ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ಆಶ್ರಯದಲ್ಲಿ ಬಿ.ಸಿ.ರೋಡ್ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಬಳಿಯ ಮೈದಾನದಲ್ಲಿ ಡಿ.21 ರಿಂದ ಜ.೧ರವರೆಗೆ ನಡೆಸಲು ಉದ್ದೇಶಿಸಲಾಗಿದ್ದ ಕಾರ್ಯಕ್ರಮವನ್ನು ನಿಷೇಧಾಜ್ಞೆ ಹಿನ್ನಲೆಯಲ್ಲಿ ಡಿ.23 ಸೋಮವಾರದಿಂದ ಜ.1 ರವರೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ್ ಜೈನ್ ಮತ್ತು ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ ತಿಳಿಸಿದ್ದಾರೆ.
ಡಿ.21ರಂದು ನಡೆಯಬೇಕಾಗಿದ್ದ ಕಲೋತ್ಸವ ಉದ್ಘಾಟನಾ ಸಮಾರಂಭ, ಜಾನಪದ ದಿಬ್ಬಣ, ಮೆರವಣಿಗೆ, ಕರಾವಳಿ ಸೌರಭ ಮತ್ತು ಚಿಣ್ಣರ ಪ್ರಶಸ್ತಿ ಪ್ರಧಾನ ಹಾಗೂ ರಾಗರಂಜಿನಿ ಕಾರ್ಯಕ್ರಮ ಡಿ.23ರಂದು ನಡೆಯಲಿದೆ. ಡಿ.23ರ ಕಾರ್ಯಕ್ರಮ ಯಥಾಸ್ಥಿತಿ ಮುಂದುವರಿಯಲಿದೆ. ಡಿ.22ರಂದು ನಡೆಯಬೇಕಾಗಿದ್ದ ಕರಾವಳಿ ಸರಿಗಮಪ ಮೆಗಾ ಆಡಿಸನ್ ಸಹಿತ ಎಲ್ಲ ಕಾರ್ಯಕ್ರಮಗಳು ಡಿ.24ರ ಕಾರ್ಯಕ್ರಮದೊಂದಿಗೆ ನಡೆಯಲಿದೆ ಉಳಿದಂತೆ ಡಿ.25 ರಿಂದ ಜ 1 ರವರೆಗಿನ ಎಲ್ಲಾ ಕಾರ್ಯಕ್ರಮಗಳು ಯಥಾಸ್ಥಿತಿ ಮುಂದುವರಿಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127