ಬಾಳ್ತಿಲ ಗ್ರಾಮದ ಬೀಡು ಬಸದಿ ರಸ್ತೆಯ ರೂ.೨೦ ಲಕ್ಷ ಅನುದಾನ ಕಾಮಗಾರಿಯನ್ನು ಈ ದಿನ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಉದ್ಫಾಟಿಸಿದರು. ಈ ಸಂಧರ್ಭದಲ್ಲಿ ಜಿ.ಪಂ ಸದಸ್ಯೆ ಕಮಲಾಕ್ಷಿ ಕೆ ಪೂಜಾರಿ, ಗ್ರಾ.ಪಂ.ಅಧ್ಯಕ್ಷ ವಿಠಲ ನಾಯ್ಕ, ಉಪಾಧ್ಯಕ್ಷೆ ಪೂರ್ಣಿಮ, ಮಾಜಿ ಜಿ.ಪಂ ಸದಸ್ಯ ಆರ್ ಚೆನ್ನಪ್ಪ ಕೋಟ್ಯಾನ್, ಗ್ರಾ.ಪಂ. ಸದಸ್ಯರಾದ ಮೋಹನ್ ಪಿ.ಎಸ್, ವೆಂಕಟ್ರಾಯ ಪ್ರಭು, ವಿಶ್ವನಾಥ ನಾಯ್ಕ, ಶಿವರಾಜ್ ಶೆಟ್ಟಿ, ಸುರೇಶ್ ಶೆಟ್ಟಿ, ಹರೀಶ್ ಶೆಟ್ಟಿ, ಯಾಧವ ಪೂಜಾರಿ, ಅರುಣ್ ಪೂಜಾರಿ, ಬ್ರಿಜೇಶ್ ಜೈನ್, ದೀಪಕ್ ಶೆಟ್ಟಿ ಉಪಸ್ಥಿತರಿದ್ದರು. ಇದೇ ವೇಳೆ ಬಾಳ್ತಿಲ ಗ್ರಾಮದ ಸಣ್ಣಕುಕ್ಕು-ಕುರ್ಪೆ ರಸ್ತೆಯ ರೂ.೧೦ ಲಕ್ಷ ಅನುದಾನ ಕಾಮಗಾರಿಯನ್ನು ಶಾಸಕರು ಉದ್ಘಾಟಿಸಿದರು.