ಬಂಟ್ವಾಳ

ಮೃತಪಟ್ಟವರ ಕುಟುಂಬಕ್ಕೆ ಬಂಟ್ವಾಳದಲ್ಲಿ ಪರಿಹಾರ ವಿತರಣೆ

ಇತ್ತೀಚೆಗೆ ಕರೋಪಾಡಿ ಗ್ರಾಮದ ಒಡಿಯೂರು ಗುಡ್ಡ ಕುಸಿತದಿಂದ ಮೃತಪಟ್ಟವರಿಗೆ ಬೆಳ್ತಂಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಹಾರ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಮನವಿ ಮಾಡಿದ್ದು ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿ ವೇದಿಕೆಯಲ್ಲಿ ಪರಿಹಾರ ಘೋಷಿಸಿದ್ದರು.

ಜಾಹೀರಾತು

ಈ ಹಿನ್ನೆಲೆಯಲ್ಲಿ ಅವಘಡದಲ್ಲಿ ಮೃತಪಟ್ಟ ವಿಟ್ಲಪಡ್ನೂರು ಗ್ರಾಮದ ಕಾಪುಮಜಲು ನಿವಾಸಿಯಾದ ರಮೇಶ್ ಮಡಿವಾಳ ಎಂಬವರ ಪತ್ನಿ ಮೋಹಿನಿಯವರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ರೂ. ೩ ಲಕ್ಷದ ಪರಿಹಾರದ ಚೆಕ್‌ನ್ನು  ಶಾಸಕರ ಕಚೇರಿಯಲ್ಲಿ ಹಸ್ತಾಂತರಿಸಿದರು. ಗಾಯಾಳುಗೆ ರೂ.೧ ಲಕ್ಷ ಚೆಕ್‌ನ್ನು ಹಸ್ತಾಂತರಿಸಲಾಯಿತು. ಈ ಸಂಧರ್ಭದಲ್ಲಿ ವಿಟ್ಲಪಡ್ನೂರು ಪಂ.ಅಧ್ಯಕ್ಷ ರವೀಶ್ ಶೆಟ್ಟಿ,  ಸದಸ್ಯರಾದ ನಾಗೇಶ್ ಶೆಟ್ಟಿ, ಅಭಿಷೇಕ್ ರೈ, ಕಂದಯ ನಿರೀಕ್ಷಕರಾದ ದಿವಾಕರ್, ವಿಶ್ವನಾಥ ಉಪಸ್ಥಿತರಿದ್ದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts