ನರಿಕೊಂಬು ಗ್ರಾಮದ ಶೇಡಿಗುರಿಯಿಂದ ಬರ್ಸಗುರಿ ಗುಳಿಗಬನದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಪ್ರದೇಶಾಭಿವೃದ್ಧಿ ನಿಧಿಯಿಂದ 1.75 ಕೋಟಿ ರೂ ವೆಚ್ಚದಲ್ಲಿ ನಡೆಯಲಿದೆ. ಕಾಮಗಾರಿಗೆ ಸ್ಥಳೀಯ ಹಿರಿಯರಾದ ಕೊರಗಪ್ಪ ಪುಜಾರಿ ಕೆದ್ದೇಲು ಚಾಲನೆ ನೀಡಿದರು.
ಗ್ರಾಪಂ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಸದಸ್ಯರಾದ ಕಿಶೋರ್ ಶೆಟ್ಟಿ ಅಂತರ, ದಿವಾಕರ ಶಂಭೂರು, ರಂಜಿತ್ ಕೆದ್ದೇಲು, ಜಯರಾಮ ಕೊಪ್ಪಲ, ವಸಂತ ಭೀಮಗದ್ದೆ, ಉದಯ ಶಾಂತಿಲ, ತಾಪಂ ಮಾಜಿ ಉಪಾಧ್ಯಕ್ಷ ಆನಂದ ಎ.ಶಂಭೂರು, ಪ್ರಮುಖರಾದ ಕಮಲಾಕ್ಷ ಶಂಭೂರು, ಭೋಜರಾಜ ಕೊಪ್ಪಲ, ಪುರುಷೋತ್ತಮ ನಾಟಿ, ಪ್ರಶಾಂತ್ ನಾಟಿ, ಸಂಜೀವ ನಾಟಿ, ವಿಠಲ ನಾಟಿ, ವಿಶ್ವನಾಥ ಕೋಟ್ಯಾನ್, ಎಇಇ ರವೀಂದ್ರನಾಥ ಶೆಟ್ಟಿ, ಗುತ್ತಿಗೆದಾರ ಅಬ್ದುಲ್ ಖಾದರ್ ವಳಚ್ಚಿಲ್ ಈ ಸಂದರ್ಭ ಉಪಸ್ಥಿತರಿದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…