ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ದೃಷ್ಟಿಯಿಂದ ಗ್ರಾ.ಪಂ.ನಿರ್ಣಯಗಳಿಗೆ ಸ್ಪಂದನೆ ನೀಡುವ ಕಾರ್ಯವಾಗಬೇಕು ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಪ್ರತಾಪ್ಚಂದ್ರ ಶೆಟ್ಟಿ ಹೇಳಿದರು.
ಗುರುವಾರ ಸ್ಥಳೀಯ ಸಂಸ್ಥೆಗಳ ಭೇಟಿಯ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾ.ಪಂ.ಗೆ ಭೇಟಿ ನೀಡಿ ಸ್ಥಳೀಯ ಜನಪ್ರತಿನಿಧಿಗಳು, ಸಾರ್ವಜನಿಕರ ಜತೆ ಚರ್ಚೆ ನಡೆಸಿದರು.
ಈ ಸಂದರ್ಭ ಜನಪ್ರತಿನಿಧಿಗಳು, ಸಾರ್ವಜನಿಕರು ವಿವಿಧ ಅಹವಾಲುಗಳನ್ನು ಮಂಡಿಸಿದರು. ಮಾಜಿ ಸಚಿವ ಬಿ.ರಮಾನಾಥ ರೈ ಅವರು ಗ್ರಾ.ಪಂ.ಗಳಿಗೆ ಅನುದಾನ ಹೆಚ್ಚಳ, ಪಂಚಾಯತ್ಗಳಿಗೆ ಹೆಚ್ಚಿನ ಅಧಿಕಾರ ನೀಡುವ ಕುರಿತು ಪ್ರಸ್ತಾಪಿಸಿದರು. ಆಧಾರ್ ಕೇಂದ್ರವನ್ನು ಗ್ರಾ.ಪಂ.ನಲ್ಲೇ ಮರು ಆರಂಭಿಸುವಂತೆ ಗ್ರಾ.ಪಂ.ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಗೌಡ ವಿನಂತಿಸಿದರು. ಸದಸ್ಯ ಸಂಜೀವ ಪೂಜಾರಿ, ಸುರೇಶ್ ಪೂಜಾರಿ ಮಾಜಿ ಅಧ್ಯಕ್ಷ ದೇವಪ್ಪ ಕುಲಾಲ್ ಮಾತನಾಡಿದರು. ಗ್ರಾ.ಪಂ.ಅಧ್ಯಕ್ಷೆ ಸುಮಿತ್ರಾ ಯೋಗೀಶ್ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಪ್ರಮುಖರಾದ ಬೇಬಿ ಕುಂದರ್ ವಿವಿಧ ಮನವಿಗಳನ್ನು ಮುಂದಿಟ್ಟರು. ತಾ.ಪಂ.ಕಾರ್ಯನಿರ್ವಹಣಾಕಾರಿ ರಾಜಣ್ಣ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ವೇದಾ, ಗ್ರಾಮಕರಣಿಕ ಕುಮಾರ್ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದರು. ಸದಸ್ಯರಾದ ದಯಾನಂದ ಗೌಡ, ಹರೀಶ್ ಪೂಜಾರಿ, ಬಾಲಕೃಷ್ಣ ಪೂಜಾರಿ, ವಿಶ್ವನಾಥ ಶೆಟ್ಟಿ, ಪೂವಪ್ಪ ಮೆಂಡನ್, ಶಾಲಿನಿ ಶ್ರೀನಿವಾಸ್, ಶಾಲಿನಿ ಜಗದೀಶ್, ರೂಪಶ್ರೀ, ಶಶಿಕಲಾ, ಸುಮತಿ ಮೊದಲಾದವರು ಉಪಸ್ಥಿತರಿದ್ದರು.