ಕಡೇಶಿವಾಲಯ ಕ್ಷೇತ್ರದಲ್ಲಿ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಹಾಗೂ ಶ್ರೀರಾಮಚಂದ್ರನಲ್ಲಿ ಪ್ರಾರ್ಥಿಸಲಾಯಿತು. ಅಧ್ಯಾಪಕ ಭಾಸ್ಕರ್ ನಾಯ್ಕ್ ದೀಪ ಬೆಳಗಿಸಿದರೆ, ಕಾರ್ತಿಕ್ ಮೇರ್ಲ ಕ್ರೀಡಾಂಗಣವನ್ನು ಉದ್ಘಾಟಿಸಿದರು.
ಮಾಣಿ ಹಾಗೂ ಪೆರ್ನೆ ಮಂಡಲದ ತಂಡಗಳಿಗೆ ಲಗೋರಿ ಪಂದ್ಯಾಟ ನಡೆಯಿತು.ನಂತರ ಬಾಲಕರ ಕಬ್ಬಡ್ಡಿ ಬಾಲಕಿಯರ ಒಂಟಿಕಾಲಿನ ಓಟ, ಕೆರೆದಡ, ಸಂಗೀತ ಕುರ್ಚಿ, ಕುಸ್ತಿ, ತಪ್ಪಾಂಗಾಯಿ, ಪುರುಷರ ಗುಂಡೆಸೆತದ ಬಳಿಕ ತುಳಸಿಪೂಜೆ ಹಾಗೂ ಗೋಪೂಜೆ ನೆರವೇರಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಯಲ್ಲಿ ಭಾರತ ಮಾತಾ ಪೂಜನಾ ನಡೆಯಿತು. ಹಿಂದು ಜಾಗರಣ ವೇದಿಕೆ ಮುಖಂಡ ರಾಧಾಕೃಷ್ಣ ಅಡ್ಯಂತಾಯ, ನರಸಿಂಹ ಮಾಣಿ, ಗಣರಾಜ್ ಭಟ್ ಕೆದಿಲ, ಮನೋಜ್ ಪೆರ್ನೆ, ವಿಟ್ಲ ಪ್ರಖಂಡ ಭಜರಂಗದಳ ಸಂಚಾಲಕ ಅಕ್ಷಯ ರಜಪೂತ್, ಹಿಂದೂ ಸಂರಕ್ಷಣಾ ಸಮಿತಿ ಮಂಗಳೂರು ಅಧ್ಯಕ್ಷ ಕೆ.ಆರ್ ಶೆಟ್ಟಿ ಅಡ್ಯಾರ್ ಪದವು, ಬಿಜೆಪಿ ಮುಖಂಡ ದಿನೇಶ್ ಅಮ್ಟೂರು, ಅಮೃತಸಂಜೀವಿನಿ ಸೇವಾಸಂಸ್ಥೆಯ ಸದಸ್ಯರು ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು. ಸಂಜೀವಿನಿ ಸದಸ್ಯ ಅಲೋಕಿತ್ ಶೆಟ್ಟಿ ರ ಹುಟ್ಟುಹಬ್ಬ ಪ್ರಯುಕ್ತ ಆಯ್ದ ಬಡಮಕ್ಕಳಿಗೆ ಪುಸ್ತಕ ಹಸ್ತಾಂತರಿಸಲಾಯಿತು. ಅಹರ್ಶಿನಿಯಾಗಿ ಪುರುಷರ ಕಬ್ಬಡ್ಡಿ ಹಾಗೂ ಹಗ್ಗಜಗ್ಗಾಟ ಪಂದ್ಯಾಟ ನೆರವೇರಿತು ಈ ಸಂದರ್ಭದಲ್ಲಿ ಕಬಡ್ಡಿ ತರಬೇತುದಾರ ದೀಪಕ್ ಬೋಳಂತೂರು ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಮನ್ಮಥ ಶೆಟ್ಟಿ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು. ಸೆಲ್ಫೀ ವಿಥ್ ಗುರುಸ್ವರೂಪಿ ಸ್ಪರ್ಧೆಯಲ್ಲಿ ಸುಮಾರು 400 ಕ್ಕೂ ಮಿಕ್ಕಿ ಸ್ಪರ್ಧಾಳುಗಳು ಭಾಗವಹಿಸಿದ್ದರು.