ತೊಕ್ಕೊಟ್ಟು: ಶ್ರೀ ರಾಮಕೃಷ್ಣ ಕೋ–ಒಪರೇಟಿವ್ ಸೊಸೈಟಿ ಲಿ. ತೊಕ್ಕೊಟ್ಟು ಶಾಖೆಯ ಗ್ರಾಹಕ ಸಂಪರ್ಕ ಸಭೆ ಇತ್ತೀಚೆಗೆ ಜರುಗಿತು.
ಪವಿತ್ರರವರ ಪ್ರಾರ್ಥನೆಯೊಂದಿಗೆ ಸಭೆ ಆರಂಭವಾಯಿತು. ಗೋಪಾಲಕೃಷ್ಣ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ತೊಕ್ಕೊಟ್ಟು ಶಾಖೆಯ ಉಸ್ತುವಾರಿ ನಿರ್ದೇಶಕರಾದ ಸಿ.ಎ. ಎಚ್.ಆರ್. ಶೆಟ್ಟಿ ಶಾಖೆಯ ಪ್ರಗತಿ ಹಾಗೂ ಸಂಘದ ಕಾಯ್ದಿಟ್ಟ ನಿಧಿ ಹೆಚ್ಚಿರುವುದು ಸಂಘದ ಪ್ರಗತಿಗೆ ಒಂದು ಉದಾಹರಣೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅಧ್ಯಕ್ಷ ಕೆ. ಜೈರಾಜ್ ಬಿ. ರೈ ೩ ವರ್ಷದಲ್ಲಿ ತೊಕ್ಕೊಟ್ಟು ಶಾಖೆಯ ಅಭಿವೃದ್ಧಿಗೆ ಸಹಕರಿಸಿದ ಗ್ರಾಹಕರನ್ನು ಅಭಿನಂದಿಸಿದರು. ಇನ್ನು ಮುಂದಿನ ೫ ವರ್ಷಗಳ ಅವಧಿಯಲ್ಲಿ ೧೦೦೦ ಕೋಟಿ ವ್ಯವಹಾರ ಮತ್ತು ೧೦ ಕೋಟಿ ಲಾಭ ಗಳಿಸಲು ಹಾಗೂ ಹೆಚ್ಚಿನ ಸಂಖ್ಯೆಯ ಶಾಖೆಯನ್ನು ತೆರೆಯುವ ಗುರಿಯನ್ನು ಹೊಂದಿರುತ್ತದೆ ಎಂದರು. ಗ್ರಾಹಕರಾದ ಗಣೇಶ್ ಅಡ್ಯಂತಾಯ ಚಾಲ್ತಿ ಖಾತೆಯನ್ನು ತೆರೆಯಲು ಅವಕಾಶ ಮಾಡಿ ಕೊಡಬೇಕೆಂಬ ಮನವಿಗೆ ಅಧ್ಯಕ್ಷರಾದ ಕೆ. ಜೈರಾಜ್ರವರು ಚೆಕ್ ಕ್ಲೀಯರೆನ್ಸ್ ಸೌಲಭ್ಯ ಇಲ್ಲದಿರುವುದರಿಂದ ಚಾಲ್ತಿ ಖಾತೆಯ ಉಪಯೋಗ ಮಿತಿಯಲ್ಲಿರುತ್ತದೆ ಎಂದು ಉತ್ತರಿಸಿದರು. ಗ್ರಾಹಕರಾದ ನಾಸಿರ್ ಅಹಮ್ಮದ್ ಎ.ಟಿ.ಎಮ್ ಮೆಷಿನ್ ಅಳವಡಿಸಬೇಕಾಗಿ ಮನವಿ ಸಲ್ಲಿಸಿದರು. ಈ ಕುರಿತು ಅಧ್ಯಕ್ಷರಾದ ಜೈರಾಜ್ ಬಿ.ಕೆ. ರವರು ಬ್ಯಾಂಕಿಂಗ್ ರೆಗ್ಯುಲೇಟ್ ಆಕ್ಟ್ ಪ್ರಕಾರ ಎ.ಟಿ.ಎಮ್ ಮೆಷಿನ್ ಹಾಗೂ ಚೆಕ್ಕನ್ನು ರಿಲೀಸ್ ಸವಲತ್ತು ಇಲ್ಲದ ಕಾರಣ ೫ ಸೊಸೈಟಿಗಳ ಜೊತೆ ಸೇರಿ ನಿರ್ಧರಿಸುವಂತೆ ತಿಳಿಸಿದರು.
ಈ ಸಂದರ್ಭ ೫ ಉತ್ತಮ ಗ್ರಾಹಕರನ್ನು ಗುರುತಿಸಿ ಕಿರು ಕಾಣಿಕೆಯನ್ನು ನೀಡಿ ಗೌರವಿಸಲಾಯಿತು ಹಾಗೂ ಸಂಘದ ಪ್ರಧಾನ ವ್ಯವಸ್ಥಾಪಕ ಗಣೇಶ್ ಬಿ.ಕೆ. ವಂದಿಸಿದರು. ಮತ್ತು ನಾಸಿರ್ ಅಹಮ್ಮದ್ ಎಸ್.ಎ. ಕಾರ್ಯಕ್ರಮ ನಿರೂಪಿಸಿದರು.