ಶ್ರೀ ಸಾಯಿ ಸಾಗರ್ ಫೌಂಡೇಶನ್ ಆಶ್ರಯದಲ್ಲಿ ಜಗಲಿ ಕಟ್ಟೆ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ.
ಮಂಗಳೂರಿನ ಮನೆಯಂಗಳಗಳಲ್ಲಿ ಸಾಹಿತ್ಯ ಸಂವಾದ ನಡೆಸುವ ವಿಶಿಷ್ಟ ಕಾರ್ಯಕ್ರಮ ಇದಾಗಿದ್ದು, ಖ್ಯಾತ ಸಾಹಿತಿ ಪ್ರೊ. ಭುವನೇಶ್ವರಿ ಹೆಗಡೆ, ವಿಮರ್ಶಕ ಡಾ. ಪ್ರಭಾಕರ ಜೋಶಿ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರದೀಪ ಕುಮಾರ ಕಲ್ಕೂರ, ಪೀಸ್ ಲ್ಯಾಂಡ್ ಅಪಾರ್ಟ್ಮೆಂಟ್ ಓನರ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಹೇಮಚಂದ್ರ, ಶ್ರೀ ಸಾಯಿ ಸಾಗರ್ ಫೌಂಡೇಶನ್(ರಿ) ನ ಸಂಸ್ಥಾಪಕ ಪ್ರೀತಮ್ ಸಾಗರ್, ಜಾಗೃತ ಮಹಿಳಾ ವೇದಿಕೆಯ ಸಂಚಾಲಕಿ ಪವಿತ್ರ ಆಚಾರ್ಯ ಉಪಸ್ಥಿತರಿರುತ್ತಾರೆ.
ಕಾರ್ಯಕ್ರಮವು ಇದೇ ನವಂಬರ್ 24ರ ಆದಿತ್ಯವಾರ ಸಂಜೆ 3.30ರಿಂದ 5.30ರ ವರೆಗೆ ಕದ್ರಿ ಕಂಬಳ ರಸ್ತೆಯ ಪಿಂಟೋಸ್ ಲೇನ್ ನ ಪೀಸ್ ಲ್ಯಾಂಡ್ ಅಪಾರ್ಟ್ಮೆಂಟ್ ನ ಆವರಣದಲ್ಲಿ ನಡೆಯಲಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…