ತುಳುಕೂಟ ಬಂಟ್ವಾಳ ತಾಲೂಕಿನಲ್ಲೇ ಪ್ರಥಮ ಬಾರಿಗೆ ತುಳು ನೃತ್ಯ ಭಜನಾ ಸ್ಪರ್ಧೆಯನ್ನು ನ.24ರಂದು ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಆಯೋಜಿಸಿದೆ.
ತುಳುಕೂಟ ಅಧ್ಯಕ್ಷ ಸುದರ್ಶನ ಜೈನ್ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಬೆಳಗ್ಗೆ 9.30ಕ್ಕೆ ಸ್ಪರ್ಧೆ ಉದ್ಘಾಟಿಸುವರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ದೀಪಪ್ರಜ್ವಲನಗೈಯುವರು. ಅಧ್ಯಕ್ಷತೆಯನ್ನು ತುಳುಕೂಟ ಅಧ್ಯಕ್ಷ ಸುದರ್ಶನ ಜೈನ್ ವಹಿಸುವರು. ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಅಶ್ವನಿ ಕುಮಾರ್ ರೈ, ಉದ್ಯಮಿ ನಾಗೇಶ್ ಕುಲಾಲ್ ಭಾಗವಹಿಸುವರು. ಸಂಜೆ ನಡೆಯುವ ಸಮಾರೋಪದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಬಹುಮಾನ ವಿತರಿಸುವರು. ಅಧ್ಯಕ್ಷತೆಯನ್ನು ತುಳುಕೂಟ ಗೌರವಾಧ್ಯಕ್ಷ ಎ.ಸಿ.ಭಂಡಾರಿ ವಹಿಸುವರು. ತುಳುಕೂಟ ಅಧ್ಯಕ್ಷ ಸುದರ್ಶನ ಜೈನ್ ಸಮಾರೋಪ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಉದ್ಯಮಿ ವರದರಾಜ ಪೈ, ರಕ್ತೇಶ್ವರಿ ದೇವಸ್ಥಾನ ಅಧ್ಯಕ್ಷ ರಾಜೇಶ್ ಎಲ್. ನಾಯಕ್, ಉದ್ಯಮಿ ನಾಗೇಂದ್ರ ಬಾಳಿಗಾ ಭಾಗವಹಿಸುವರು. ಭಜನಾ ಕೀರ್ತನಗಾರ ದೇವದಾಸ ಪ್ರಭು ಅವರನ್ನು ಸನ್ಮಾನಿಸಲಾಗುವುದು ಎಂದರು.
ಬಂಟ್ವಾಳ ತಾಲೂಕು ಮಟ್ಟಕ್ಕೆ ಸ್ಪರ್ಧೆ ಸೀಮಿತಗೊಳಿಸಲಾಗಿದ್ದು, ಇತರ ತಾಲೂಕುಗಳಿಂದಲೂ ಕರೆಗಳು ಬರುತ್ತಿವೆ. ಈಗಾಗಲೇ 30ಕ್ಕೂ ಅಧಿಕ ತಂಡಗಳು ತಾಲೂಕಿನ ಮಟ್ಟದಲ್ಲಿ ನೋಂದಾವಣೆಗೊಂಡಿದ್ದು, ತಾಲೂಕಿನ ತಂಡಗಳಿಗಷ್ಟೇ ಆದ್ಯತೆ ಎಂದವರು ಹೇಳಿದರು.
ತುಳುಕೂಟ ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್, ಭಜನಾ ಸ್ಪರ್ಧಾ ಸಮಿತಿ ಸಂಚಾಲಕ ಮಂಜು ವಿಟ್ಲ, ತುಳುಕೂಟ ಸಹಸಂಚಾಲಕ ರಮೇಶ್ ನಾಯಕ್ ರಾಯಿ, ಪದಾಧಿಕಾರಿಗಳಾದ ಸೀತಾರಾಮ ಶೆಟ್ಟಿ ಕಾಂತಾಡಿ, ಗೋಪಾಲ ಅಂಚನ್, ಸುಕುಮಾರ್ ಬಂಟ್ವಾಳ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.