ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ವಾರ್ತಾ ಇಲಾಖೆ ಆಯೋಜಿಸಿರುವ ಗಾಂಧೀಜಿ 150 ಛಾಯಾಚಿತ್ರ ಪ್ರದರ್ಶನವನ್ನು ಮಾಜಿ ಸಚಿವ ಬಿ.ರಮಾನಾಥ ರೈ ವೀಕ್ಷಿಸಿದರು. ಈ ಸಂದರ್ಭ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಪ್ರಮುಖರಾದ ಬೇಬಿ ಕುಂದರ್, ಜಯಂತಿ ಪೂಜಾರಿ, ಫಾರೂಕ್ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಮಾತನಾಡಿದ ರೈ, ಮಹಾತ್ಮಾ ಗಾಂಧೀಜಿ ಅವರ ಜೀವನ ಸಾಧನೆ ಜೊತೆಗೆ ಅವರ ದೇಹಾಂತ್ಯ ಹೇಗಾಯಿತು ಎಂಬ ವಿವರಗಳನ್ನು ತಿಳಿಸಿದೇ ಇದ್ದರೆ ಅಪೂರ್ಣವಾಗುತ್ತದೆ. ಗಾಂಧೀಜಿ ಅವರ ಕುರಿತು ಸಂಪೂರ್ಣ ವಿವರಗಳನ್ನು ತಿಳಿಸುವ ಕಾರ್ಯ ಆಗಬೇಕು ಎಂದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…