ಕಲ್ಲಡ್ಕ

ಶಕ್ತಿಶಾಲಿ ಭಾರತ ನಿರ್ಮಾಣ ಅನಾವರಣ- ಕಿರಣ್ ಬೇಡಿ

  • ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಹೊನಲು ಬೆಳಕಿನ ಕ್ರೀಡೋತ್ಸವ

ಶಕ್ತಿಶಾಲಿ ಭಾರತ ನಿರ್ಮಾಣದ ಕನಸು ನನಸಾಗುವುದರಲ್ಲಿ ಸಂಶಯವಿಲ್ಲ ಎಂದು ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಡಾ. ಕಿರಣ್ ಬೇಡಿ ಹೇಳಿದ್ದಾರೆ.

ಚಿತ್ರ: ಕಿಶೋರ್ ಪೆರಾಜೆ

ಚಿತ್ರ: ಕಿಶೋರ್ ಪೆರಾಜೆ

ಭಾನುವಾರ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಶ್ರೀರಾಮವಿದ್ಯಾಕೇಂದ್ರದ ವಿದ್ಯಾರ್ಥಿಗಳ ಸಾಮೂಹಿಕ ಪ್ರದರ್ಶನ ದೆಹಲಿಯ ಗಣರಾಜ್ಯೋತ್ಸವದಲ್ಲಿ  ಪ್ರದರ್ಶನಗೊಳ್ಳುವುದರ ಮೂಲಕ ಭಾರತೀಯ ಸಂಸ್ಕೃತಿ  ರಾಷ್ಟ್ರಮಟ್ಟದಲ್ಲಿ ಅನಾವರಣಗೊಳ್ಳಬೇಕು ಎಂದರು.

ಜಾಹೀರಾತು

ಇಂತಹ ಕಾರ್ಯಕ್ರಮ ದೇಶದ ಎಲ್ಲಾ ಶಾಲೆಗಳಲ್ಲಿಯು ಅನುಷ್ಠಾನಗೊಳ್ಳಬೇಕೆ ಎಂದು ಆಶಯ ವ್ಯಕ್ತ ಪಡಿಸಿದರು.

ಜಾರ್ಖಂಡಿನ ಉದ್ಯಮಿ ಒಂಪ್ರಕಾಶ್ , ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನೇತ್ರತಜ್ಙ ಡಾ. ಕೃಷ್ಣ ಪ್ರಸಾದ್,  ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ  ಬರೋಡಾದ ಶಶಿಧರ ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಕತ್ತಲಸಾರ್ ,ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ರಹೀಂ ಉಚ್ಚಿಲ್, ಸಿನಿಮಾ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಬಳ್ಳಾರಿ ರಾಜಶೇಖರ ಮುಲಾನಿ, ವಿಹಿಪಂ.ನ ಶ್ರೀಧರ್ ನಾಡಿಗರ್ , ರಾಘವೇಂದ್ರ  ಶಾಸಕ ಹರೀಶ್ ಪೂಂಜಾ ಮಾತನಾಡಿದರು. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ,ರಾಜ್ಯದ ಸಚಿವೆ ಶಶಿಕಲಾ ಜೊಲ್ಲೆ, ಸಂಸದರಾದ ಉಮೇಶ್ ಜಾದವ್ , ಕೆ.ಸಿ.ರಾಮಮೂರ್ತಿ, , ಶಾಸಕರುಗಳಾದ  ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಅರವಿಂದ ಬೆಲ್ಲದ, ಪಿ.ರಾಜೀವ್ , ಪೂರ್ಣಿಮ  ಅಮೃತ ದೇಸಾಯಿ, ಅವಿನಾಶ್ ಜಾದವ್, ಉಮಾನಾಥ  ಕೋಟ್ಯಾನ್ , ಎಸ್.ಎಲ್.ಬೋಜೇಗೌಡ, ಅರುಣ್ ಜೋಶಿ , ಡಿಜಿಪಿ ಆಶಿತ್ ಮೋಹನ್ ಪ್ರಸಾದ್ ,  ಭ್ರಷ್ಟಾಚಾರ ನಿಗ್ರಹದಳದ ಐಜಿ ಚಂದ್ರಶೇಖರ್, ಜಿಲ್ಲಾ ಎಸ್ಪಿ  ಲಕ್ಷ್ನಿಪ್ರಸಾದ್ , ಸಿನೆಮಾ ನಟಿ ಪ್ರಣೀತಾ ಸುಭಾಷ್ , ಮಾಜಿ ಸಚಿವ ನಾಗರಾಜ ಶೆಟ್ಟಿ,  ಕೃಷ್ಣ ಪಾಲೇಮಾರ್,  ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಕ್ಯಾ.ಗಣೇಶ್ ಕಾರ್ಣಿಕ್ , ರಾಷ್ಟ್ರ ಸೇವಿಕಾದ ಸೀತಕ್ಕ. ನಿವೃತ್ತ ಪೊಲೀಸ್ ಅಧಿಕಾರಿ  ಜಯಂತ ಶೆಟ್ಟಿ, ಕಮಲಾ ಪ್ರಭಾಕರ ಭಟ್, ಟಿ.ಜಿ.ರಾಜಾರಾಮ  ಭಟ್, ಸುರೇಶ್ ಶೆಟ್ಟಿ ಗುರ್ಮೆ, ಎ.ಎಂ.ಖಾನ್,  ಎ.ವಿ.ರವಿ, ಪ್ರಕಾಶ್ ದಾಸನೂರು, ಭರತ್ ಜೈನ್, ಮಂಜುನಾಥ್ ಜಾರ್ಖಂಡ್,  ಪ್ರದೀಪ್ ಕುಮಾರ್ ಕಲ್ಕೂರ, ಜಗದೀಶ್ ಶೇಣವ, ಕ್ಯಾ.ಬ್ರಿಜೇಶ್ ಚೌಟ ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರು ಕ್ರೀಡೋತ್ಸವದಲ್ಲಿ ಭಾಗವಹಿಸಿದ್ದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್  ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ವಸಂತ ಮಾಧವ ಪ್ರಸ್ತಾವಿಸಿ, ಸ್ವಾಗತಿಸಿದರು.  ವಿದ್ಯಾಕೇಂದ್ರ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಹಸಂಚಾಲಕ ರಮೇಶ್,  ಪದವಿ ಕಾಲೇಜು ಪ್ರಿನ್ಸಿಪಾಲ್ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.