ತುಳುಕೂಟ ಬಂಟ್ವಾಳ ವತಿಯಿಂದ ಬಂಟ್ವಾಳ ಸ್ಪರ್ಶ ಕಲಾ ಮಂದಿರದಲ್ಲಿ ಭಾನುವಾರ ಆಯೋಜಿಸಿದ ತುಳು ನೃತ್ಯ ಭಜನಾ ಸ್ಪರ್ಧೆಯಲ್ಲಿ ಕೊಯ್ಲದ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಪ್ರಥಮ ಸ್ಥಾನ ಗಳಿಸಿದೆ.
ಸಜೀಪ ಕೋಟೆಕಣಿಯ ಶ್ರೀರಾಮ ಭಜನಾ ಮಂಡಳಿ ದ್ವಿತೀಯ ಹಾಗೂ ಸಿದ್ಧಕಟ್ಟೆಯ ಶ್ರೀ ದುರ್ಗಾ ಮಹಮ್ಮಾಯಿ ಭಜನಾ ತಂಡ ತೃತೀಯ ಸ್ಥಾನ ಗಳಿಸಿತು. ಮೇಲ್ಕಾರ್ ನ ಗುರುಕುಲ ಕಲಾಕೇಂದ್ರದ ತಂಡ ಮತ್ತು ಕರಿಯಂಗಳದ ಅಗಸ್ತ್ಯೇಶ್ವರ ನೃತ್ಯ ತಂಡ ಪ್ರೋತ್ಸಾಹದಾಯಕ ಬಹುಮಾನ ಪಡೆದುಕೊಂಡಿತು.
ತುಳುಕೂಟದ ಗೌರವಾಧ್ಯಕ್ಷ ಹಾಗೂ ತುಳು ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬಹುಮಾನ ವಿತರಿಸಿ, ಶುಭ ಹಾರೈಸಿದರು. ಈ ಸಂದರ್ಭ ಮಾತನಾಡಿದ ಅವರು ತುಳು ಭಾಷಾ ಬೆಳವಣಿಗೆಗೆ ಭಜನಾ ಸ್ಪರ್ಧೆ ಪೂರಕವಾಗಿದ್ದು, ಶಾಲಾ ಕಾಲೇಜುಗಳಲ್ಲಿ ಇಂದು ತುಳು ಬೆಳವಣಿಗೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸ್ವರ್ಣೋದ್ಯಮಿ ಬಿ.ನಾಗೇಂದ್ರ ಬಾಳಿಗಾ, ಭಜನಾ ತಂಡಗಳು ನಿರ್ವಹಿಸಬೇಕಾದ ರೀತಿಯ ಕುರಿತು ವಿವರಿಸಿ, ನಿಯಮ ಪಾಲನೆಯಿಂದ ಭಜನೆಯಲ್ಲಿ ಏಕಾಗ್ರತೆಯನ್ನು ಕಂಡುಕೊಳ್ಳಲು ಸಾಧ್ಯ ಎಂದರು. ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನ ಬಿ.ಸಿ.ರೋಡ್ ಅಧ್ಯಕ್ಷ ರಾಜೇಶ್ ಎಲ್. ನಾಯಕ್, ಉದ್ಯಮಿ ಟಿ.ವರದರಾಜ ಪೈ, ದಾನಿ ಗಣೇಶ್ ಶೆಣೈ ಬಂಟ್ವಾಳ, ತುಳುಕೂಟ ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್, ತುಳುಕೂಟ ಕಾರ್ಯದರ್ಶಿ ಎಚ್.ಕೆ.ನಯನಾಡು, ಇತರ ಸಂಚಾಲಕರಾದ ಮಂಜು ವಿಟ್ಲ, ರಾಜಾ ಬಂಟ್ವಾಳ, ಸೀತಾರಾಮ ಶೆಟ್ಟಿ ಕಾಂತಾಡಿ, ದಿವಾಕರ ದಾಸ್ ಕಾವಳಕಟ್ಟೆ, ಸರಪಾಡಿ ಅಶೋಕ್ ಶೆಟ್ಟಿ, ಕೈಯೂರು ನಾರಾಯಣ ಭಟ್ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಭಜನಾ ಕೀರ್ತನಕಾರ ದೇವದಾಸ ಪ್ರಭು ಬಂಟ್ವಾಳ ಅವರನ್ನು ಸನ್ಮಾನಿಸಲಾಯಿತು. ತುಳುಕೂಟ ಅಧ್ಯಕ್ಷ ಸುದರ್ಶನ ಜೈನ್ ಸಮಾರೋಪ ಭಾಷಣ ಮಾಡಿದರು. ಭಜನಾ ಸ್ಪರ್ಧಾ ಸಮಿತಿಯ ಸಂಚಾಲಕ ರಾಜಾ ಬಂಟ್ವಾಳ ಸ್ವಾಗತಿಸಿದರು. ತುಳುಕೂಟ ಸಹಸಂಚಾಲಕ ಸೇಷಪ್ಪ ಮಾಸ್ಟರ್ ತುಂಬೆ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು. ಭಜನಾ ಸ್ಪರ್ಧೆ ತೀರ್ಪುಗಾರ ರಾಮಕೃಷ್ಣ ಕಾಟುಕುಕ್ಕೆ ವಿಜೇತರ ಪಟ್ಟಿ ವಾಚಿಸಿದರು. ಸಹತೀರ್ಪುಗಾರರಾದ ಅರುಣಾ ರಾವ್ ಕಟೀಲು, ಕಿಶೋರ್ ಪೆರ್ಲ ಅವರನ್ನು ಗೌರವಿಸಲಾಯಿತು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127