ಹಿಂದುಳಿದ ಜಾತಿ ಸಮುದಾಯಗಳು ಗ್ರಾಮೀಣ ಸಂಘಟನೆಯ ಮೂಲಕ ಬಲಯುತವಾದಾಗ ಸಮಾಜ ಇನ್ನಷ್ಟು ಬಲಿಷ್ಠವಾಗಲು ಸಾಧ್ಯ ಎಂದು ದ.ಕ. ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಅಭಿಪ್ರಾಯಪಟ್ಟರು.
ಇರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇರಾ ಕಲ್ಲಾಡಿ ಮಲೆಯಾಳಿ ಬಿಲ್ಲವ ಸೇವಾ ಸಂಘ, ಯುವ ವೇದಿಕೆ ಹಾಗೂ ಮಹಿಳಾ ವೇದಿಕೆಯ ವಾರ್ಷಿಕೋತ್ಸವ ಸಮಾರಂಭವನ್ನು ಸತೀಶ್ ಕುಂಪಲ ಉದ್ಘಾಟಿಸಿದರು.
ಮಲೆಯಾಳಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಯುವ ಸಂಶೋಧಕ ಅರುಣ್ ಉಳ್ಳಾಲ್ ಅವರನ್ನು ಸಮ್ಮಾನಿಸಲಾಯಿತು.
ಗ್ರಾಮೀಣ ರಂಗದಲ್ಲಿ ಯಶಸ್ವಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಜಯಂತಿ ಗೋಪಾಲ್ ಆಚಾರ್ಯ, ಎಸ್‌ಎಸ್‌ಎಲ್‌ಸಿಯಲ್ಲಿ ಅಧಿಕ ಅಂಕ ಗಳಿಸಿದ ವೀಕ್ಷಾ ಕುರಿಯಾಡಿ, ಚಿತ್ರಕಲೆಯಲ್ಲಿ ಅಂತಾರಾಷ್ಟ್ರೀಯ ಸಾಧನೆ ಮಾಡಿದ ಧನುಶ್ ಡಿ.ಸೂತ್ರಬೈಲ್ ಹಾಗೂ ಕಬಡ್ಡಿಯಲ್ಲಿ ಸಾಧನೆ ಮಾಡಿದ ವಂಶಿತ್ ಸಂಪಿಲ ಅವರನ್ನು ಗೌರವಿಸಲಾಯಿತು.
ಲಯನ್ಸ್ ಕ್ಲಬ್ ಪ್ರಮುಖರಾದ ಉಷಾ ಪ್ರಭಾಕರ್ ಯೆಯ್ಯಾಡಿ, ಮಂಗಳೂರಿನ ಮೂಕಾಂಬಿಕ ಕನ್‌ಸ್ಟ್ರಕ್ಷನ್ ಪ್ರಮುಖರಾದ ಚಂದ್ರಹಾಸ್ ಪಂಡಿತ್‌ಹೌಸ್, ಚಲನಚಿತ್ರ ನಿರ್ಮಾಪಕ ಪಮ್ಮಿ ಕೊಡಿಯಾಲ್‌ಬೈಲ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಮಲೆಯಾಳಿ ಬಿಲ್ಲವ ಸೇವಾ ಸಂಘದ ಮಾಜಿ ಅ‘ಕ್ಷ ಎಚ್.ತನಿಯಪ್ಪ ಹಲಸಿನಡಿ, ಪ್ರಮುಖರಾದ ನಾಗೇಶ್ ಗುರಿಕಾರ, ಸತೀಶ್ ಗುರಿಕಾರ, ಯುವ ವೇದಿಕೆ ಅಧ್ಯಕ್ಷ ದಾಮೋದರ ಡಿ.ಇರಾ, ಮಹಿಳಾ ವೇದಿಕೆ ಅಧ್ಯಕ್ಷೆ ಆಶಾಲತಾ ವಿಜಯ್ ಸುವರ್ಣಬೈಲ್ ಉಪಸ್ಥಿತರಿದ್ದರು.
ವೈ.ಬಿ.ಸುಂದರ್ ಇರಾ ಸಮ್ಮಾನಿತರ ವಿವರ ಓದಿದರು. ರಿತೇಶ್ ಡಿ. ಸ್ವಾಗತಿಸಿದರು. ರಕ್ಷಿತ್ ಆರ್.ಕೃಷ್ಣ ಹಾಗೂ ಪ್ರೇಮಲತಾ ವಾಮನ ಡಿ. ವರದಿ ವಾಚಿಸಿದರು. ಉಷಾ ಜಗದೀಶ್ ಸೇರಿಗಾರಬೈಲ್ ಬಹುಮಾನಿತರ ವಿವರ ಓದಿದರು.
ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಬೆಳಗ್ಗೆ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ, ಮಧ್ಯಾಹ್ನ ಅನ್ನಪ್ರಸಾದ ನಡೆದು ರಾತ್ರಿ ಸ್ಥಳೀಯ ಪ್ರತಿನಿಧಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಮಲೆಯಾಳಿ ಬಿಲ್ಲವ ಯುವ ವೇದಿಕೆ ಸದಸ್ಯರಿಂದ ವೈ.ಬಿ.ಸುಂದರ್ ನೇತೃತ್ವದಲ್ಲಿ ಶಶಿಧರ ಬಂಡಿತ್ತಡ್ಕ ರಚಿಸಿದ, ನಿತಿನ್ ಹೊಸಂಗಡಿ ನಿರ್ದೇಶನದ ‘ವಜ್ರದ ಮೂಂಕುತ್ತಿ’ ತುಳು ಸಾಮಾಜಿಕ ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.