ಅಯೋಧ್ಯೆಗೆ 1990-92ರಲ್ಲಿ ಕರಸೇವೆಗಾಗಿ ತೆರಳಿದವರನ್ನು ಹಿಂದು ಜಾಗರಣಾ ವೇದಿಕೆ ವಿಟ್ಲ ತಾಲೂಕು ಆಶ್ರಯದಲ್ಲಿ ಅಭಿನಂದಿಸುವ ಕಾರ್ಯಕ್ರಮ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಶುಕ್ರವಾರ ಸಂಜೆ ನಡೆಯಿತು.
ಕರಸೇವಕರ ಬಲಿದಾನ ಹೋರಾಟದ ಫಲವಾಗಿ ಹಿಂದೂಗಳ ಶ್ರದ್ಧಾ ಕೇಂದ್ರ ಅಯೋಧ್ಯೆಯನ್ನು ಮರಳಿ ಪಡೆಯುವಂತಾಗಿದೆ. ಹಿಂದುಗಳು ನಿಜವಾದ ಜಾತ್ಯತೀತರು ಎಂದು ಈ ಸಂದರ್ಭ ರಾಷ್ಟ್ರೀಯ ಸ್ವಯಂ ಸಂಘದ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ ಧಾರ್ಮಿಕ ಶ್ರದ್ಧಾಬಿಂದುವಿಗಾಗಿ ಹಲವರು ಪ್ರಾಣಾರ್ಪಣೆ ಮಾಡಿದ್ದಾರೆ. ಅಯೋಧ್ಯೆ ಹಿಂದುಗಳ ಶ್ರದ್ಧಾಕೇಂದ್ರ, ಶ್ರೀರಾಮನೇ ಆದರ್ಶ ಪುರುಷೋತ್ತಮ ಎಂದರು.
1990 ಅ.10 ರಂದು ಅಯೋಧ್ಯೆ ಕರಸೇವೆಗೆ ಹೋದವರಿಗೆ ಡಾ| ಕಲ್ಲಡ್ಕ ಪ್ರಭಾಕರ ಭಟ್ ಬರೆದ ಪೋಸ್ಟ್ ಕಾರ್ಡ್ ಪತ್ರವನ್ನು ಅಯೋಧ್ಯೆ ಕರಸೇವೆಗೆ ಹೋಗಿದ್ದ ಪುತ್ತೂರು ಜಿಲ್ಲಾ ಸಂಘ ಚಾಲಕ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಸಭೆಯಲ್ಲಿ ಓದಿ ಹೇಳಿದರು.
ಕರಸೇವಕರಾಗಿ ಅಯೋಧ್ಯೆಗೆ ಹೋಗಿದ್ದ ಸುಬ್ರಹ್ಮಣ್ಯ ಭಟ್ ಕೆದಿಲ, ಸರಪಾಡಿ ಅಶೋಕ ಶೆಟ್ಟಿ ತಮ್ಮ ಅನುಭವವನ್ನು ಹಂಚಿಕೊಂಡರು. ಹಿಂಜಾವೇ ಪ್ರಮುಖ ರಾಧಾಕೃಷ್ಣ ಅಡ್ಯಂತಾಯ ಪ್ರಾಸ್ತಾವಿಕ ಮಾತನಾಡಿ ಕರಸೇವಕರ ಹೋರಾಟದ ಫಲವಾಗಿ ಇಂದು ಪ್ರಭು ಶ್ರೀರಾಮಚಂದ್ರನ ಜನ್ಮ ಭೂಮಿ ಅಯೋಧ್ಯೆಯು ಹಿಂದುಗಳಿಗೆ ಸಿಗುವಂತಾಗಿದೆ ಎಂದರು.
೯ ಮಂದಿ ಮಹಿಳೆಯರ ಸಹಿತ 110 ಕರಸೇವಕರನ್ನು ಕೇಸರಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ರಾಜಶೇಖರಾನಂದ ಸ್ವಾಮೀಜಿ ಆಶೀರ್ವದಿಸಿದರು. ಕರಸೇವಕರಾಗಿ ಭಾಗವಹಿಸಿದ ಪ್ರಮುಖರಾದ ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಎ. ರುಕ್ಮಯ ಪೂಜಾರಿ, ರವೀಂದ್ರ ಕಂಬಳಿ, ಚೆನ್ನಪ್ಪ ಕೋಟ್ಯಾನ್, ಬಿ.ಟಿ. ನಾರಾಯಣ ಭಟ್, ಸುಗುಣಾ ಕಿಣಿ, ನಾರಾಯಣ ಶೆಟ್ಟಿ ಕೊಂಬಿಲ, ಸುಂದರ ಭಂಡಾರಿ ರಾಯಿ, ನಾರಾಯಣ ಸಪಲ್ಯ ಕಡೇಶ್ವಾಲ್ಯ, ಡೊಂಬಯ ಟೈಲರ್ P ಲ್ಲಡ್ಕ, ತನಿಯಪ್ಪ ಗೌಡ ವಿಟ್ಲಮುಡ್ನೂರು, ಯಶವಂತ ಪ್ರಭು ನೇರಳಕಟ್ಟೆ ಸಹಿತ ಇತರ ಪ್ರಮುಖರು ಪಾಲ್ಗೊಂಡಿದ್ದರು. ವಿಹಿಂಪ ವಿಟ್ಲ ತಾಲೂಕು ಅಧ್ಯಕ್ಷ ಕ. ಕೃಷ್ಣಪ್ಪ, ಹಿಂಜಾವೇ ಜಿಲ್ಲಾ ಸಂಚಾಲಕ ರತ್ಮಾಕರ ಶೆಟ್ಟಿ ಉಪಸ್ಥಿತರಿದ್ದರು.
ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ಅಧ್ಯಕ್ಷ ನರಸಿಂಹ ಶೆಟ್ಟಿ ಮಾಣಿ ಸ್ವಾಗತಿಸಿ, ಹಿಂಜಾವೇ ಸಂಘಟನಾ ಕಾರ್ಯದರ್ಶಿ ಮನೋಜ್ ಪೆರ್ನೆ ವಂದಿಸಿದರು.ವಿಭಾಗ ಸಂಯೋಜಕ ಗಣರಾಜ ಭಟ್ ಕೆದಿಲ ಕಾರ್ಯಕ್ರಮ ನಿರ್ವಹಿಸಿದರು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127