ಮಂಗಳವಾರ ಸಂಜೆ ಸುಮಾರು 6.30ಕ್ಕೆ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಬಕ ಕಲಂದಡ್ಕದಲ್ಲಿ ಇಲ್ಲಿನ ನಿವಾಸಿ ಅಬ್ದುಲ್ ಖಾದರ್ (35) ಎಂಬವರ ಮೇಲೆ ಪಿಸ್ತೂಲ್ ಮಾದರಿಯ ಯಾವುದೋ ಸಾಧನದಿಂದ ಗುಂಡು ಹಾರಿಸಲಾಗಿದೆ. ಅವರ ಎದೆಯ ಭಾಗಕ್ಕೆ ಗುಂಡು ತಗಲಿದ್ದು, ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಮನೆಯಿಂದ ಕಾರಿನಲ್ಲಿ ಕಬಕ ಪೇಟೆಗೆ ಧಾವಿಸಿ ಬಂದಿದ್ದು, ಅಲ್ಲಿಂದ ಸ್ಥಳೀಯರು ಗಾಯಾಳುವನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆರೋಪಿಗಳ ಪತ್ತೆಗೆ ಪುತ್ತೂರು ಪೊಲೀಸ್ ಉಪಾಧೀಕ್ಷಕರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…