ವಾಮದಪದವು

ಹೊಕ್ಕಾಡಿಗೋಳಿ: ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

ತುಳುನಾಡಿನಲ್ಲಿ ಅನಾದಿ ಕಾಲದಿಂದ ಕೖಷಿಕರು ನಡೆಸಿಕೊಂಡು ಬರುತ್ತಿರುವ ಸಾಂಪ್ರದಾಯಿಕ ಮತ್ತು ಅಹಿಂಸಾತ್ಮಕ ಕಂಬಳ ವಿಶೇಷ ಧಾಮಿ೯ಕ ನಂಟು ಮತ್ತು ನಂಬಿಕೆ ಆಧಾರದಲ್ಲಿ ನಡೆಯುತ್ತಿದೆ ಎಂದು ಪೂಂಜ  ಶ್ರೀ ಪಂಚದುಗಾ೯ಪರಮೇಶ್ವರಿ ಕ್ಷೇತ್ರದ ಅಸ್ರಣ್ಣ ಕೖಷ್ಣ ಪ್ರಸಾದ್ ಆಚಾರ್ಯ ಹೇಳಿದ್ದಾರೆ.

ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿನ ಗಡಿ ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕಂಬಳ ಸಮಿತಿ ಅಧ್ಯಕ್ಷ ನೋಣಾಲುಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ ಕೂಳೂರು ಪೊಯ್ಯೊಲು ಮಾತನಾಡಿ, ಸುಪ್ರೀಂ ಕೋಟಿ೯ನ ನಿದೇ೯ಶನದಂತೆ ಜಿಲ್ಲೆಯಲ್ಲಿ ಅಹಿಂಸಾತ್ಮಕ ಕಂಬಳ ನಡೆಸಲು ಜಿಲ್ಲಾ ಸಮಿತಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಶಿಸ್ತು ಮತ್ತು ನಿಯಮಾವಳಿ ಉಲ್ಲಂಘಿಸಿದ ಕೋಣಗಳನ್ನು ಮುಂದಿನ ಕಂಬಳದಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂದು ಅವರು  ಎಚ್ಚರಿಸಿದರು.

ಜಿಲ್ಲಾ ಸಮಿತಿ ನಿಕಟಪೂವ೯ ಕಾಯ೯ದಶಿ೯ ವಿಜಯ ಕುಮಾರ್ ಕಂಗಿನಮನೆ ಮಾತನಾಡಿ, ಶಿಸ್ತುಬದ್ಧ ಕಂಬಳಕ್ಕೆ ರಾಜ್ಯ ಮತ್ತು ಕೇಂದ್ರ ಸಕಾ೯ರದ ಬೆಂಬಲವೂ ಸಿಗಲಿದೆ ಎಂದರು. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಡ್ತೂರು ರಾಜೀವ ಶೆಟ್ಟಿ,

ಎಪಿಎಂಸಿ ಮಾಜಿ ಸದಸ್ಯ ರತ್ನಕುಮಾರ್ ಚೌಟ, ಸ್ಥಳೀಯ ವೈದ್ಯರಾದ ಡಾ.ಸುದೀಪ್ ಕುಮಾರ್ ಜೈನ್, ಉದ್ಯಮಿ ಟಿ.ನರಸಿಂಹ ಪೈ ಮಾವಿನಕಟ್ಟೆ, ದಿನೇಶ ಮೈಂದಬೆಟ್ಟು ರಾಯಿ ಮತ್ತಿತರರು ಶುಭ ಹಾರೈಸಿದರು.

ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು, ಗ್ರಾ.ಪಂ.ಅಧ್ಯಕ್ಷ ಪ್ರಭಾಕರ ಎಚ್. ಹುಲಿಮೇರು, ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ, ಸಮಿತಿ ಗೌರವ ಸಲಹೆಗಾರರಾದ ಬಾಬು ರಾಜೇಂದ್ರ ಶೆಟ್ಟಿ ಅಜ್ಜಾಡಿ, ಕಿರಣ್ ಕುಮಾರ್ ಮಂಜಿಲ, ಪದಾಧಿಕಾರಿಗಳಾದ ಎಚ್.ಹರೀಶ ಹಿಂಗಾಣಿ, ಸಂದೇಶ ಶೆಟ್ಟಿ ಪೊಡುಂಬ, ಪುಷ್ಪರಾಜ್ ಜೈನ್ ನಡ್ಯೋಡಿ, ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ರಾಜೇಶ ಶೆಟ್ಟಿ ಕೊನೆರೊಟ್ಟು, ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಜನಾರ್ದನ  ಬಂಗೇರ ತಿಮರಡ್ಕ, ನಿತ್ಯಾನಂದ ಪೂಜಾರಿ ಕೆಂತಲೆ, ಕೖಷ್ಣ ಶೆಟ್ಟಿ ಉಮನೊಟ್ಟು ಮತ್ತಿತರರು ಸಹಿತ  ಸ್ಥಳದಾನಿಗಳು ಇದ್ದರು.

ಸಮಿತಿ ಗೌರವ ಸಲಹೆಗಾರ ವಕೀಲ ಸುರೇಶ ಶೆಟ್ಟಿ ಸ್ವಾಗತಿಸಿ, ಪ್ರಚಾರ ಸಮಿತಿ ಸಂಚಾಲಕ ಮೋಹನ್ ಕೆ.ಶ್ರೀಯಾನ್ ರಾಯಿ ವಂದಿಸಿದರು.

www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts

ಬಿ.ಸಿ.ರೋಡ್ ನಲ್ಲಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…

10 hours ago