ಬಂಟ್ವಾಳ

ಬಿ.ಸಿ.ರೋಡಿನಲ್ಲಿ ಎಕ್ಸಿಬಿಷನ್, ರೋಬಾಟಿಕ್ ಕಾಡುಪ್ರಾಣಿಗಳ ಪ್ರದರ್ಶನ

ಡಿಸೆಂಬರ್ 3ರವರೆಗೆ ವಸ್ತುಪ್ರದರ್ಶನ, ಫನ್ ಎಂಟರ್ ಟೈನ್ಮೆಂಟ್

ಜಾಹೀರಾತು

ಬಂಟ್ವಾಳ ತಾಲೂಕು ಕೇಂದ್ರ ಬಿ.ಸಿ.ರೋಡ್ ಜೋಡುಮಾರ್ಗ ಉದ್ಯಾನವನದ ಬಳಿ ಇರುವ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಪ್ರತಿದಿನ ಸಂಜೆ 5ರಿಂದ ರಾತ್ರಿ 10 ಗಂಟೆವರೆಗೆ ವಸ್ತುಪ್ರದರ್ಶನ, ರೋಬಾಟಿಕ್ ಕಾಡುಪ್ರಾಣಿಗಳ ಪ್ರದರ್ಶನ ನಡೆಯಲಿದೆ. ಈ ವೇಳೆ ಸಾರ್ವಜನಿಕರಿಗಾಗಿ ಶಾಪಿಂಗ್, ಫನ್ ಎಂಟರ್ಟೈನ್ಮೆಂಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈಗಾಗಲೇ ವಸ್ತುಪ್ರದರ್ಶನ ಆರಂಭಗೊಂಡಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಉದ್ಘಾಟಿಸಿದ್ದು, ಉಪಾಧ್ಯಕ್ಷ ಅಬ್ಬಾಸ್ ಆಲಿ, ನ್ಯಾಯವಾದಿ ಅಶೋಕ್ ಬರಿಮಾರು, ಸಾಮಾಜಿಕ ಕಾರ್ಯಕರ್ತ ಎಸ್.ಎಂ.ಇಸ್ಮಾಯಿಲ್, ಎಂ.ಸುಬ್ಬರಾವ್, ಫಾರೂಕ್  ಭಾಗವಹಿಸಿದ್ದರು. ಬಂಟ್ವಾಳದಲ್ಲಿ ಇದೇ ಪ್ರಥಮವಾಗಿ ವಸ್ತುಪ್ರದರ್ಶನವನ್ನು ನಾವು ಆಯೋಜಿಸುತ್ತಿದ್ದು, ಸ್ವಚ್ಛತೆ, ಆರೋಗ್ಯದ ಕಡೆ ಗಮನ, 100ಕ್ಕೂ ಅಧಿಕ ಮಳಿಗೆಗಳು, ಮನರಂಜನೆ, ಮಕ್ಕಳಿಗೆ ಬೋಟಿಂಗ್, 20ಕ್ಕೂ ಅಧಿಕ ಆಟದ ಸಾಮಾಗ್ರಿಗಳು ಇರಲಿವೆ ಎಂದು ಪ್ರದರ್ಶನ ಸಂಸ್ಥೆಯಾದ ಎಕ್ಸಿಬಿಷನ್ ಇಂಡಿಯಾದ ಪ್ರಮುಖ ಎಂ.ಎಸ್.ನಾಗಚಂದ್ರ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಜ್ಯಾದ್ಯಂತ ಒಟ್ಟು ನಾಲ್ಕು ಪ್ರದರ್ಶನಗಳನ್ನು ನೀಡಿದ್ದು, ಇದು ಐದನೇ ಪ್ರದರ್ಶನ, ರೋಬೋಟಿಕ್ ಎನಿಮಲ್ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿವೆ. ಹ್ಯಾಂಡ್ಲೂಮ್, ಕೈಮಗ್ಗದ ವಸ್ತುಗಳು, ಮನೆಬಳಕೆ ಸಾಮಾಗ್ರಿಗಳು, ಪುಸ್ತಕ, ಫುಡ್ ಕೋರ್ಟ್, ಸಂಗೀತ ಕಾರಂಜಿ, ದೊಡ್ಡ ಜಯಂಟ್ ವೀಲ್, ಟೊರಾ ಟೊರಾ, ಬ್ರೇಕ್ ಡ್ಯಾನ್ಸ್, ಡ್ರ್ಯಾಗನ್ ಟ್ರೈನ್, ವಾಟರ್ ಬೋಟ್, ಬೌನ್ಸಿ ಮತ್ತು ಮಕ್ಕಳ ಅಮ್ಯೂಸ್ ಮೆಂಟ್ ಇರಲಿದೆ ಎಂದವರು ಮಾಹಿತಿ ನೀಡಿದರು. ಶಾಲೆಯವರು ಸಂಪರ್ಕಿಸಿದರೆ, ಶೇ.50ರಷ್ಟು ರಿಯಾಯಿತಿಯನ್ನು ಪ್ರವೇಶ ದರದಲ್ಲಿ ನೀಡಲಾಗುತ್ತದೆ ಎಂದರು. ಸುಮಾರು 1 ಲಕ್ಷದಷ್ಟು ಗ್ರಾಹಕರು ಆಗಮಿಸುವ ನಿರೀಕ್ಷೆ ಇದ್ದು, ಸ್ವಚ್ಛತೆಗೆ ಗರಿಷ್ಠ ಆದ್ಯತೆ ನೀಡಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಸ್.ಕೆ.ಪಾಟೀಲ್, ಮಹಮ್ಮದ್ ಕಬೀರ್, ಎಸ್.ಶಿವಕುಮಾರ್ ಉಪಸ್ಥಿತರಿದ್ದರು.

www.bantwalnews.com Editor: Harish Mambady For Advertisements Contact: 9448548127

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts