ಟಿಪ್ಪರ್ ಲಾರಿಯೊಂದು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು, ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಕರೋಪಾಡಿ ಗ್ರಾಮದ ಕೇರಳ- ಕರ್ನಾಟಕ ಗಡಿಭಾಗದ ಮುಗುಳಿ ಎಂಬಲ್ಲಿ ಭಾನುವಾರ ನಡೆದಿದೆ.
ಮುಗುಳಿ ನಿವಾಸಿ ಅನ್ವರ್ ಮೃತಪಟ್ಟ ಸವಾರನಾಗಿದ್ದು, ನವಾಫ್ ಗಾಯಗೊಂಡ ಸಹಸವಾರ ಕೇರಳಕ್ಕೆ ಎಂ.ಸ್ಯಾಂಡ್ ಸಾಗಾಟ ಮಾಡುವ ಟಿಪ್ಪರ್ ಲಾರಿಯು ಮುಗುಳಿ ತಿರುವಿನಲ್ಲಿ ಬೈಕ್ ಗೆ ಢಿಕ್ಕಿ ಹೊಡೆದು, ಬೈಕ್ ಮೇಲೆ ಲಾರಿ ಚಲಿಸಿದೆ. ವಿಟ್ಲ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)