ಬಂಟ್ವಾಳ ರೋಟರಿ ಕ್ಲಬ್ ಆಶ್ರಯದಲ್ಲಿ ನಾಲ್ಕು ಕಂದಾಯ ಜಿಲ್ಲೆಗಳನ್ನೊಳಗೊಂಡ ರೋಟರಿ ಜಿಲ್ಲೆ 3181ರ ರೋಟರಿ ಫೌಂಡೇಶನ್ ಸೆಮಿನಾರ್ ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ನ.16 ಮತ್ತು 17ರಂದು ನಡೆಯಲಿದೆ.
ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷೆ ಶಿವಾನಿ ಆರ್. ಬಾಳಿಗಾ ಗುರುವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ರೋಟರಿ ಫೌಂಡೇಶನ್ ಟ್ರಸ್ಟೀ ಗುಲಾಮ್ ವಹನವತಿ ಕಾರ್ಯಕ್ರಮವನ್ನು ನ.16ರಂದು ಸಂಜೆ ಉದ್ಘಾಟಿಸಲಿದ್ದಾರೆ. ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯೋ ವಹಿಸುವರು. ಗೌರವ ಅತಿಥಿಗಳಾಗಿ ಪಿಡಿಜಿ ಸೂರ್ಯಪ್ರಕಾಶ್ ಭಟ್, ಪಿಡಿಜಿಕೆ ಕೃಷ್ಣ ಶೆಟ್ಟಿ, ಡಿಜಿಇ ಎಂ.ರಂಗನಾಥ ಭಟ್, ಡಿಜಿಎನ್ ರವಿಂದ್ರ ಭಟ್ ಎ.ಆರ್. ಪಾಲ್ಗೊಳ್ಳಲಿದ್ದಾರೆ. ಸಂಜೆ 5ರಿಂದ ನೋಂದಣಿ ಕಾರ್ಯಗಳೊಂದಿಗೆ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ.
17ರಂದು ನಡೆಯುವ ಸೆಮಿನಾರ್ ಅಧ್ಯಕ್ಷತೆಯನ್ನು ರೋಟರಿ ಗವರ್ನರ್ ಜೋಸೆಫ್ ಮ್ಯಾಥ್ಯೂ ವಹಿಸುವರು. ಮುಖ್ಯ ಅತಿಥಿಗಳಾಗಿ ಅಂತಾರಾಷ್ಟ್ರೀಯ ನಿರ್ದೇಶಕರಾದ ಪಿಡಿಜಿ ಕಮಲ್ ಸಾಂಘ್ವಿ, ಅತಿಥಿಗಳಾಗಿ ಪಿಡಿಜಿ ಅವಿನಾಶ್ ಪೋತ್ದಾರ್, ಡಿಜಿಎಸ್.ಸಿ. ಎಸ್.ಕೆ.ಸಂಜಯ್ ಮತ್ತು ಡಿ.ಎಸ್.ಸಿ. ಪಿ.ಕೆ.ರಾಮಕೃಷ್ಣ ಭಾಗವಹಿಸಲಿದ್ದಾರೆ ಎಂದವರು ಮಾಹಿತಿ ನೀಡಿದರು.
ರೋಟರಿಯ ಜಿಲ್ಲಾ ಟಿಆರ್ ಎಫ್ ಉಪಸಮಿತಿಯ ಚೇರ್ಮನ್ ಡಾ. ರಮೇಶಾನಂದ ಸೋಮಯಾಜಿ, ವಲಯ 4ರ ಸಹಾಯಕ ಗವರ್ನರ್ ರಿತೇಶ್ ಬಾಳಿಗಾ, ಜಿಲ್ಲಾ ಕಾರ್ಯದರ್ಶಿ ವಿವೇಕ್ ಅತ್ತಾವರ, ಕ್ಲಬ್ ಅಧ್ಯಕ್ಷೆ ಶಿವಾನಿ ಬಾಳಿಗ, ಸೆಮಿನಾರ್ ಚೇರ್ಮನ್ ಮಹಮ್ಮದ್ ಇಕ್ಬಾಲ್, ಸೆಮಿನಾರ್ ಕಾರ್ಯದರ್ಶಿ ಅಹಮದ್ ಮುಸ್ತಾಫಾ, ಕ್ಲಬ್ ಕಾರ್ಯದರ್ಶಿ ಸ್ಮಿತಾ ಸಲ್ದಾನ ಉಪಸ್ಥಿತರಿರುವರು.
ರೋಟರಿ ದತ್ತಿನಿಧಿ ಸಂಸ್ಥೆ ಶುದ್ಧ ಕುಡಿಯುವ ನೀರು ಒದಗಿಸುವುದು, ರೋಗಗಳನ್ನು ತಡೆಗಟ್ಟುವುದು, ಅನಕ್ಷರತೆ ಹೋಗಲಾಡಿಸುವುದು, ಆರ್ಥಿಕ ಪರಿಸ್ಥಿತಿ ಸುಧಾರಿಸಿ ಬಡತನ ನಿರ್ಮೂಲನೆಗೆ ನೆರವಾಗುವುದು, ತಾಯಿ ಮಕ್ಕಳ ರಕ್ಷಣೆ, ವಿಶ್ವಶಾಂತಿಯ ಗುರಿಯನ್ನು ಹೊಂದಿದೆ ಎಂದವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ರೋಟರಿ ಸಹಾಯಕ ಗವರ್ನರ್ ರಿತೇಶ್ ಬಾಳಿಗಾ, ಸೆಮಿನಾರ್ ಅಧ್ಯಕ್ಷ ಮಹಮ್ಮದ್ ಇಕ್ಬಾಲ್, ಸೆಮಿನಾರ್ ಕಾರ್ಯದರ್ಶಿ ಅಹಮದ್ ಮುಸ್ತಾಫಾ, ರಿಜಿಸ್ಟ್ರೇಶನ್ ಕಮಿಟಿ ಚೇರ್ಮನ್ ಕೆ.ನಾರಾಯಣ ಹೆಗ್ಡೆ, ಕ್ಲಬ್ ಕಾರ್ಯದರ್ಶಿ ಸ್ಮಿತಾ ಸಾಲ್ದಾನಾ ಉಪಸ್ಥಿತರಿದ್ದರು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. for advertisements contact: 9448548127