ಬಂಟ್ವಾಳ

RCEP ಒಪ್ಪಂದಕ್ಕೆ ಸಹಿ ಹಾಕದ ನಿಲುವಿಗೆ ಕೇಂದ್ರ ಬದ್ಧವಾಗಿರಲಿ

ಕೇಂದ್ರ ಸರಕಾರ ಆರ್.ಸಿ.ಇ.ಪಿ. ಒಪ್ಪಂದಕ್ಕೆ ಸಹಿ ಹಾಕದೇ ಹಿಂದೆ ಸರಿದ ನಿಲುವನ್ನು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸ್ವಾಗತಿಸುತ್ತದೆ, ಆದರೆ ಯಾವುದೇ ಒತ್ತಡಕ್ಕೆ ಮಣಿಯದೆ ಈ ನಿಲುವಿಗೆ ಬದ್ಧವಾಗಿರಬೇಕು ಎಂದು ಆಶಿಸುತ್ತದೆ ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.

ಬಂಟ್ವಾಳ ಮಿನಿ ವಿಧಾನಸೌಧ ಮುಂಭಾಗ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ನಿಲುವನ್ನು ಸ್ವಾಗತಿಸಿದ ಅವರು ಇದು ರೈತ ಚಳವಳಿಗೆ ಸಂದ ಜಯ ಎಂದು ಹೇಳಿದರು.

ಮುಂದೆ ಮಾರ್ಪಾಡು ಕರಡಿಗೆ ಭಾರತ ಸರಕಾರ ಸಹಿ ಹಾಕಬಹುದು ಎಂಬ ಆತಂಕ ಇದೆ ಎಂದ ಅವರು, ಯಾವುದೇ ಕಾರಣಕ್ಕೂ ಪ್ರಧಾನಿ ನರೇಂದ್ರ ಮೋದಿ ಈ ಒಪ್ಪಂಕ್ಕೆ ಸಹಿ ಹಾಕದೆ ತನ್ನ ನಿಲುವಿಗೆ ಬದ್ಧರಾಗಿರಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಮಾತನಾಡಿದ ಹೋರಾಟಗಾರ್ತಿ ಸ್ವರ್ಣಲತಾ ಭಟ್, ಅಂತಾರಾಷ್ಟ್ರೀಯ ಒಪ್ಪಂದಗಳು ರೈತರ ಹಿತಾಸಕ್ತಿಗೆ ಮಾರಕವಾಗಿದ್ದವು. ದಕ್ಷಿಣ ಕನ್ನಡ ರೈತರಿಗಂತೂ ಇದು ದೊಡ್ಡ ಪೆಟ್ಟು ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಉಪಾಧ್ಯಕ್ಷ ಜಿ.ಟಿ.ರಾಮಸ್ವಾಮಿ, ಎಂ.ರಾಮು ಚೆನ್ನಪಟ್ಟಣ, ರಾಜ್ಯ ಮುಖಂಡ ಲೋಕೇಶ್ ರಾಜೇ ಅರಸ್  ಮಾತನಾಡಿದದರು. ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ, ಗ್ಯಾಟ್ ಒಪ್ಪಂದದ ಅಡ್ಡ ಪರಿಣಾಮಗಳನ್ನು ರೈತ ಅನುಭವಿಸುತ್ತಿದ್ದು, ಇದೀಗ ಆರ್.ಸಿ.ಇ.ಪಿ. ಒಪ್ಪಂದ ಅನುಷ್ಠಾನವಾದರೆ ಕರಾವಳಿಯ ರೈತನಂತೂ ಸಂಪೂರ್ಣ ನೆಲಕಚ್ಚಬೇಕಾದ ಪರಿಸ್ಥಿತಿ ಇತ್ತು ಎಂದರು.

ಪ್ರಮುಖರಾದ ತೀರ್ಥಾರಾಮ ಸುಳ್ಯ, ರಘು ಹಿರಿಸಾವೆ, ಹೊಸೂರು ಕುಮಾರ್, ಜಾನೆಟ್ ಪ್ರಕಾಶ್ ಫೆರ್ನಾಂಡೀಸ್, ಪ್ರಸಾದ್ ಶೆಟ್ಟಿ ಪೆರಾಜೆ, ಶ್ರೀನಿವಾಸ ನಿಡಿಂಜಿ, ದಿವಾಕರ ಪೈ ಮಜಿಗುಂಡಿ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ತಹಸೀಲ್ದಾರ್ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

www.bantwalnews.com Editor: Harish Mambady For Advertisements Contact: 9448548127

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts