ವಿಡಿಯೋ ಕೃಪೆ: ಶ್ರೀಪ್ರಸಾದ್ ಬಂಟ್ವಾಳ sritalkis.
ಭಾನುವಾರ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಮುಂಜಾನೆ ನಡೆದ ದೇವರ ವಿಶ್ವರೂಪ ದರ್ಶನ ಸೇವೆ ಸೇರಿದ್ದ ಭಗವದ್ಭಕ್ತರ ಕಣ್ಮನ ಸೆಳೆಯಿತು.
ವಟಪುರ ಕ್ಷೇತ್ರವಾದ ದೇವಸ್ಥಾನದಲ್ಲಿ ಭಾನುವಾರ ಮುಂಜಾನೆ ಭಕ್ತರು ಸಾಲು ಹಣತೆಗಳಿಂದ ಬೆಳಗಿಸಲ್ಪಟ್ಟ ವಿಶ್ವರೂಪ ದರ್ಶನ ಬೆಳಕಿನ ಲೋಕವನ್ನೇ ಸೃಷ್ಟಿಸಿತು. ಮುಂಜಾನೆಯ ಬ್ರಾಹ್ಮೀ ಮುಹೂರ್ತದಲ್ಲಿ ಭಜಕರು ದೇವಳದ ಸುತ್ತ ಅಳವಡಿಸಿದ ಹಣತೆಯನ್ನು ಬೆಳಗಿಸಿದರು.
ದೇವಳದ ಒಳಾಂಗಣವನ್ನು ಹಾಗೂ ಮಲ್ಲಿಗೆಪ್ರಿಯ ಶ್ರೀ ವೆಂಕಟರಮಣ ದೇವರನ್ನು ಸಿಂಗರಿಸಿದ್ದರೆ ಅದನ್ನು ವೀಕ್ಷಿಸಲು ಊರಪರವೂರಿನ ಭಕ್ತರು ಮತ್ತು ಮಕ್ಕಳು ಆಗಮಿಸಿದ್ದರು. ದೇವಳದ ಹೊರಾಂಗಣದಲ್ಲಿ ಶಂಖ, ಚಕ್ರ, ಗದಾ, ಪದ್ಮ, ಕೊಡಲಿ, ತಾವರೆ, ಮೊದಲಾದ ಚಿತ್ರ ಚಿತ್ತಾರಗಳು ಹಣತೆಗಳಿಂದ ರೂಪ ಪಡೆದವು. ದೇವಳದ ಆಡಳಿತ ಮೊಕ್ತೇಸರರು, ಮೊಕ್ತೇಸರರು ಸೇರಿದಂತೆ ಗಣ್ಯರು ಭಾಗವಹಿಸಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…