕ್ಕೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ವಿಧಾನಪರಿಷತ್ತು ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ವಹಿಸುವರು. ಮುಖ್ಯ ಅತಿಥಿಗಳಾಗಿ ಕರವೇ-ಶಿವಸೇನೆ ರಾಜ್ಯಾಧ್ಯಕ್ಷ ಜಯದೇವ ಪ್ರಸನ್ನ, ಕರವೇ-ಶಿವಸೇನೆ ಕಾರ್ಯಾಧ್ಯಕ್ಷ ಮಂಜುನಾಥ್, ತುಳುವೆರೆ ಜನಪದ ಕೂಟ ಮಡಿಕೇರಿ ಅಧ್ಯಕ್ಷ ಪ್ರಭು ರೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಬಿ, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲಿಯಾನ್, ಅಂತಾರಾಷ್ಟ್ರೀಯ ನೃತ್ಯಪಟು ಕೋಲಾರ್ ರಮೇಶ್, ಬೆಂಜನಪದವು ಸರಕಾರಿ ಪಪೂ ಕಾಲೇಜು ಶಿಕ್ಷಕಿ ಕೆ.ಸುಜಾತಾ ಭಾಗವಹಿಸುವರು. ಇದೇ ವೇಳೆ ತುಳುನಾಡ ಮಾಣಿಕ್ಯ ರಂಗಭೂಮಿ, ಚಲನಚಿತ್ರ ಕಲಾವಿದ ಅರವಿಂದ ಬೋಳಾರ್, ಅಂತಾರಾಷ್ಟ್ರೀಯ ನೃತ್ಯಪಟು ವಿದ್ವಾನ್ ಕೋಲಾರ ರಮೇಶ್ ಮತ್ತು ರಾಜಸ್ಥಾನ ಬೆಟಾಲಿಯನ್ ಭಾರತೀಯ ಸೇನಾ ಯೋಧ ಪ್ರಕಾಶ್ ಕೆ. ಅವರನ್ನು ಸನ್ಮಾನಿಸಲಾಗುವುದು ಎಂದರು.
ಕೇಂದ್ರವು ಬಂಟ್ವಾಳ, ಬಿ.ಸಿ.ರೋಡು ಸುತ್ತಯಮುತ್ತಲಿನ ಪರಿಸರದಲ್ಲಿ ಭರತನಾಟ್ಯ ಮತ್ತು ಜನಪದ ನೃತ್ಯಪ್ರಕಾರಗಳ ತರಬೇತಿಯನ್ನು ಬಿ.ಸಿ.ರೋಡ್ ರಕ್ತೇಶ್ವರಿ ದೇವಸ್ಥಾನ, ಬಂಟ್ವಾಳದ ವಿ.ಎನ್.ಆರ್.ಸಭಾಂಗಣ, ಪಾಣೆಮಂಗಳೂರು ಎಸ್.ವಿ.ಎಸ್. ಅನುದಾನಿತ ಹಿ.ಪ್ರಾ.ಶಾಲೆ, ವಾಮದಪದವಿನ ಚೆನ್ನೈತೋಡಿ ಸ.ಹಿ.ಪ್ರಾ.ಶಾಲೆ ಮತ್ತು ಪುಂಜಾಲಕಟ್ಟೆಯಲ್ಲಿ ನೀಡುತ್ತಾ ಬಂದಿದ್ದು, 200 ವಿದ್ಯಾರ್ಥಿಗಳು ನೃತ್ಯಾರ್ಜನೆ ಮಾಡುತ್ತಿದ್ದಾರೆ. ಸಮಾಜಮುಖಿ ಚಟುವಟಿಕೆ ಅಂಗವಾಗಿ ವೃಕ್ಷಾಭಿಯಾನ ನಡೆಯುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ನೃತ್ಯ ನಿರ್ದೇಶಕಿ ರೋಹಿಣಿ ಉದಯ್, ಕೇಂದ್ರದ ಖಜಾಂಚಿ ಜಯಲಕ್ಷ್ಮೀ ಪ್ರಭು, ಸಂಸ್ಥೆ ಸದಸ್ಯರಾದ ರೂಪಕಲಾ ಮತ್ತು ನಳಿನಿ ಉಪಸ್ಥಿತರಿದ್ದರು.
ಮನುಷ್ಯ ಮನುಷ್ಯನ ನಡುವಿನ ವಿಶ್ವಾಸವೃದ್ಧಿಗೆ ಇಫ್ತಾರ್ ಕೂಟ: ರಮಾನಾಥ ರೈ (more…)