ಮೇಲ್ಕಾರಿನ ಗುರುಕುಲ ಸಂಗೀತ ಕಲಾಕೇಂದ್ರದಲ್ಲಿ ಮಕ್ಕಳು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಇಲ್ಲಿನ ಎಂ.ಹೆಚ್.ಹೈಟ್ಸ್ ನಲ್ಲಿರುವ ಗುರುಕುಲ ಸಂಗೀತ ಶಾಲೆಯಲ್ಲಿ ಜಾತಿ, ಮತ ಭೇದ ಭಾವವಿಲ್ಲದೆ ನಡೆದ ದೀಪಾವಳಿ ಆಚರಣೆಯಲ್ಲಿ ಪರಿವಾರದ ಮಕ್ಕಳಿಗೆ ಚಿತ್ರಕಲೆ, ಗೂಡುದೀಪ, ಗೀತ ಗಾಯನ ಸ್ಪರ್ಧೆಗಳನ್ನು ಆಯೋಜಿಸಲಾಯಿತು.
ವಿವಿಧ ವಿನೋದಾವಳಿ, ಭಜನಾ ಕಾರ್ಯಕ್ರಮ, ಬಹುಮಾನ ವಿತರಣೆ ನಡೆಯಿತು. ಸಾಲು ಸಾಲಾಗಿ ದೀಪಗಳನ್ನು ಹಚ್ಚಿ ಅರಿವಿನ ಬೆಳಕನ್ನು ನೀಡಿ ಅಂತರಂಗ ಶಕ್ತಿಯ ದಿವ್ಯ ಜ್ಯೋತಿಯನ್ನು ಬೆಳಗುವಂತೆ ಪ್ರಾರ್ಥಿಸಲಾಯಿತು. ಕಲಾಕೇಂದ್ರದ ಸಂಗೀತ ಶಿಕ್ಷಕಿ ಗುರುಪ್ರಿಯ ಶಿವಾನಂದ ಕಾಮತ್ ಕಾರ್ಯಕ್ರಮ ಆಯೋಜಿಸಿದರು.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)