ಕ್ರೀಡಾ ಕ್ಷೇತ್ರದ ಸಾಧಕರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದು ಹಾಗೂ ಕ್ರೀಡಾ ಕ್ಷೇತ್ರಕ್ಕೆ ಸಂಬಂದಿಸಿದಂತೆ ಹಲವಾರು ಉದ್ದೇಶಗಳನ್ನಿಟ್ಟುಕೊಂಡು ರಾಜ್ಯಮಟ್ಟದಲ್ಲಿ ಸ್ಥಾಪನೆಗೊಂಡ ಯುನೈಟೆಡ್ ಎಂಪವರ್ ಮೆಂಟ್ ಅಸೋಸಿಯೇಶನ್ (ರಿ) ಇದರ ಬಂಟ್ವಾಳ ಜಿಲ್ಲಾದ್ಯಕ್ಷರಾಗಿ ಅಬ್ದುಲ್ ಲತೀಫ್ ನೇರಳಕಟ್ಟೆ ಆಯ್ಕೆಯಾಗಿದ್ದಾರೆ.
ಅಸೋಸಿಯೇಶನ್ ರಾಜ್ಯಾಧ್ಯಕ್ಷ ಸಿರಾಜುದ್ದೀನ್ ಅವರ ಅಧ್ಯಕ್ಷತೆಯಲ್ಲಿ ಪಾಣೆಮಂಗಳೂರು ಆಲಡ್ಕದ ಎಸ್.ಎಸ್ ಆಡಿಟೋರಿಯಂನಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಅಬ್ದುಲ್ ರಝಾಕ್ ಕುಕ್ಕಾಜೆ, ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಲುಕ್ಮಾನ್ ಕೈಕಂಬ, ವಹಾಬ್ ಗೂಡಿನಬಳಿ, ಪ್ರಧಾನ ಕಾರ್ಯದರ್ಶಿಯಾಗಿ ಆಶಿಕ್ ಕುಕ್ಕಾಜೆ, ಜತೆ ಕಾರ್ಯದರ್ಶಿಯಾಗಿ ಸಜ್ಜಾದ್ ಕಲ್ಲಡ್ಕ, ಎಂ.ಎಂ.ಇಬ್ರಾಹಿಂ ಮೋನು ನಂದಾವರ, ಕೋಶಾಧಿಕಾರಿಯಾಗಿ ಇಮ್ರಾನ್ ಶಾಂತಿಅಂಗಡಿ, ಮಾದ್ಯಮ ಕಾರ್ಯದರ್ಶಿಯಾಗಿ ಅಶ್ರಫ್ ಅರಬಿ ಗೋಳ್ತಮಜಲು, ಕ್ರೀಡಾ ಕಾರ್ಯದರ್ಶಿಯಾಗಿ ತಾಹಿರ್ ಸಜಿಪ, ಪಂದ್ಯಾಟಗಳ ಉಸ್ತುವಾರಿಯಾಗಿ ರಫೀಕ್ ಪರ್ಲಿಯಾ, ಕ್ರಿಕೆಟ್ ಉಸ್ತುವಾರಿಯಾಗಿ ರಾಬಿಯತ್ ಸಜಿಪ, ಮುನಾಝ್ ಕಲ್ಲಡ್ಕ, ಕಬಡ್ಡಿ ಉಸ್ತುವಾರಿಯಾಗಿ ಶಿಹಾಬುದ್ದೀನ್ ಗೋಳ್ತಮಜಲು, ಫಾರೂಖ್ ಟಿಕ್ಕಾ ಪಾಯಿಂಟ್ ಕಲ್ಕಡ್ಕ, ಫುಟ್ಬಾಲ್ ಉಸ್ತುವಾರಿಯಾಗಿ ಸವೂದ್ ಜಿ.ಎಂ., ಜಮಾಲ್ ಗೋಳ್ತಮಜಲು, ವಾಲಿಬಾಲ್ ಉಸ್ತುವಾರಿಯಾಗಿ ಶಾಹಿದ್ ತುಂಬೆ, ಶೌಕತ್ ನೆಹರುನಗರ, ಶಟ್ಲ್ ಬ್ಯಾಡ್ಮಿಟನ್ ಉಸ್ತುವಾರಿಯಾಗಿ ರಫೀಕ್ ಮಾಸ್ಟರ್, ಇತರ ಕ್ರೀಡಾ ಉಸ್ತುವಾರಿಯಾಗಿ ಸಮೀರ್ ಕಲ್ಲಡ್ಕ ಅವರನ್ನು ಆಯ್ಕೆ ಮಾಡಲಾಯಿತು.
ಯುನೈಟೆಡ್ ಎಂಪವರ್ ಮೆಂಟ್ ಅಸೋಸಿಯೇಶನ್ ರಾಜ್ಯ ಪ್ರದಾನ ಕಾರ್ಯದರ್ಶಿ ಇಮ್ತಿಯಾಝ್ ಗೋಳ್ತಮಜಲು ಸಂಘದ ದ್ಯೇಯೋದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ಜೊತೆ ಕಾರ್ಯದರ್ಶಿ ನೂರುಲ್ ಆಲಂ ಸ್ವಾಗತಿಸಿ, ರಾಜ್ಯ ಕ್ರೀಡಾ ಕಾರ್ಯದರ್ಶಿ ಇಕ್ಬಾಲ್ ಹಸನ್ ವಂದಿಸಿದರು.