ಪಂಜಿಕಲ್ಲು ಗ್ರಾಮ ಪಂಚಾಯಿತಿಗೆ ತೆರವಾದ ಸ್ಥಾನಕ್ಕೆ ನ.12ರಂದು ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುರೇಶ್ ಪೂಜಾರಿ ಗೆಲುವು ಸಾಧಿಸಿದ್ದಾರೆ.
ಒಟ್ಟು ಚಲಾವಣೆಯಾದ ಮತಗಳು: 776, ಕಾಂಗ್ರೆಸ್ ಬೆಂಬಲಿತ ಸುರೇಶ್ ಜೆ ಪೂಜಾರಿ: 405, ಬಿಜೆಪಿ ಬೆಂಬಲಿತ ಡಿ. ಪ್ರವೀಣ್: 361 ಮತ ಗಳಿಸಿದ್ದು, ತಿರಸ್ಕ್ರತ ಮತಗಳು: 10.
ಮಂಗಳವಾರ ದಡ್ಡಲಕಾಡು ಶಾಲೆಯಲ್ಲಿ ಮತದಾನವಾಗಿತ್ತು. ಚುನಾವಣಾಧಿಕಾರಿಯಾಗಿ ಮಹೇಶ್ ಸಹಾಯಕ ಚುಣಾವಣಾಧಿಕಾರಿಯಾಗಿ ಕಮಾಲಾಕ್ಷ ಪಾಲ್ಗೊಂಡಿದ್ದರು
ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಗುರುವಾರ ಬೆಳಗ್ಗೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ನೇತೃತ್ವದಲ್ಲಿ ಮತ ಎಣಿಕೆ ನಡೆಯಿತು.ಆಹಾರ ಶಿರಸ್ತೇದಾರ್ ಶ್ರೀನಿವಾಸ್ ಚುನಾವಣಾ ಪ್ರಭಾರ ಉಪತಹಶೀಲ್ದಾರ್ ಸೀತಾರಾಮ. ಪ್ರಥಮ ದರ್ಜೆ ಸಹಾಯಕ ರಾಜ್ ಕುಮಾರ್ ವಿದ್ಯಾ ಜೆ ಮೋರೆ. ಶ್ವೇತ ಚುಣಾವಣಾ ಪ್ರಕ್ರಿಯೆಯಲ್ಲಿ ಹಾಜರಿದ್ದು ಎಣಿಕೆ ಕಾರ್ಯದಲ್ಲಿ ನೇರವಾದರು.ಕಿರಣ್ .ತೋಮಸ್. ಚಂದು ಸಹಕರಿಸಿದರು.
ವರದಿ: ಬಂಟ್ವಾಳನ್ಯೂಸ್ ಸಂಪಾದಕ: ಹರೀಶ ಮಾಂಬಾಡಿ
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…