ಕಲ್ಲಡ್ಕ

ಬಿಲ್ಲವ ಸಂಘ ಮಹಾಸಭೆ, ಶ್ರೀ ನಾರಾಯಣಗುರು ಜಯಂತಿ

ಯುವ ಬಿಲ್ಲವರು  ರಾಜಕೀಯವಾಗಿ  ಮುಂದೆ ಬಂದು ನಾಯಕತ್ವ ಗುಣವನ್ನು  ಪಡೆಯಬೇಕು  ಎಂದು ಮಾಜಿ ಶಾಸಕ ಬಿಲ್ಲವ ಮುಖಂಡ ರುಕ್ಮಯ ಪೂಜಾರಿ ಹೇಳಿದರು.

ಜಾಹೀರಾತು

ಕೇಪುಳ ಕೋಡಿಯಲ್ಲಿ ನಡೆದ ಕಲ್ಲಡ್ಕ ಬಿಲ್ಲವ ಸಂಘ ಉಪಸಮಿತಿ ಬಿರುವೇರ್ ಅರಬೆಟ್ಟು- ಎರ್ಮೆ ಮಜಲು -ವೀರಕಂಬ ವಾರ್ಷಿಕ ಮಹಾಸಭೆ  ಹಾಗೂ  ಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದರು .

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮಜಿ ಶಾಲಾ ಮುಖ್ಯಶಿಕ್ಷಕ ನಾರಾಯಣ ಪೂಜಾರಿ ಮಾತನಾಡಿ ಮಕ್ಕಳಿಗೆ ಮನೆಯಲ್ಲಿ ಉತ್ತಮ ಸಂಸ್ಕಾರ ಸಿಗದೇ ಇದ್ದರೆ ಯಾವ ಶಿಕ್ಷಣವು ದೊರೆತರು ಪ್ರಯೋಜನವಿಲ್ಲ .ಬಿಲ್ಲವ ಯುವಕರು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕರೆ ನೀಡಿದರು .

ಕಾರ್ಯಕ್ರಮದಲ್ಲಿ ಕಳೆದ ವರ್ಷ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ದಿವಂಗತ ತೆಕ್ಕಿ ಪಾಪು ಮೋನಪ್ಪ ಪೂಜಾರಿ ಅವರ ಸ್ಮರಣಾರ್ಥ ವಿದ್ಯಾರ್ಥಿವೇತನ ನೀಡಲಾಯಿತು .

ಕಲ್ಲಡ್ಕ ವಲಯ ಬಿಲ್ಲವ ಸಂಘದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಕೇಪುಳ ಕೊಡಿ , ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಪುಷ್ಪ ಸತೀಶ್ ಪೂಜಾರಿ, ಬಿರುವೇರ್ ವೀರಕಂಭ ಗ್ರಾಮ ಸಮಿತಿಯ ಗೌರವ ಅಧ್ಯಕ್ಷ ಕೊರಗಪ್ಪ ಪೂಜಾರಿ, ಕಾರ್ಯದರ್ಶಿ ಸುರೇಶ್ ಸುವರ್ಣ, ಉಪಸ್ಥಿತರಿದ್ದರು . ಶ್ರದ್ಧಾ, ನಯನ, ಸೃಜನ ,ಪ್ರಾರ್ಥಿಸಿ ಗ್ರಾಮ ಸಮಿತಿ ಅಧ್ಯಕ್ಷ ಜಯಪ್ರಕಾಶ್ ತೆಕ್ಕಿ ಪಾಪು ಸ್ವಾಗತಿಸಿ ,ರವೀಂದ್ರ ಪಾದೆ ವಂದಿಸಿದರು. ಶೇಖರ್ ಬಂಗೇರ ಪ್ರಾಸ್ತಾವಿಕ ದೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

www.bantwalnews.com Editor: Harish Mambady For Advertisements Contact: 9448548127

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.