ಬಂಟ್ವಾಳ: ಪ್ರತ್ಯೇಕ ಅಪಘಾತದಲ್ಲಿ ವಾಹನ ಡಿಕ್ಕಿಯಾಗಿ ಇಬ್ಬರು ಗಾಯಗೊಂಡ ಕುರಿತು ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ. ಎರಡೂ ಘಟನೆಗಳು ಬುಧವಾರ ನಡೆದಿವೆ.
ಬ್ರಹ್ಮರಕೂಟ್ಲು ಸಮೀಪ ಮದುವೆಯೊಂದಕ್ಕೆ ಬಂದು ರಸ್ತೆ ದಾಟುತ್ತಿದ್ದ ಸಂದರ್ಭ ಬೈಕೊಂದು ಡಿಕ್ಕಿಯಾಗಿ ಪೆರ್ಲಂಪಾಡಿ ಕೊಳ್ತಿಗೆ ಕಲಾಯಿ ನಿವಾಸಿ ದಿನೇಶ್ (60) ಎಂಬವರು ಗಾಯಗೊಂಡಿದ್ದಾರೆ. ಮಧ್ಯಾಹ್ನ ಘಟನೆ ನಡೆದಿದೆ. ಫರಂಗಿಪೇಟೆಯಲ್ಲಿ ನಿಂತಿದ್ದ ವೇಳೆ ಇರಾ ಸಮೀಪ ಕಲ್ಲಾಜೆ ಮನೆಯ ನಾರಾಯಣ ಪೂಜಾರಿ (65) ಎಂಬವರಿಗೆ ಮಂಗಳೂರು ಕಡೆಯಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಘಟನೆ ಬುಧವಾರ ಬೆಳಗ್ಗೆ ನಡೆದಿದ್ದು, ಗುರುವಾರ ಪ್ರಕರಣ ದಾಖಲಾಗಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…