ಬಂಟ್ವಾಳ

ಡಿ.20ರಿಂದ 24ರವರೆಗೆ ಪಾಣೆಮಂಗಳೂರು ಹೋಬಳಿಯಲ್ಲಿ ವಿಶೇಷ ಆಧಾರ್ ನೋಂದಣಿ

ಪಾಣೆಮಂಗಳೂರು ಹೋಬಳಿಗೆ ಸಂಬಂಧಿಸಿ ವಿಶೇಷ ಆಧಾರ್ ನೋಂದಣಿ ಕಾರ್ಯ ಡಿ.20ರಿಂದ 24ರವರೆಗೆ ನಡೆಯಲಿದೆ. ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಹೂಹಾಕುವಕಲ್ಲು ವಿನಲ್ಲಿ ಡಿ.20ರಂದು ಫಜೀರು, ಕುರ್ನಾಡು, ಬಾಳೇಪುಣಿ, ಕೈರಂಗಳ, ಇರಾ, ನರಿಂಗಾನ, ಚೇಳೂರು, ಸಜೀಪನಡು ಮತ್ತು ಸಜೀಪಪಡು ಗ್ರಾಮಗಳ ವ್ಯಾಪ್ತಿಯವರು ಭಾಗವಹಿಸಲು ಅವಕಾಶವಿದೆ. 21ರಂದು ಕಲ್ಲಡ್ಕ ದ.ಕ.ಜಿ.ಪಂ.ಮಾ.ಹಿ.ಪ್ರಾ.ಶಾಲೆಯಲ್ಲಿ ಗೋಳ್ತಮಜಲು, ಅಮ್ಟೂರು, ಕಡೇಶಿವಾಲಯ, ಬರಿಮಾರು, ಸಜೀಪಮೂಡ, ಸಜೀಪಮುನ್ನೂರು, ಬಾಳ್ತಿಲ ಗ್ರಾಮ ವ್ಯಾಪ್ತಿಯವರಿಗೆ ಅವಕಾಶವಿದ್ದರೆ, 23ರಂದು ಬಿ.ಸಿ.ರೋಡಿನ ರೋಟರಿ ಭವನದಲ್ಲಿ ಬಿ.ಮೂಡ, ಪಾಣೆಮಂಗಳೂರು, ಬಡಗಬೆಳ್ಳೂರು, ತೆಂಕಬೆಳ್ಳೂರು, ನರಿಕೊಂಬು, ಶಂಭೂರು, ಮಂಚಿ ಗ್ರಾಮದವರಿಗೆ ಅವಕಾಶವಿದೆ. 24ರಂದು ಫರಂಗಿಪೇಟೆ ಸೇವಾಂಜಲಿಯಲ್ಲಿ ಮೇರಮಜಲು, ಕೊಡ್ಮಣ್, ತುಂಬೆ, ಕಳ್ಳಿಗೆ, ಪುದು, ಅಮ್ಮುಂಜೆ, ಕರಿಯಂಗಳ ಗ್ರಾಮದವರಿಗೆ ವಿಶೇಷ ಆಧಾರ್ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಹಸೀಲ್ದಾರ್ ರಶ್ಮಿ ಎಸ್.ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts