ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ ಆಡಳಿತಕ್ಕೊಳಪಟ್ಟಿರುವ ಶ್ರೀ ಭಾರತೀ ಪದವಿ ಕಾಲೇಜು ಎನ್ನೆಸ್ಸೆಸ್ ಘಟಕದ ವಾರ್ಷಿಕ ವಿಶೇಷ ಶಿಬಿರವು ವಿಟ್ಲ ಸಮೀಪದ ಕಂಬಳಬೆಟ್ಟು ದ.ಕ.ಜಿ.ಪಂ.ಉ.ಹಿ. ಪ್ರಾ. ಶಾಲೆಯಲ್ಲಿ ಶನಿವಾರ ಸಮಾರೋಪಗೊಂಡಿತು.
ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಅಧ್ಯಕ್ಷತೆ ವಹಿಸಿ, ಮಾತನಾಡಿ, ಶಿಬಿರದಲ್ಲಿ ಜಲಸಂರಕ್ಷಣೆ, ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಂಡು ಸಮಾಜಕ್ಕೆ ಉಪಯುಕ್ತವಾದ ಕಾರ್ಯವನ್ನು ಮಾಡಿರುವುದು ಸಂತಸ ತಂದಿದೆ. ಪಠ್ಯೇತರ ಚಟುವಟಿಕೆಗಳಲ್ಲಿ ಒಂದು ವಾರದ ಸೇವಾ ಕಾರ್ಯವನ್ನು ಮಾಡಿದ್ದಲ್ಲದೇ ಶಿಬಿರಾರ್ಥಿಗಳಿಗೆ ಸಹಜೀವನ, ಸಹಬಾಳ್ವೆಯ ಪಾಠವನ್ನು ಬೋಽಸಿದಂತಾಗಿದೆ. ಇಲ್ಲಿ ಭವಿಷ್ಯವನ್ನು ರೂಪಿಸುವುದಕ್ಕೆ ಯೋಗ್ಯ ಶಿಕ್ಷಣ ಒದಗಿಸಿದಂತಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಜೀವನ್‌ದಾಸ್ ಸಮಾರೋಪ ಭಾಷಣ ಮಾಡಿ, ಅರ್ಥಪೂರ್ಣ ಶಿಬಿರದಲ್ಲಿ ಪಾಲ್ಗೊಂಡಂತಾಗಿದೆ. ಶಿಬಿರಾರ್ಥಿಗಳಿಗೆ ಉಪಯುಕ್ತವಾದ ಮಾಹಿತಿಗಳು ಲಭ್ಯವಾಗಿವೆ. ಶಿಸ್ತು, ಜತೆಯಾಗಿ ಬಾಳುವ, ಪರಿಚಯವಿಲ್ಲದ ಸಮಾಜದೊಂದಿಗೆ ಬೆರೆಯುವ, ಕೃಷಿಗೆ ಸಂಬಂಽಸಿದ ಕಾರ್ಯ ಮಾಡುವ ಅನುಭವ ದೊರೆತಿದೆ ಎಂದರು.
ವಿಟ್ಲಮುಡ್ನೂರು ಗ್ರಾ.ಪಂ.ಅಧ್ಯಕ್ಷೆ ಪ್ರೇಮಲತಾ, ಸದಸ್ಯ ಮಹಾಬಲೇಶ್ವರ ಭಟ್ ಆಲಂಗಾರು, ಕಂಬಳಬೆಟ್ಟು ದ.ಕ.ಜಿ.ಪಂ.ಉ.ಹಿ. ಪ್ರಾ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್‌ರಹಿಮಾನ್, ಮುಖ್ಯ ಶಿಕ್ಷಕಿ ವಾರಿಜಾ, ಶಾಲೆಯ ಶತಮಾನೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಶೆಟ್ಟಿ ಮೂಡೈಮಾರು, ಕಂಬಳಬೆಟ್ಟು ಜುಮಾ ಮಸೀದಿ ಮೊದಿನ್ ಹಾಜಿ, ಶ್ರೀ ಭಾರತೀ ಕಾಲೇಜಿನ ಉಪಪ್ರಾಂಶುಪಾಲರಾದ ಗಂಗಾರತ್ನ ಮುಗುಳಿ, ಸಹಶಿಬಿರಾಽಕಾರಿಗಳಾದ ಪ್ರವೀಣ ಪಿ., ಅನುಷಾ ಎಸ್.ರೈ, ಸತ್ಯನಾರಾಯಣಪ್ರಸಾದ್ ಕೆ., ಪಾವನ ಕುಮಾರಿ, ಅಮೃತಾ, ಅನುಷ್ಠಾನ ಸಮಿತಿ ಕಾರ್ಯದರ್ಶಿ ಕಾರ್ತಿಕ್ ಕುಮಾರ್ ಶೆಟ್ಟಿ ಮೂಡೈಮಾರು ಮತ್ತಿತರರು ಉಪಸ್ಥಿತರಿದ್ದರು.
ಸಹಶಿಬಿರಾಧಿಕಾರಿ ಪ್ರತಿಮ್ ಕುಮಾರ್ ಎಸ್., ಘಟಕ ನಾಯಕರಾದ ಸುಮಂತ್, ರಶ್ಮಿ ವಿ.ಆರ್., ಶಿಬಿರಾರ್ಥಿಗಳಾದ ಕೀರ್ತನಾ, ಪ್ರಶಾಂತ್, ಪ್ರಶಾಂತ್‌ಕೃಷ್ಣ ಅನಿಸಿಕೆ ವ್ಯಕ್ತಪಡಿಸಿದರು.
ಇದೇ ಸಂದರ್ಭ ಮೂಡೈಮಾರು ಎಂಬಲ್ಲಿ ಅಣೆಕಟ್ಟು ನಿರ್ಮಿಸಲು ಸಹಕರಿಸಿದ ನಂತೂರು ಶ್ರೀ ಭಾರತೀ ಕಾಲೇಜಿನ ಎನ್ನೆಸ್ಸೆಸ್ ಘಟಕಕ್ಕೆ ನೆನಪಿನ ಕಾಣಿಕೆ ನೀಡಿ, ಗೌರವಿಸಿದರು.
ರಾಷ್ಟ್ರೀಯ ಸೇವಾ ಯೋಜನಾಽಕಾರಿ ಅಶೋಕ್ ಎಸ್. ಅವರು ಪ್ರಸ್ತಾವಿಸಿ, ವರದಿ ಮಂಡಿಸಿದರು. ಶಿಬಿರಾರ್ಥಿ ಕಾರ್ತಿಕ್ ಸ್ವಾಗತಿಸಿದರು. ಶಿಬಿರಾರ್ಥಿ ದಾಕ್ಷಾಯಿಣಿ ವಂದಿಸಿದರು. ಶಿಬಿರಾರ್ಥಿ ವಿವೇಕ್ ದೇವ ನಿರೂಪಿಸಿದರು.