ಮಂಗಳೂರಿನ ಪಂಪ್ ವೆಲ್ ಸಮೀಪ ಇಂದು ಸಂಜೆ ನಡೆದ ಅಪಘಾತದಲ್ಲಿ ಬಂಟ್ವಾಳ ಮೆಲ್ಕಾರ್ ರಂಗೇಲು ನಿವಾಸಿ ಹಮೀದ್ ಎಂಬವರ ಪುತ್ರ ಮದರಸ ಶಿಕ್ಷಣ ಅಧ್ಯಾಪಕ ಹಾಫಿಲ್ ತೌಸೀಫ್ (30) ಮೃತಪಟ್ಟಿದ್ದಾರೆ.
ತೊಕ್ಕೊಟು ಕಡೆಯಿಂದ ಪಂಪ್ ವೆಲ್ ಗೆ ಬರುತ್ತಿದ್ದಾಗ ಎಕ್ಕೂರಿನಲ್ಲಿ ಹಿಂದಿನಿಂದ ಬಂದ ಖಾಸಗೀ ಬಸ್ ಡಿಕ್ಕಿ ಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾಸರಗೋಡು ಮುಹಿಮ್ಮಾತ್ ಕಾಲೇಜಿನಿಂದ ಹಾಫೀಲ್ ಪದವಿ ಪಡೆದಿದ್ದ ತೌಸೀಫ್, ತರ್ತೀಲ್ ಅಕಾಡೆಮಿ ಮೂಲಕ ಮದರಸ ಶಿಕ್ಷಣ ಅಧ್ಯಾಪಕರಾಗಿ ಶಿಕ್ಷಣ ನೀಡುತ್ತಿದ್ದರು. ಇವರ ಪತ್ನಿಗೆ ಇತ್ತೀಚೆಗಷ್ಟೇ ಎರಡನೇ ಹೆರಿಗೆಯಾಗಿತ್ತು. ಅವರು ತಂದೆ, ತಾಯಿ, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)