ನಗ್ರಿ ಎಂಬಲ್ಲಿಯ ಗೋವಿಂದ ಕುಲಾಲ್ ಮತ್ತು ಮೀನಾಕ್ಷಿ ದಂಪತಿಗೆ ದಾನಿಗಳು ಮತ್ತು ಸಂಘಸಂಸ್ಥೆಗಳ ನೆರವಿನಿಂದ ವಿಶ್ವಹಿಂದೂ ಪರಿಷದ್ ನಾಯಕ ಲೋಹಿತ್ ಪಣೋಲಿಬೈಲ್ ಮತ್ತು ಸಾಮಾಜಿಕ ಸೇವಾ ಕಾರ್ಯಕರ್ತ ರವಿಚಂದ್ರ ನಗ್ರಿ ಮುಂದಾಳತ್ವದಲ್ಲಿ 4.50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಮನೆಯನ್ನು ಭಾರತ ಮಾತೆಯ ಫೋಟೋ ನೀಡುವ ಮೂಲಕ ಹಸ್ತಾಂತರ ಮಾಡಲಾಯಿತು .
ಅತಿಥಿಗಳಾಗಿ ಸಜೀಪ ಜನಸೇವಾ ಟ್ರಸ್ಟ್’ನ ಅಧ್ಯಕ್ಷ ಯಶವಂತ ದೇರಾಜೆ, ಶ್ರೀ ದುರ್ಗಾ ಪರಮೇಶ್ವರೀ ಭಕ್ತವೃಂದ ಸಜೀಪ ಅಧ್ಯಕ್ಷ ನವೀನ್ ಸುವರ್ಣ ಮಿತ್ತಕಟ್ಟ, ಉದ್ಯಮಿ ಶ್ರೀಕಾಂತ್ ಶೆಟ್ಟಿ ಸಂಕೇಶ, ಸಜೀಪಮೂಡ ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ್ ಬೆಳ್ಚಾಡ ಕೂಡೂರು, ಸ್ನೇಹ ಮಿಲನ ಕಲ್ಲಡ್ಕ ಸಂಚಾಲಕ ಪುರುಷೋತ್ತಮ ಪೂಜಾರಿ ಪಡೀಲ್, ವಿಶ್ವಹಿಂದೂ ಪರಿಷದ್ ವಿಟ್ಲ ಪ್ರಖಂಡದ ಸಹ ಕಾರ್ಯದರ್ಶಿ ಲೋಹಿತ್ ಪಣೋಲಿಬೈಲ್, ಸಾಮಾಜಿಕ ಕಾರ್ಯಕರ್ತ ರವಿಚಂದ್ರ ನಗ್ರಿ ಮತ್ತು ಹಿರಿಯರಾದ ಗುರುವಪ್ಪ ನಾಯ್ಕ್ ಉಪಸ್ಥಿತರಿದ್ದು ಶುಭ ಹಾರೈಸಿದರು.