ಕಲ್ಲಡ್ಕ

ಕಲ್ಲಡ್ಕದಲ್ಲಿ ಜಿಲ್ಲಾ ಮಟ್ಟದ ಶೈಕ್ಷಣಿಕ, ಮಕ್ಕಳ ವೃತ್ತಿ ಶಿಕ್ಷಣ ಕಲಿಕೋತ್ಸವ

ದ.ಕ.ಜಿಪಂ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಾ ಅಭಿಯಾನ, ಕ್ಷೇತ್ರ ಸಂಪನ್ಮೂಲ ಕೇಂದ್ರ, ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖಾ ವೃತ್ತಿಶಿಕ್ಷಣ ಶಿಕ್ಷಕರ ಸಂಘ ವತಿಯಿಂದ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಶೈಕ್ಷಣಿಕ ಹಾಗೂ ಮಕ್ಕಳ ವೃತ್ತಿ ಶಿಕ್ಷಣ ಕಲಿಕೋತ್ಸವ ನಡೆಯಿತು.

kalladka srirama high school

ಕಸದಿಂದರಸ ಮಾಡುವ ಪರಿಕಲ್ಪನೆಯೇ ವೃತ್ತಿ ಶಿಕ್ಷಣ. ಜೀವನದಲ್ಲಿ ಹೊಸತನವನ್ನುಕಾಣಲು ವೃತ್ತಿ ಶಿಕ್ಷಣ ಅಗತ್ಯ, ಅಂತರದಲ್ಲಿ ಹುದುಗಿ ಸುಪ್ತ ಪ್ರತಿಭೆಯನ್ನು ಹೊರತಂದು ಹೊಸತನವನ್ನು ಸೃಷ್ಟಿ ಮಾಡುವುದರ ಮೂಲಕ ಜೀವನದ ಆನಂದ ಸಂತೋಷವನ್ನುಅನುಭವಿಸಬೇಕು ಎಂದು ಕಾರ್ಯಕ್ರಮ ಉದ್ಘಾಟಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಈ ಸಂದರ್ಭ ನುಡಿದರು.

ಕನ್ನಡ ವಿಷಯ ಪರಿವೀಕ್ಷಕ ಶಮಂತ್ ಮಾತನಾಡಿ, ವೃತ್ತಿಕ್ಷಣವನ್ನುಕಲಿತರೆ ಮುಂದಾಗು ದೊಡ್ಡ ಅನಾಹುತವನ್ನು ತಪ್ಪಿಸಬಹುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವೃತ್ತಿ ಶಿಕ್ಷಣದ ಮೂಲ ಪರಿಕಲ್ಪನೆಕೊಟ್ಟವರುಗಾಂಧೀಜಿಯವರು, ಶಿಕ್ಷಣ ಕೇವಲ ಭೌತಿಕಜ್ಞಾನವಲ್ಲ ಬದಲಾಗಿ ನೈತಿಕ, ಸಾಂಸ್ಕೃತಿಕ, ವೈಜ್ಞಾನಿಕ, ವೈಚಾರಿಕ, ಸಾಮಾಜಿಕ, ಬೆಳವಣಿಗೆಗೆ ದಾರಿಮಾಡಿಕೊಡುತ್ತದೆ ಎಂದರು.
ಕನ್ನಡಾಂಬೆ ಭುವನೇಶ್ವರಿಯ ಪ್ರತಿಮೆಯನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಮೇಶ್ ಕಲ್ಲಡ್ಕ ಮತ್ತು ಹಿರಿಯ ವಿದ್ಯಾರ್ಥಿ ನಿತಿನ್ ಕಲ್ಲಡ್ಕ ಅನಾವರಣಗೊಳಿಸಿದರು.

ಕಾರ್‍ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ್ ಮಾಧವ, ವಯಸ್ಕರ ಶಿಕ್ಷಣಾಧಿಕಾರಿಯಾದ ಸುಧಾಕರ್ ಕೆ, ವಸ್ತು ಪ್ರದರ್ಶನ ನೋಡಲ್ ಅಧಿಕಾರಿ ಶೊಭಾ ಎನ್, ಬಂಟ್ವಾಳದ ಕ್ಷೇತ್ರ ಸಮನ್ವಯಅಧಿಕಾರಿ ರಾಧಾಕೃಷ್ಣ, ಶ್ರೀರಾಮ ವಿದ್ಯಾಕೇಂದ್ರ ಸಹಸಂಚಾಲಕರಾದ ರಮೇಶ್‌ಎನ್, ಕಲ್ಲಡ್ಕ ಲಕ್ಷ್ಮೀಗಣೇಶ್ ಹೋಟೇಲಿನ ಮಾಲಿಕರಾದ ರಾಜೇಂದ್ರ ಹೊಳ್ಳ, ಮೈಸ್ ಸಂಸ್ಥೆಯ ಮಾಲಕರಾದ ರಮೇಶ್ ಪೂಜಾರಿ, ಸಂಭ್ರಮ ಎಲೆಕ್ಟ್ರಾನಿಕ್‌ನ ಮಾಲಕರಾದ ಗಿರೀಶ್ ನೆಟ್ಲ, ದಕ್ಷಿಣಕನ್ನಡ ಜಿಲ್ಲಾಚಿತ್ರಕಲಾ ಸಂಘದಅಧ್ಯಕ್ಷರಾದ ಚೆನ್ನಕೇಶವ, ಬಂಟ್ವಾಳ ತಾಲೂಕು ಚಿತ್ರಕಲಾ ಸಂಘದ ಅಧ್ಯಕ್ಷರಾದ ಮುರಳಿ ಕೃಷ್ಣ, ಶಿಕ್ಷಣ ಸಂಯೋಜಕರಾದ ಸುಶೀ, ಬಂಟ್ವಾಳ ತಾಲೂಕು ಮುಖ್ಯೋಪಾದ್ಯಾಯರ ಸಂಘದ ಅಧ್ಯಕ್ಷರಾದ ರಮಾನಂದ, ಶ್ರೀರಾಮ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ವಸಂತಿಕುಮಾರಿ ಉಪಸ್ಥಿತರಿದ್ದರು. ದೇವದಾಸ್ ಕೆ. ಸ್ವಾಗತಿಸಿದರು. ಸುಫಲಾ ಬಿ. ವಂದಿಸಿದರು. ಜಿನ್ನಪ್ಪ ಏಳ್ತಿಮಾರ್ ಕಾರ್ಯಕ್ರಮ ನಿರೂಪಿಸಿದರು.

www.bantwalnews.com Editor: Harish Mambady For Advertisements Contact: 9448548127

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ