ಬಂಟ್ವಾಳ

ಆಧಾರ್ ತಿದ್ದುಪಡಿ ಸರಳೀಕರಿಸಿ, ಗ್ರಾಮಮಟ್ಟದಲ್ಲಿ ಕೇಂದ್ರ ತೆರೆಯಿರಿ

  • ಡಿವೈಎಫ್ ಐ ಬಂಟ್ವಾಳ ತಾಲೂಕು ಸಮಿತಿಯಿಂದ ಸರಕಾರಕ್ಕೆ ಮನವಿ

www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127

ಆಧಾರ್ ಕೇಂದ್ರಗಳನ್ನು ಗ್ರಾಮಮಟ್ಟದಲ್ಲಿ ತೆರೆಯಬೇಕು ಹಾಗೂ ಆಧಾರ್ ಕಾರ್ಡ್ ನಲ್ಲಿ ತಿದ್ದುಪಡಿಗಳನ್ನು ಸರಳೀಕರಿಸಲು ಆಗ್ರಹಿಸಿ ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಉಪತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ನೀಡಲಾಯಿತು.

ಜಾಹೀರಾತು

ನಿಯೋಗದಲ್ಲಿ ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಸುರೇಂದ್ರ ಕೋಟ್ಯಾನ್ , ಕಾರ್ಯದರ್ಶಿ ತುಳಸೀದಾಸ್ ವಿಟ್ಲ, ಮುಖಂಡರಾದ ಸಾಧಿಕ್ ಬಂಟ್ವಾಳ, ಶೌಕತ್ ಆಲಿ ಖಾನ್ , ಸಾಮಾಜಿಕ ಕಾರ್ಯಕರ್ತರಾದ ಸಮದ್ ಬಿ.ಸಿ.ರೋಡ್ , ಇಸ್ಮಾಯಿಲ್ ಅರಬಿ ಬಂಟ್ವಾಳ ಮುಂತಾದವರಿದ್ದರು.

ಇಂದು ಆಧಾರ್ ಕಾರ್ಡ್ ಪ್ರತಿಯೊಬ್ಬರಿಗೂ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಅಗತ್ಯವಾಗಿ ಬೇಕಾಗಿದೆ . ಸಾರ್ವಜನಿಕರು ಆಧಾರ್   ಕಾರ್ಡ್ ತಿದ್ದುಪಡಿ ಮಾಡಲು ಹಾಗೂ ಹೊಸ ಆಧಾರ್ ಕಾರ್ಡ್ ಮಾಡಿಸಲು ಹಲವಾರು  ಸಂಕಷ್ಟಗಳನ್ನು ಎದುರಿಸುವಂತಾಗಿದೆ. ಆಧಾರ್ ಕೇಂದ್ರಗಳು ನಾಡ ಕಚೇರಿ ಮತ್ತು ತಾಲೂಕು ಕೇಂದ್ರಗಳಲ್ಲಿ ಮಾತ್ರ ಇರುವುದರಿಂದ ಸಾರ್ವಜನಿಕರು ಆಧಾರ್ ತಿದ್ದುಪಡಿ ಹಾಗೂ ಆಧಾರ್ ಕಾರ್ಡ್ ಮಾಡಿಸಲು ಹಲವಾರು ಸಮಯ ಕಾಯಬೇಕಾದ ಪರಿಸ್ಥಿತಿ ಇದೆ. ಸರಕಾರದ ಎಲ್ಲಾ ಸೌಲಭ್ಯ ಗಳು ಕಟ್ಟಡ ಕಾರ್ಮಿಕರ ನೋಂದಾವಣಿ ಹಾಗೂ ಬೀಡಿ ಕಾರ್ಮಿಕರ ಪಿ.ಎಫ್ ಹಣ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಹಾಗೂ ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ಸಂಖ್ಯೆ ಕಡ್ಡಾಯವಾಗಿದೆ. ಇಂದು ಹೆಚ್ಚಿನವರ ಆಧಾರ್ ಕಾರ್ಡ್‌ನಲ್ಲಿ ಜನನ ದಿನಾಂಕ ಹಾಗೂ ಹೆಸರು ತಪ್ಪಾಗಿರುತ್ತದೆ. ಹಾಗೂ ಮೊಬೈಲ್ ಸಂಖ್ಯೆ ನೋಂದಾವಣಿ ಆಗಿರುವುದಿಲ್ಲ ಇದರಿಂದಾಗಿ ಹೆಚ್ಚಿನ ಸಾರ್ವಜನಿಕರು ತೀವ್ರ ತೊಂದರೆಗೆ ಒಳಗಾಗಿದ್ದಾರೆ ಎಂದು ಮುಖಂಡರು ತಿಳಿಸಿದರು.

ಎಲ್ಲಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ಆಧಾರ್ ಕೇಂದ್ರವನ್ನು ತೆರೆಯಬೇಕು. ಜನ್ಮ ದಿನಾಂಕ ಹಾಗೂ ಇತರೆ ತಿದ್ದುಪಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಲು ಜನಸೇವಾ ಕೇಂದ್ರ ಅಥವಾ ಇತರ ಆನ್‌ಲೈನ್ ಸೆಂಟರ್ ಗಳಿಗೆ ಅವಕಾಶ ನೀಡಬೇಕು. ಜನ್ಮ ದಿನಾಂಕ ತಿದ್ದುಪಡಿಗೆ ಇರುವ ನಿಯಾಮಾವಳಿಗಳನ್ನು ಸರಳೀಕರಿಸಬೇಕು ಎಂದು ಬೇಡಿಕೆ ಸಲ್ಲಿಸಲಾಯಿತು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.