ಬಂಟ್ವಾಳ

ಶಾಲೆಗಳ ಶಿಥಿಲ ಕೊಠಡಿಗಳ ದುರಸ್ತಿ, ಮರುನಿರ್ಮಾಣಕ್ಕೆ 2.66 ಕೋಟಿ ರೂ ಅನುದಾನ

  • ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಶಿಫಾರಸು, ಶಿಕ್ಷಣ ಸಚಿವ ಸುರೇಶ್ ಕುಮಾರ್ ಬಿಡುಗಡೆ

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳ ಮರುನಿರ್ಮಾಣ ಹಾಗೂ ದುರಸ್ಥಿ ಕಾಮಗಾರಿಗಳಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಶಿಪಾರಸ್ಸಿನ ಮೇರೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ  ಸುರೇಶ್ ಕುಮಾರ್ ಈ ಕೆಳಗಿನ ಪಟ್ಟಿಯಲ್ಲಿರುವ ಶಾಲೆಗಳಿಗೆ ರೂ 2ಕೋಟಿ 66ಲಕ್ಷ ಅನುದಾನ ಬಿಡುಗಡೆಗೊಳಿಸಿದ್ದಾರೆ.

ವಿವರ ಹೀಗಿದೆ.

ಗೋಳ್ತಮಜಲು ಗ್ರಾಮದ ಸ.ಹಿ.ಪ್ರಾ.ಸಾಲೆ ಗೋಳ್ತಮಜಲು 8.5 ಲಕ್ಷ ರೂ., ಬಿ.ಮೂಡ ಗ್ರಾಮದ ಸ.ಹಿ.ಪ್ರ.ಶಾಲೆ ಬಿ.ಮೂಡ 8 ಲಕ್ಷ ರೂ., ಅಮ್ಮುಂಜೆ ಗ್ರಾಮದ ಸ.ಹಿ.ಪ್ರಾ.ಶಾಲೆ ಬೆಂಜನಪದವು 2.5 ಲಕ್ಷ ರೂ., ಕಾವಳಪಡೂರು ಗ್ರಾಮದ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮಧ್ವ 2.5 ಲ ರೂ., ಪಾಣೆಮಂಗಳೂರು ಗ್ರಾಮದ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಪಾಣೆಮಂಗಳೂರು -6 ಲಕ್ಷ ರೂ., ಕೊಯಿಲ ಗ್ರಾಮದ ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಕೊಯಿಲ 3 ಲಕ್ಷ ರೂ., ಪೆರಾಜೆ ಗ್ರಾಮದ ದ.ಕ.ಜಿ.ಪ.ಹಿ.ಪ್ರಾ.ಶಾಲೆ ಪೆರಾಜೆ 5 ಲಕ್ಷ ರೂ., ಬಂಟ್ವಾಳ ಕಸ್ಬಾ ಗ್ರಾಮದ ಸ.ಹಿ.ಪ್ರಾ.ಶಾಲೆ ಕುದನೆಗುಡ್ಡೆ 3 ಲಕ್ಷ ರೂ., ಕನ್ಯಾನ ಗ್ರಾಮದ ಸ.ಕಿ.ಪ್ರಾ.ಶಾಲೆ ಅಂಗ್ರಿ 6 ಲಕ್ಷ ರೂ., ಕನ್ಯಾನ ಗ್ರಾಮದ ಸ.ಕಿ.ಪ್ರಾ.ಶಾಲೆ ಮಂಡ್ಯೂರು 5.5 ಲಕ್ಷ ರೂ., ಕನ್ಯಾನ ಗ್ರಾಮದ ಸ.ಹಿ.ಪ್ರಾ.ಶಾಲೆ ಕಣಿಯೂರು 3 ಲಕ್ಷ ರೂ. ಬಿಡುಗಡೆಯಾಗಿವೆ.
ಚೆನ್ನೈತ್ತೋಡಿ ಗ್ರಾಮದ ಸ.ಹಿ.ಪ್ರಾ.ಶಾಲೆ ಶಿವನಗರ 2.5 ಲಕ್ಷ ರೂ., ಮಣಿನಾಲ್ಕೂರು ಗ್ರಾಮದ ಸ.ಹಿ.ಪ್ರಾ.ಶಾಲೆ ಮಣಿನಾಲ್ಕೂರು 6.5 ಲಕ್ಷ ರೂ., ಕಡೇಶ್ವಾಲ್ಯ ಗ್ರಾಮದ ಸ.ಹಿ.ಪ್ರಾ.ಶಾಲೆ ಶೇರಾ 6.5 ಲಕ್ಷ ರೂ., ಅನಂತಾಡಿ ಗ್ರಾಮದ ಸ.ಕಿ.ಪ್ರಾ.ಶಾಲೆ ಬಂಟ್ರಿಂಜ 6.,5 ಲಕ್ಷ ರೂ., ಸಾಲೆತ್ತೂರು ಗ್ರಾಮದ ಸ.ಹಿ.ಪ್ರಾ.ಶಾಲೆ ಸಾಲೆತ್ತೂರು 15 ಲಕ್ಷ ರೂ., ಕೊಳ್ನಾಡು ಗ್ರಾಮದ ಸ.ಹಿ.ಪ್ರಾ.ಸಾಲೆ ತಾಳಿತ್ತನೂಜಿ 10 ಲಕ್ಷ ರೂ., ಮಂಚಿ ಗ್ರಾಮದ ಸ.ಹಿ.ಪ್ರಾ.ಶಾಲೆ ಕಜೆ 5.5 ಲಕ್ಷ ರೂ., ಸಾಲೆತ್ತೂರು ಗ್ರಾಮದ ಸ.ಹಿ.ಪ್ರಾ.ಶಾಲೆ ಬೊಳ್ಮಾರು 5 ಲಕ್ಷ ರೂ., ಕರಿಯಂಗಳ ಗ್ರಾಮದ ಸ.ಹಿ.ಪ್ರಾ.ಶಾಲೆ ಪಲ್ಲಿಪಾಡಿ 3 ಲಕ್ಷ ರೂ. ಬಿಡುಗಡೆಯಾಗಿವೆ.
ಮಂಚಿ ಗ್ರಾಮದ ಸ.ಹಿ.ಪ್ರಾ.ಶಾಲೆ ಪುದೊಟ್ಟು 6.5 ಲಕ್ಷ  ರೂ., ಮಂಚಿ ಗ್ರಾಮದ ಸ.ಹಿ.ಪ್ರಾ.ಶಾಲೆ ಮಂಚಿ ಕುಕ್ಕಾಜೆ 9 ಲಕ್ಷ  ರೂ., ಕೊಳ್ನಾಡು ಗ್ರಾಮದ ಸ.ಕಿ.ಪ್ರಾ.ಶಾಲೆ ಖಂಡಿಗ 2 ಲಕ್ಷ  ರೂ., ಕೊಳ್ನಾಡು ಗ್ರಾಮದ ಸ.ಹಿ.ಪ್ರಾ.ಶಾಲೆ ನಾರ್ಶ ಮೈದಾನ 8 ಲಕ್ಷ  ರೂ., ಸಜಿಪಮೂಡ ಗ್ರಾಮದ ಸ.ಕಿ.ಪ್ರಾ.ಶಾಲೆ ಕೋಮಾಲೆ 1.5 ಲಕ್ಷ ರೂ.,
ನೆಟ್ಲಮುಡ್ನೂರು ಗ್ರಾಮದ ಸ.ಹಿ.ಪ್ರಾ.ಶಾಲೆ ನೇರಳಕಟ್ಟೆ 5 ಲಕ್ಷ ರೂ., ಕನ್ಯಾನ ಗ್ರಾಮದ ಸ.ಹಿ.ಪ್ರಾ ಶಾಲೆ ದೇಲಂತಬೆಟ್ಟು 5.5 ಲಕ್ಷ  ರೂ., ಕಡೇಶ್ವಾಲ್ಯ ಗ್ರಾಮದ ಸ.ಹಿ.ಪ್ರಾ.ಶಾಲೆ ಕೆಮ್ಮಾನುಪಲ್ಕೆ 6 ಲಕ್ಷ  ರೂ., ಬಡಗಕಜೆಕಾರು ಗ್ರಾಮದ ಸ.ಹಿ.ಪ್ರಾ.ಶಾಲೆ ಬಡಗಕಜೆಕಾರು 10 ಲಕ್ಷ ರೂ., ಬಡಗಕಜೆಕಾರು ಗ್ರಾಮದ ಸ.ಹಿ.ಪ್ರಾ.ಶಾಲೆ ಪಾಂಡವರಕಲ್ಲು 5 ಲಕ್ಷ  ರೂ., ಚೆನ್ನೈತ್ತೋಡಿ ಗ್ರಾಮದ ಸ.ಹಿ.ಪ್ರಾ.ಶಾಲೆ ಶಿವನಗರ ಮಾವಿನಕಟ್ಟೆ 2.5 ಲಕ್ಷ ರೂ. ಬಿಡುಗಡೆಯಾಗಿವೆ.
ಬಿ.ಮೂಡ ಗ್ರಾಮದ ಸ.ಪ್ರೌ.ಶಾಲೆ ಅಜ್ಜಿಬೆಟ್ಟು ಬಿ.ಮೂಡ  6 ಲಕ್ಷ ರೂ., ಅಮ್ಮುಂಜೆ ಗ್ರಾಮದ ಸ.ಪ್ರೌ.ಶಾಲೆ ಬೆಂಜನಪದವು 13 ಲಕ್ಷ ರೂ., ಕಾವಳಪಡೂರು ಗ್ರಾಮದ ಸ.ಪ್ರೌ.ಶಾಲೆ ಕಾವಳಪಡೂರು, ವಗ್ಗ 5 ಲಕ್ಷ ರೂ., ಸಂಗಬೆಟ್ಟು ಗ್ರಾಮದ ಸ.ಪ್ರೌ.ಶಾಲೆ ಸಿದ್ದಕಟ್ಟೆ 20 ಲಕ್ಷ ರೂ., ಪಿಲಾತಬೆಟ್ಟು ಗ್ರಾಮದ ಸ.ಪ್ರೌ.ಶಾಲೆ ನಯನಾಡು 3 ಲಕ್ಷ ರೂ., ಕಾವಳಮೂಡೂರು ಗ್ರಾಮದ ಸ.ಪ್ರೌ.ಶಾಲೆ ಕಾವಲಕಟ್ಟೆ 5.5 ಲಕ್ಷ ರೂ., ಬಿ.ಮೂಡ ಗ್ರಾಮದ ಸ.ಪ್ರೌ.ಶಾಲೆ ಕೊಡಂಗೆ 2.5 ಲಕ್ಷ ರೂ., ಮಣಿನಾಲ್ಕೂರು ಗ್ರಾಮದ  ಸ.ಪ.ಪೂ.ಕಾ (ಪ್ರೌಢಶಾಲಾ ವಿಭಾಗ) ಮಣಿನಾಲ್ಕೂರು 12 ಲಕ್ಷ ರೂ., ಚೆನ್ನೈತ್ತೋಡಿ ಗ್ರಾಮದ ಸ.ಪ.ಪೂ,ಕಾ (ಪ್ರೌಢಶಾಲಾ ವಿಭಾಗ) ವಾಮದಪದವು 25 ಲಕ್ಷ ರೂ. ಬಿಡುಗಡೆಯಾಗಿವೆ.

www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts