ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಸಮೀಪದ ಕರ್ಪೆ ಎಂಬಲ್ಲಿ ಬುಧವಾರ ಬೆಳಗ್ಗೆ ಅಂಚೆ ಕಚೇರಿ ಅಂಗನವಾಡಿ ಕಟ್ಟಡದ ಮೇಲ್ಛಾವಣಿ ಒಂದು ಭಾಗ ಕುಸಿದ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆರ್. ಸೆಲ್ವಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಳೆಯದಾದ ಹಂಚಿನ ಛಾವಣಿಯ ಈ ಅಂಗನವಾಡಿ ಕಟ್ಟಡ ಈ ವರ್ಷ ಸುರಿದ ಭಾರಿ ಮಳೆಗೆ ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ಅರ್.ಸಿ.ಸಿ.ಮೇಲ್ಚಾವಣಿ ಕಾಮಗಾರಿ ಗಾಗಿ ತಾಲೂಕು ಪಂಚಾಯತ್ ಮತ್ತು ಇಲಾಖೆಯ ವತಿಯಿಂದ ಅನುದಾನ ನಿಗದಿಪಡಿಸಿ ಕ್ರಿಯಾಯೋಜನೆ ತಯಾರಿಸಲಾಗಿತ್ತು. ಮಳೆಗಾಲ ಕಳೆದು ಕಾಮಗಾರಿ ಆರಂಭಗೊಳ್ಳುವ ಕುರಿತು ಮಾತುಕತೆ ನಡೆದಿತ್ತು. ಆದರೆ ಮಂಗಳವಾರ ಮತ್ತು ಬುಧವಾರ ಸುರಿದ ಮಳೆಗೆ ಮೇಲ್ಚಾವಣಿಯ ಒಂದು ಪಾರ್ಶ್ವ ಕುಸಿದುಬಿತ್ತು. ಈ ಸಂದರ್ಭ ಅಲ್ಲೇ ಇದ್ದ ಅಂಗನವಾಡಿ ಸಹಾಯಕಿ ಸಂದ್ಯಾ ಪ್ರಭು ಮತ್ತು ಮೂರು ಪುಟ್ಟ ಕಂದಮ್ನಗಳು ಅಪಾಯದಿಂದ ಪಾರಾದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಘಟನೆ ವಿವರ ಪಡೆದು ತುರ್ತಾಗಿ ಅನುದಾನ ವಿನಿಯೋಗಿಸಿ ಕಾಮಗಾರಿ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪರ್ಯಾಯ ವ್ಯವಸ್ಥೆಯಾಗಿ ಹತ್ತಿರದ ಭಾಸ್ಕರ ನಾಯಕ್ ಅವರ ಕಟ್ಟಡಕ್ಕೆ ಅಂಗನವಾಡಿಯನ್ನು ಸ್ಥಳಾಂತರಿಸಲು ತೀರ್ಮಾನಿಸಲಾಯಿತು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ:ಅರ್. ಸೆಲ್ವಮಣಿ ತಹಸೀಲ್ದಾರ್ ಅವರ ಬಳಿ ಸಮಾಲೊಚಿಸಿ ರಿಪೆರಿ ಕುರಿತು ಅನುದಾನ ಬಿಡುಗಡೆಗೆ ಪ್ರಯತ್ನಿಸುವುದಾಗಿ ತಿಳಿಸಿದರು.
ಸ್ಥಳೀಯ ಜಿಪಂ ಸದಸ್ಯ ತುಂಗಪ್ಪ ಬಂಗೇರ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು, ಮಹಿಳಾ ಮಕ್ಕಲಾ ಕಲ್ಯಾಣ ಇಲಾಖೆಯ ಉಪ ನಿರ್ದೆಶಕರಾದ ಸುಂದರ ಪೂಜಾರಿ, ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಅರ್, ಶಿಶು ಅಭಿವೃದ್ಧಿ ಯೋಜನಾದಿಕಾರಿ ಶ್ರೀಲತಾ, ಜಿಲ್ಲಾ ಪಂಚಾಯತ್ ಇಂಜಿನಿಯರ್ ಅಜಿತ್, ಪಂಚಾಯತ ಅದ್ಯಕ್ಷರಾದ ಗುಲಾಬಿ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಪೂಜಾರಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಧರ್ಮರಾಜ್. ಪಿ ಅವರೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಅಂಗನವಾಡಿ ಕಟ್ಟಡ ಮೇಲ್ಚಾವಣಿ ಅರ್.ಸಿ.ಸಿ.ಯಿಂದ ನಿರ್ಮಿಸಲು ತಾಲೂಕು ಪಂಚಾಯತ್ ನಿಂದ ಸದಸ್ಯರಿಗೆ ಲಭ್ಯವಿರುವ 1.85 ಲಕ್ಷ ರೂ ಅನುದಾನ ಕಾಯ್ದಿರಿಸಿ ,ಇನ್ನೆನೂ ಕಾಮಗಾರಿ ಪ್ರಾರಂಬ ಮಾಡುವ ಷ್ಟರಲ್ಲಿ ಈ ಘಟನೆ ಸಂಬವಿಸಿದೆ ಎಂದು ತಾಪಂ ಸದಸ್ಯ ಪ್ರಭಾಕರ ಪ್ರಭು ತಿಳಿಸಿದ್ದಾರೆ.