ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್, ರೋಟರಿ ಕ್ಲಬ್ ಬಂಟ್ವಾಳ ಟೌನ್ ಮತ್ತು ರೋಟರಿ ಕ್ಲಬ್ ಮಡಂತ್ಯಾರು ವತಿಯಿಂದ ಮಂಗಳೂರಿನ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಡಾ. ಬಿ.ಆರ್.ಮತ್ತು ಸಿ.ಆರ್.ಶೆಟ್ಟಿ ಫೌಂಡೇಶನ್, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಬೆಂಗಳೂರು ಸಹಯೋಗದಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ತಿಳುವಳಿಕೆ ನೀಡುವ ಶಿಬಿರ ಲೊರೆಟ್ಟೊ ಚರ್ಚ್ ಹಾಲ್ ವಠಾರದ ಮಿನಿ ಹಾಲ್ ನಲ್ಲಿ ಡಿ.8ರಂದು ನಡೆಯಲಿದೆ.
ಈ ವಿಷಯವನ್ನು ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ರೋಟರಿ ಟೌನ್ ಅಧ್ಯಕ್ಷ ಜಯರಾಜ ಎಸ್. ಬಂಗೇರ ಮತ್ತು ರೋಟರಿ ಲೊರೆಟ್ಟೊ ಹಿಲ್ಸ್ ಅಧ್ಯಕ್ಷ ಪದ್ಮರಾಜ ಬಲ್ಲಾಳ್ ತಿಳಿಸಿದರು.
ಎ.ಜೆ. ಕ್ಯಾನ್ಸರ್ ಆಸ್ಪತ್ರೆಯ ಡಾ. ರಚನ್ ಶೆಟ್ಟಿ ಕೆ.ಎಸ್. ಅವರು ಮಾಹಿತಿ ನೀಡಲಿದ್ದು, ಬೆಳಗ್ಗೆ 10ಕ್ಕೆ ಶಿಬಿರ ಆರಂಭಗೊಳ್ಳಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಲೊರೆಟ್ಟೋ ಹಿಲ್ಸ್ ರೋಟರಿಯ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ಖಜಾಂಚಿ ರಾಮಚಂದ್ರ ಶೆಟ್ಟಿಗಾರ್ ಉಪಸ್ಥಿತರಿದ್ದರು. ಭಾಗವಹಿಸಲು ಬಯಸುವವರು 9448974259 ಅಥವಾ 9845949976 ಸಂಪರ್ಕಿಸಬಹುದು ಎಂದವರು ತಿಳಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…