ಪ್ರಮುಖ ಸುದ್ದಿಗಳು

2019ರ ಕೊನೇ ಸೂರ್ಯಗ್ರಹಣ – ದ.ಕ.ದಲ್ಲಿ ವೀಕ್ಷಣೆ ಹೇಗೆ, ಇಲ್ಲಿದೆ ಮಾಹಿತಿ

  • ಮಂಗಳೂರು ಪಿಲಿಕುಳದಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶ

ಡಿಸೆಂಬರ್ 26ರಂದು ಸಂಭವಿಸಲಿರುವ ಕಂಕಣ ಸೂರ್ಯಗ್ರಹಣ ಕರಾವಳಿ ಪ್ರದೇಶದಲ್ಲಿ ಗೋಚರಿಸಲಿರುವುದರಿಂದ ಶತಮಾನದ ವಿಶೇಷ ವಿದ್ಯಮಾನವನ್ನು ಹಲವು ಕೇಂದ್ರಗಳಲ್ಲಿ, ಕಾಲೇಜುಗಳಲ್ಲಿ ಹಾಗೂ ಶಾಲೆಗಳಲ್ಲಿ ವೀಕ್ಷಿಸಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ.

ಚಿತ್ರಕೃಪೆ: ಅಂತರ್ಜಾಲ

ಇದಕ್ಕೆ ಪೂರ್ವಭಾವಿಯಾಗಿ . ಜಿಲ್ಲೆ, ಉಡುಪಿ ಹಾಗೂ ಕೊಡಗು ಜಿಲ್ಲೆಗಳ ಆರು ಕಾಲೇಜುಗಳಲ್ಲಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಭೌತಶಾಸ್ತ್ರ ಅಧ್ಯಾಪಕರ ಸಂಘ ಇವರ ಸಹಯೋಗದಲ್ಲಿ ಅಧ್ಯಾಪಕರಿಗೆ ಮತ್ತು ಆಸಕ್ತರಿಗೆ ಗ್ರಹಣದ ಬಗ್ಗೆ ಮಾಹಿತಿ ನೀಡಿ, ವೀಕ್ಷಿಸಲು ಬೇಕಾದ ಅನುಕೂಲತೆಗಳನ್ನು ಮಾಡಿಕೊಳ್ಳಲು ತರಬೇತಿ ನೀಡಲಾಗಿದೆ. ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಕೆಳಗಿನ ಸಂಸ್ಥೆಗಳು ಹಾಗೂ ಹವ್ಯಾಸಿ ಖಗೋಳಶಾಸ್ತ್ರಜ್ಞರ ಸಹಕಾರದಿಂದ ಬೇರೆ ಬೇರೆ ಸ್ಥಳಗಳಲ್ಲಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ಮಂಗಳೂರುಸೌರ ಕನ್ನಡಕದಿಂದ ವೀಕ್ಷಣೆ, ಗ್ರಹಣದ ಸಮಯದ ಉಷ್ಣತೆ, ಬೆಳಕಿನ ಬದಲಾವಣೆ, ಗ್ರಹಣದ ನೆರಳಿನ ಅಂಶ ಇತ್ಯಾದಿಗಳ ದಾಖಲೀಕರಣ. ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ಹವ್ಯಾಸಿ ಖಗೋಳಶಾಸ್ತ್ರಜ್ಞರ ಸಂಘ ಹಾಗೂ ಸಂತ ಆಗ್ನೇಸ್ ಕಾಲೇಜು, ಮಂಗಳೂರು ಇವರು ಜಂಟಿಯಾಗಿ ಪಾದುವ ಹೈಸ್ಕೂಲ್ ವಠಾರ, ಕದ್ರಿ ಹಿಲ್ಸ್. ಸಂತ ಅಲೋಶಿಯಸ್ ಕಾಲೇಜು, ಮಂಗಳೂರು. ವಿಜಯ ಕಾಲೇಜು, ಮುಲ್ಕಿ. ಹವ್ಯಾಸಿ ಖಗೋಳಶಾಸ್ತ್ರಜ್ಞರ ಸಂಘ ಇವರು ಪೂರ್ಣಪ್ರಜ್ಞ ಕಾಲೇಜು, ಉಡುಪಿ. ಮಹಾವೀರ ಕಾಲೇಜು, ಮೂಡಬಿದ್ರೆ. ಸಂತ ಫಿಲೋಮಿನಾ ಕಾಲೇಜು, ಪುತ್ತೂರು. ಎಸ್ಡಿಎಮ್ ಕಾಲೇಜು, ಉಜಿರೆ. ಎಫ್ಎಮ್ ಕಾರಿಯಪ್ಪ ಕಾಲೇಜು, ಮಡಿಕೇರಿ. ಹರಿಪದವು ಪ್ರೌಢಶಾಲಾ ವಠಾರದಲ್ಲಿ. ಸರ್ಕಾರಿ ಪ್ರೌಢಶಾಲೆ, ಹೆಜಮಾಡಿಯಲ್ಲಿ ವೀಕ್ಷಣೆ ನಡೆಯಲಿದೆ.

ಜಾಹೀರಾತು

 ಸಂಡೇ ಸೈನ್ಸ್ ಸ್ಕೂಲ್, ಪುಣೆಶಾರದಾ ಪ್ರೌಢಶಾಲೆ, ತಲಪಾಡಿ ವಠಾರ. ಎಂ.ಜಿ.ಎಂ. ತಾರಾಲಯ, ಔರಂಗಬಾದಬೇಕಲ್ ಕೋಟೆ.  ಡಾ. ಭಾರತಿ ಬಾಕ್ಷಿ ತಂಡಬೇಕಲ್ ಕೋಟೆನಲ್ಲಿ ವೀಕ್ಷಣೆ ನಡೆಯಲಿದೆ.

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಗ್ರಹಣದ ದಿನ ನಡೆಯಲಿರುವ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ಕಾರ್ಯಕ್ರಮವು ಬೆಳಿಗ್ಗೆ 8 ಗಂಟೆಗೆ ಆರಂಭವಾಗುವುದು. ವೀಕ್ಷಕರಿಗೆ ಎಲ್ಲಾ ಬಗೆಯ ಉಪಕರಣಗಳಿಂದ ವೀಕ್ಷಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು. ಮಂಗಳೂರಿನಲ್ಲಿ ಗ್ರಹಣ ವಿವರ: ಗ್ರಹಣ ಪ್ರಾರಂಭ: ಬೆಳಿಗ್ಗೆ 8. 4ನಿ. 25ಸೆ, ಕಂಕಣ ಗ್ರಹಣ ಆರಂಭ: 9. 24ನಿ.8ಸೆ, ಕಂಕಣ ಗ್ರಹಣದ ಅಂತ್ಯ: 9. 26ನಿ. 19ಸೆ, ಗ್ರಹಣದ ಅಂತ್ಯ: 11. 03ನಿ. 41ಸೆ.

ವೀಕ್ಷಣೆಗೆ ಉಪಕರಣಗಳು: ಪಿನ್ಹೋಲ್ ಉಪಕರಣ (ಬಿಳಿ ಗೋಡೆ ಅಥವಾ ಪರದೆಯ ಮೇಲೆ ಸೂರ್ಯ ಬಿಂಬದ ವೀಕ್ಷಣೆ), ದೂರದರ್ಶಕ (ಸೌರ ಫಿಲ್ಟರ್ ಅಳವಡಿಸಿರಬೇಕು) ಅಥವಾ ಬೈನಾಕ್ಯುಲರ್ (ಸೌರ ಫಿಲ್ಟರ್ ಅಳವಡಿಸಿರಬೇಕು) ಅಥವಾ ಸೌರ ಫಿಲ್ಟರ್ ಇಲ್ಲದಿದ್ದಲ್ಲಿ ಪರದೆಯ ಮೇಲೆ ಸೂರ್ಯ ಬಿಂಬದ ವೀಕ್ಷಣೆ, ಸೋಲಾರ್ ಸಿಸ್ಟಮ್, ಸೌರ ಕನ್ನಡಕ (ಸೋಲಾರ್ ಫಿಲ್ಟರ್) (ರಂಧ್ರವಿಲ್ಲದ ಮತ್ತು ವೈಜ್ಞಾನಿಕವಾಗಿ ಸುರಕ್ಷಿತವೆಂದು ಪರೀಕ್ಷಿಸಲ್ಪಟ್ಟ)
ಮುಂಜಾಗ್ರತೆಗಳು: ಸೋಲಾರ್ ಫಿಲ್ಟರ್ (ಸೌರ ಕನ್ನಡಕ) ಗಳನ್ನು ಬಳಸಿಯೇ ಸೂರ್ಯನನ್ನು ವೀಕ್ಷಿಸಿ.

ಸೂರ್ಯನನ್ನು ನೇರವಾಗಿ (ಗ್ರಹಣಕಾಲದಲ್ಲೂ ಸಹ) ಬರಿಗಣ್ಣಿನಿಂದ ವೀಕ್ಷಿಸಬೇಡಿ. ಫಿಲ್ಟರ್ಗಳನ್ನು ಬಳಸುವಾಗ ಕೂಡ ಮಾರ್ಗದರ್ಶಕರ ಸೂಚನೆಗಳನ್ನು ಪಾಲಿಸಿ.ಹಳೆಯ ಅಥವಾ ಹಾಳಾಗಿರುವ ಸೋಲಾರ್ ಫಿಲ್ಟರ್ಗಳನ್ನು ಬಳಸಬ್ಭೆಡಿ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ಸದಸ್ಯ ಕಾರ್ಯದರ್ಶಿ ಇವರ ಪ್ರಕಟಣೆ ತಿಳಿಸಿದೆ.

 

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

2 hours ago