ಬಿ.ಸಿ.ರೋಡಿನ ಸೌಂದರ್ಯವೃದ್ಧಿಗೆ ಸೋಮವಾರ ಚಾಲನೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಶಿಲಾನ್ಯಾಸಕ್ಕೆ ಮುನ್ನ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಸಚಿವರು, ಸಂಸದರು, ಶಾಸಕರು,ವಿವಿಧ ಕಂಪೆನಿ ಮುಖ್ಯಸ್ಥರು, ಉದ್ಯಮಿಗಳ ಹಾಗೂ ರಾ.ಹೆ. ಸಹಿತ ವಿವಿಧ ಇಲಾಖಾಧಿಕಾರಿಗಳ ಸಮ್ಮುಖ ಯೋಜನಾ ವರದಿ ಮಂಡಿಸಲಾಯಿತು.
ಎಲ್ಇಡಿ ಪರದೆಯ ಮೂಲಕ ವಿನ್ಯಾಸಕಾರ ಧರ್ಮರಾಜ್ ಅವರು ಪೌರಾಡಳಿತ ಸಚಿವ ಆರ್. ಆಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ವೇದವ್ಯಾಸ ಕಾಮತ್, ಡಾ.ವೈ. ಭರತ್ ಶೆಟ್ಟಿ, ಸಂಜೀವ ಮಠಂದೂರು ಹಾಗೂ ವಿವಿಧ ಸಂಸ್ಥೆಯ ಮುಖ್ಯಸ್ಥರ ಹಾಗೂ ಉದ್ಯಮಿಗಳಿಗೆ ವಿವರಿಸಿದರು.
ಯಾವ ಯಾವ ಕಂಪೆನಿಗಳಿಗೆ ಯಾವ್ಯಾವ ಕಾಮಗಾರಿ ಹಂಚಿಕೆ ಮಾಡಲಾಗಿರುವ ಮತ್ತು ಎಷ್ಠೆಷ್ಟು ಅನುದಾನ ಒದಗಿಸಲಿದೆ ಎಂಬುದರ ಕುರಿತಂತೆ ಅವರು ಮಾಹಿತಿ ನೀಡಿದರು.
ಪೊಲೀಸ್ ಇಲಾಖೆಯ ಪ್ರಸ್ತಾವನೆಯಂತೆ 2 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ರೀತಿಯ ಅತ್ಯತ್ಕೃಷ್ಟ ಗುಣಮಟ್ಟದ ಸಿಸಿ ಕ್ಯಾಮರಾ ಅಳವಡಿಸಲಾಗುತ್ತದೆ. ಸರ್ವೀಸ್ ರಸ್ತೆಯಲ್ಲಿ ಫುಟ್ ಪಾತ್, ಕೈಕುಂಜೆ ರಸ್ತೆ ಅಗಲೀಕರಣ, ಬಸ್ ನಿಲ್ದಾಣ ಎದುರು ಸರ್ಕಲ್, ಬೀದಿದೀಪ, ಪಾರ್ಕಿಂಗ್, ಎರಡು ಹೈಪೈ ಶೌಚಾಲಯ , ವಾರದ ಸಂತೆಗೆ ವ್ಯವಸ್ಥೆ ಕಾರ್ಯಕ್ರಮದ ಆಯೋಜನೆಗೆ ವೇದಿಕೆ ,ಸಂಸದರ ನಿಧಿಯಿಂದ 5 ಬಸ್ ಬೇ ಈ ಯೋಜನೆಯಲ್ಲಿ ಒಳಗೊಂಡಿದೆ ಎಂದು ಧರ್ಮರಾಜ್ ಮಾಹಿತಿ ನೀಡಿದರು.
ಸರ್ವಿಸ್ ಮತ್ತು ಮುಖ್ಯ ರಸ್ತೆ,ಕೆಎಸ್ ಆರ್ ಟಿಸಿ ಬಸ್ ನಿಲ್ಲಾಣದ ಮುಂಭಾಗ ಸಣ್ಣ ವೃತ್ತ ನಿರ್ಮಾಣ ಸಹಿತ ವಿವಿಧ ಕಾಮಗಾರಿಯನ್ನು ರಾ.ಹೆ.ಪ್ರಾ.ದಿಂದ ನಡೆಸಲು ಸಂಸದ ನಳಿನ್ ಕುಮಾರ್ ಕಟೀಲ್ ರಾ.ಹೆ.ಪ್ರಾ.ಅಧಿಕಾರಿಗಳಿಗೆ ಸೂಚಿಸಿದರಲ್ಲದೆ ಅನುದಾನ ಒದಗಿಸಿದ ಎಲ್ಲಾ ಸಂಸ್ಥೆಗಳ ನಾಮಫಲಕವನ್ನು ಅಳವಡಿಸಬೇಕು ಎಂದರು.
ಮಾಜಿ ಸಚಿವ ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೂಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ.ಸದಸ್ಯ ರಾದ ತುಂಗಪ್ಪ ಬಂಗೇರ, ಕಮಲಾಕ್ಷೀ ಕೆ.ಪೂಜಾರಿ, ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಮೀಪ್ರಸಾದ್, ಪುತ್ತೂರು ಡಿ.ವೈಎಸ್ ಪಿ ದಿನಕರ ಶೆಟ್ಟಿ, ಜಿ.ಪಂ.ಸಿಇಒ ಡಾ. ಆರ್. ಸೆಲ್ವಮಣಿ, ಎನ್.ಎಚ್.ಎ.ಐ.ನ ಪ್ರಾಜೆಕ್ಟ್ ಡೈರೆಕ್ಟರ್ ಶಿಶುಮೋಹನ್ , ತಹಶೀಲ್ದಾರ್ ರಶ್ಮಿ .ಎಸ್ .ಆರ್, ಎ.ಜೆ.ಆಸ್ಪತ್ರೆಯ ಮುಖ್ಯಸ್ಥ ಡಾ. ಪ್ರಶಾಂತ್ ಮಾರ್ಲ, ತಾ.ಪಂ.ಇ.ಒ.ರಾಜಣ್ಣ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಯಶವಂತ್ ಕುಮಾರ್, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ದೇವದಾಸ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ, ಸುಮಿತ್ ಆಳ್ವ, ಸುಲೋಚನಾ ಜಿ.ಕೆ.ಭಟ್, ಗೋವಿಂದ ಪ್ರಭು,ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಪ್ರಭಾಕರ ಪ್ರಭು, ಪುರುಷೋತ್ತಮ ಶೆಟ್ಟಿ, ಗೋಪಾಲಕೃಷ್ಣ ಹೇರಳೆ, ಎನ್.ಎಂಪಿ.ಟಿ, ಎಂ. ಅರ್.ಪಿ.ಎಲ್, ಒ.ಎನ್.ಜಿ.ಸಿ.ಎಚ್.ಪಿ, ಭಾರತ್ ಪೆಟ್ರೋಲಿಯಂ, ಇಂಡಿಯನ್ ಒಯಿಲ್ ಕಂಪನಿಯ ಮುಖ್ಯಸ್ಥರು,ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಶಾಸಕ ಯು.ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಸ್ವಾಗತಿಸಿದರು.
www.bantwalnews.com Editor: Harish Mambady For Advertisements Contact: 9448548127