ಎಸ್ಡಿಪಿಐ ಆಲಾಡಿ ವಲಯದ ವತಿಯಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆ ಇದರ ಸಹಭಾಗಿತ್ವದಲ್ಲಿ ೨ನೇ ವರ್ಷದ ಅಂಗವಾಗಿ ರಕ್ತದಾನ ಶಿಬಿರವು ಆಲಾಡಿ ಎನ್‌ಎಫ್‌ಸಿ ಕಚೇರಿಯಲ್ಲಿ ನಡೆಯಿತು.
ಆಲಾಡಿ ಬದ್ರಿಯಾ ಜುಮಾ ಮಸೀದಿಯ ಖತೀಬ್ ರೀಯಾಝ್ ಪೈಝಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದುಆ ನೆರವೇರಿಸಿ ಮಾತನಾಡಿ, ರಕ್ತದಾನದ ಶ್ರೇಷ್ಠತೆಯನ್ನು ವಿವರಿಸಿದರು.
ಮುಖ್ಯ ಅತಿಥಿ ಡಾ. ಹಸನಬ್ಬ ಅವರು ರಕ್ತದಾನದ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಎಸ್ಡಿಪಿಐ ಬಂಟ್ವಾಳ ಕ್ಷೇತ್ರಾಧ್ಯಕ್ಷ ಯೂಸುಫ್ ಆಲಡ್ಕ, ಪಿಎಫ್‌ಐ ವಲಯ ಅಧ್ಯಕ್ಷ ಖಾದರ್ ಉದ್ದೋಟು, ಎಸ್ಡಿಪಿಐ ಆಲಾಡಿ ಯುನಿಟ್ ಅಧ್ಯಕ್ಷ ಶರೀಫ್ ಕೊಪ್ಪಳ, ಆಲಾಡಿ ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ರಹಿಮಾನ್ ಕೆ.ಎಂ, ಸಜೀಪ ಮುನ್ನೂರು ಗ್ರಾಪಂ ಸದಸ್ಯ ಮಜೀದ್, ನೂರುಲ್ ಹುದಾ ಮದ್ರಸದ ಅಧ್ಯಾಪಕರು ಹಾಜರಿದ್ದರು. ಸಂಘಟಕ ರಹೀಂ ಆಲಾಡಿ ಸ್ವಾಗತಿಸಿ, ಎಸ್ಡಿಪಿಐ ಪ್ರಧಾನ ಕಾರ್ಯದರ್ಶಿ ಮಲಿಕ್ ಕೊಳಕೆ ವಂದಿಸಿದರು.