ಬಂಟ್ವಾಳ

ಸಹಕಾರ ಧುರೀಣ, ಪಕ್ಷಾತೀತವಾಗಿ ಜನಪ್ರಿಯರಾಗಿದ್ದ ದಣಿವರಿಯದ ಸ್ವಯಂಸೇವಕ ಆನಂದಣ್ಣ

ಬಂಟ್ವಾಳದ ಜನಮಾನಸದಲ್ಲಿ ಪಕ್ಷಾತೀತವಾಗಿ ಅನಂದಣ್ಣ ಎಂದೇ ಚಿರಪರಿಚಿತವಾದ ಸಹಕಾರಿ ಧುರೀಣ ಹಿರಿಯ ರಾಜಕಾರಣಿ ದಕ್ಷಿಣ ಕನ್ನಡ ಬಿಜೆಪಿಯ ಉಪಾಧ್ಯಕ್ಷ ಜಿ ಅನಂದಣ್ಣ ಇನ್ನಿಲ್ಲ. 

ಯಶಸ್ವಿ ಟೈಲರ್ ಉದ್ಯಮ ನಡೆಸುತ್ತಿದ್ದ ಜಿ ಅನಂದ. ಆನಂದಣ್ಣ ಎಂದೇ ಪ್ರಸಿದ್ಧಿ.  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷ್ಠಾವಂತ ಸ್ವಯಂಸೇವಕ. 1970ರ  ತುರ್ತುಪರಿಸ್ಥಿತಿಯ ಕಾಲಘಟ್ಟದಲ್ಲಿ ಹೋರಾಟಕ್ಕೆ ಧುಮುಕಿ ಸಮಾಜಕ್ಕೆ ಪ್ರೇರಣೆಯನ್ನು ನೀಡಿದವರು.

ಜನಸಂಘದ ಮೂಲಕ ರಾಜಕಾರಣಕ್ಕೆ ಪ್ರವೇಶ ಪಡೆದ ಅವರು, ಬಂಟ್ವಾಳ ತಾಲೂಕಿನ ಕಕ್ಕೆ ಪದವಿನಿಂದ ಮಂಗಳೂರಿನ ಗುರುಪುರದವರೆಗೆ ಲ್ಯಾಂಬಿ ಸ್ಕೂಟರ್ ನಲ್ಲಿ ಸಂಚರಿಸಿ ಭಾರತೀಯ ಜನತಾ ಪಕ್ಷವನ್ನು ಸಂಘಟಿಸಿದ್ದರು.

ಎರಡು ಬಾರಿ ಬಂಟ್ವಾಳ ಪುರಸಭೆಯ ಸದಸ್ಯರಾಗಿ ಜವಬ್ದಾರಿ ನಿರ್ವಹಿಸಿದ ಇವರು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಭದ್ರ ತಳಪಾಯ ಹಾಕಿಕೊಟ್ಟವರು. ಬಿಜೆಪಿ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಎರಡು ಅವಧಿಯಲ್ಲಿ ಕ್ಷೇತ್ರ ಸಮಿತಿಯ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ ಇವರು ಅಸಂಖ್ಯಾತ ಕಾರ್ಯಕರ್ತರನ್ನು ನಾಯಕರನ್ನಾಗಿ ಜನಪ್ರತಿನಿಧಿಗಳಾಗಿ ಬೆಳೆಸಿದರು.

1990 ದಶಕದ ಅಯೋದ್ಯ ಹೋರಾಟದಲ್ಲಿ ಕರಸೇವಕರಾಗಿ ಬಾಗಿಯಾಗಿದ್ದ ಅನಂದಣ್ಣ 2017 ರಲ್ಲಿ ಮುಖ್ಯಮಂತ್ರಿ ಗಳಾದ ಬಿ ಎಸ್ ಯಡಿಯೂರಪ್ಪ ನವರ ನೇತ್ರತ್ವದ ಪರಿವರ್ತನಾ ಯಾತ್ರೆ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಅಗಮಿಸಿದಾಗ ನಗರ ಅಲಂಕಾರಕ್ಕೆ ಬೇಕಾದ ಭಾರತೀಯ ಜನತಾ ಪಕ್ಷದ ಧ್ವಜಗಳನ್ನು ತಮ್ನ ಕೈಯಾರೆ ಸಿದ್ದಪಡಿಸಿ ನಗರ ಅಲಂಕಾರವನ್ನು ಮಾಡಿದವರು

ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಣಿಯೂರು ಶಕ್ತಿ ಕೇಂದ್ರದ ಪ್ರಭಾರಿಗಳಾಗಿ ಇಳಿ ವಯಸ್ಸಿನಲ್ಲೂ ಪಕ್ಷದ ಚಟುವಟಿಕೆಯಲ್ಲಿ ಕ್ರೀಯಾಶಿಲಾವಾಗಿ ಬಾಗಿಯಾಗಿದ್ದರು ದಕ್ಷಿಣ ಕನ್ನಡ ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷರಾಗಿ ಪ್ರಸ್ತುತ ಜವಬ್ದಾರಿ ನಿರ್ವಹಿಸುತ್ತಿದ್ದ ಅನಂದಣ್ಣ ಮೂರು ಅವಧಿಯಲ್ಲಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts