ಪುತ್ತೂರು ತೆಂಕಿಲದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದಅನ್ವೇಷಣಾ–೨೦೧೯ ರಾಜ್ಯ ಮಟ್ಟದ ಅಗ್ರಿ ಟಿಂಕರಿಂಗ್ ಫೆಸ್ಟನಲ್ಲಿ ಶ್ರೀರಾಮ ಪ್ರೌಢ ಶಾಲೆಯಿಂದ 24, ಶ್ರೀರಾಮ ಪ್ರಾಥಮಿಕ ವಿಭಾಗದಿಂದ 17 ಹಾಗೂ ಪಿ.ಯು.ಸಿ ವಿಭಾಗದಿಂದ 6 ವಿದ್ಯಾರ್ಥಿಗಳು ಒಟ್ಟು 28 ಮಾದರಿಗಳನ್ನು ವಿವಿಧ ವಿಭಾಗಗಳಲ್ಲಿ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.
ಹೊಸ ಬಗೆಯ ಕೃಷಿ ಯಂತ್ರೋಪಕರಣಗಳಲ್ಲಿ ಪಶುಸಂಗೋಪನೆಗೆ ಸಹಾಯವಾಗುವ ದನಗಳಿಗೆ ಹಸಿ ಹುಲ್ಲನ್ನು ಕೆತ್ತುವ ಯಂತ್ರದ ಮಾದರಿಯನ್ನು ತಯಾರಿಸಿ ಜೂನಿಯರ್ ವಿಭಾಗದಲ್ಲಿ ೯ನೇ ತರಗತಿಯ ರಂಜಿತ್ ಮತ್ತು ಸಬ್ ಜೂನಿಯರ್ ವಿಭಾಗದಲ್ಲಿ ೭ನೇ ತರಗತಿಯ ಖುಷಿ ಮತ್ತು ಚಿನ್ಮಯಿ ತಯಾರಿಸಿರುವ ಸ್ಮಾರ್ಟ್ ಶೆಡ್ ಮಾದರಿಯಲ್ಲಿ ದನದ ಕೊಟ್ಟಿಗೆಯಲ್ಲಿ ಸ್ವಯಂಚಾಲಿತ ಯಂತ್ರದ ಸಹಾಯದಿಂದ ಸಮಯಕ್ಕೆ ಸರಿಯಾಗಿ ದನಗಳಿಗೆ ಮೇವನ್ನು ಒದಗಿಸುವ ಮಾದರಿ ಪ್ರಥಮ ಬಹುಮಾನ ಪಡೆದಿದೆ.
೮ನೇ ತರಗತಿಯ ವಿಘ್ನೇಶ್ ಮತ್ತು ಚರಿತ್ ಮಳೆ ಸಂವೇದಿ ಸೂಚಕವನ್ನು ಬಳಸಿ ತಯಾರಿಸಲಾದ ರೂಫ್ ಕಂಟ್ರೋಲ್ಡ್ ಅರೆಕಾ ಡ್ರೈಯರ್ ಮಾದರಿ ಲಘು ಉದ್ಯೋಗ ಭಾರತಿ ಸಂಸ್ಥೆಯ ಕಡೆಯಿಂದ ಮೆಂಟರ್ಶಿಪ್ ಮಾನ್ಯತೆ ಪಡೆದಿದೆ.
ಸಾರ್ವಜನಿಕ ವಿಭಾಗದಲ್ಲಿ ಕೃಷಿಯಲ್ಲಿ ಹೊಸ ಅವಿಷ್ಕಾರಗಳ ವಿಭಾಗದಲ್ಲಿ ಸಂಸ್ಥೆಯ ಶಿಕ್ಷಕಿ ಗಾಯತ್ರಿ ಬಾಳೆಗೊನೆಯನ್ನು ಪ್ರಾಣಿಗಳಿಂದ ಸಂರಕ್ಷಿಸುವ ಮಾದರಿಯನ್ನು ಪ್ರದರ್ಶಿಸಿ ಜನಮನ್ನಣೆ ಮತ್ತು ಬೇಡಿಕೆ ಪಡೆದಿದ್ದರು.
ಮಕ್ಕಳಲ್ಲಿನ ಸೃಜನಾತ್ಮಕ ಶಕ್ತಿಗೆ ನಾವೀನ್ಯ ರೂಪ ಕೊಡಲು ಶ್ರೀರಾಮ ವಿದ್ಯಾಕೇಂದ್ರದ ಅಟಲ್ ಟಿಂಕರಿಂಗ್ ಲ್ಯಾಬ್ ನಿರಂತರವಾಗಿ ಸಹಕಾರ ಒದಗಿಸಿತ್ತು.