ಸಂಗೀತ

ಸಂಗೀತರಸಿಕರ ಮನತಣಿಸಿದ ಪಂಚಮದ ಇಂಚರ

Nagabhushan Hegde

ಕಳೆದ 8 ವರ್ಷಗಳಿಂದ ಬಹಳ ಅಚ್ಚುಕಟ್ಟಾಗಿ ಆಯೋಜಿಸಲ್ಪಡುತ್ತಿರುವ ಸಂಗೀತದ ಖ್ಯಾತನಾಮರ ಜೊತೆಗೆ ಪ್ರಾದೇಶಿಕ ಪ್ರತಿಭೆಗಳನ್ನೂ ಪ್ರೋತ್ಸಾಹಿಸುತ್ತಾ ಮಂಗಳೂರು ಆಸುಪಾಸಿನ ಸಂಗೀತ ಪ್ರೇಮಿಗಳ ಜೊತೆಗೆ ಹೊರಗಿನ ರಾಜ್ಯ ಹಾಗೂ ಜಿಲ್ಲೆಗಳ ಸಂಗೀತ ರಸಿಕರನ್ನು ಆಕರ್ಷಿಸುತ್ತಿರುವ  ಸಂಗೀತ ಹಬ್ಬ ಪಂಚಮದ ಇಂಚರ ವಿವೇಕ ಸ್ಮೃತಿ.

Gurudatt-agrahara-Krishnamoorthy

ಶ್ರೀ ರಾಮಕೃಷ್ಣ ಮಠ, ಮಂಗಳೂರು ಹಾಗೂ ಚಿರಂತನ  ಚ್ಯಾರಿಟೇಬಲ್ ಟ್ರಸ್ಟ್ (ರಿ), ಸುರತ್ಕಲ್ ಪಂಚಮದ ಇಂಚರ ಬಳಗಜೊತೆಯಾಗಿ ಆಯೋಜಿಸಿದ  ಪಂಚಮದ ಇಂಚರ ವಿವೇಕ ಸ್ಮೃತಿ 19ದಿನಾಂಕ 13 ಅಕ್ಟೋಬರ್ 2019 ಭಾನುವಾರ, ಬೆಳಗ್ಗೆ 7ರಿಂದ ಸಂಜೆ 7.30 ತನಕ ಮಂಗಳೂರಿನ ಶ್ರೀ ರಾಮಕೃಷ್ಣ ಮಠದ ವಿವೇಕಾನಂದ ಸಭಾಂಗಣದಲ್ಲಿ ನಡೆಯಿತು.

flute sisters

ಆಗ್ರಾ, ಗ್ವಾಲಿಯರ್, ಕಿರಾಣಾ, ಧಾರವಾಡ, ಪಟಿಯಾಲಾ, ಮೈಹಾರ, ಜೈಪುರ್ ಘರಾಣಾಗಳ ಪ್ರತಿನಿಧಿಗಳು ತಮ್ಮ ಘರಾಣಾಗಳ ವಿಷೇಶತೆಗಳನ್ನು ಪ್ರಸ್ತುತಪಡಿಸುವ ಮೂಲಕ ಮಂಗಳೂರಿನ ಸಂಗೀತ ರಸಿಕರಿಗೆ ವೈವಿದ್ಯಮಯ ಸಂಗೀತ ರುಚಿಯನ್ನು ಉಣಬಡಿಸಿದರು.

Swamee Kripaakaraanandaji

ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷರಾದ  ಜಿತಕಾಮಾನಂದ ಸ್ವಾಮೀಜಿ ಇವರು ದೀಪ ಬೆಳಗಿ ಸಂಗೀತೋತ್ಸವವನ್ನು ಉದ್ಘಾಟಿಸಿದರು. ಬಳಿಕ ಮುಂಜಾನೆಯ ರಾಗ ಲಲತ್ ಹಾಗೂ ದೇವಗಿರಿ ಬಿಲಾವಲ್ಗಳನ್ನು ಪಂಡಿತ್ ರವಿಕಿರಣ್ ಮಣಿಪಾಲ ಶಿಷ್ಯರಾದ ಮಂಗಳೂರಿನ ಯುವ ಕಲಾವಿದ ಚೈತನ್ಯ ಜಿ ಭಟ್  ಪ್ರಸ್ತುತಪಡಿಸಿದರು. ಇವರಿಗೆ ತಬಲಾದಲ್ಲಿ ಪಡುಬಿದ್ರೆಯ ಶ್ರೀವತ್ಸ ಶರ್ಮ ಹಾಗೂ ಸಂವಾದಿನಿಯಲ್ಲಿ ಮೈಸೂರಿನ ಶ್ರೀರಾಮ್ ಭಟ್ ಉತ್ತಮವಾಗಿ ಸಾಥ್ ನೀಡಿದರು.

Mohasin Khan

ಎರಡನೆಯ ಕಛೇರಿಯಲ್ಲಿ ಶಿರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಡಾ. ಮಿಥುನ್ ಚಕ್ರವರ್ತಿಯವರು  ಮನ್ಸೂರರ ಗಾಯನ ಶೈಲಿ ತನ್ನ ನಿಖರತೆಯೊಂದಿಗೆ ಪ್ರೇಕ್ಷಕರ ಮನಸೂರೆಗೊಂಡರು. ಬಿಬಾಸ್ ಹಾಗೂ ಜೌನ್ಪುರಿ ರಾಗಗಳೊಂದಿಗೆ ಎರಡು ವಚನಗಳನ್ನು ಪ್ರಸ್ತುತ ಪಡಿಸಿದರು ಇವರಿಗೆ ಬೆಂಗಳೂರಿನ ಶ್ರೀ ಪ್ರಜ್ಞಾನ ಲೀಲಾಶುಕ ಉಪಾಧ್ಯಾಯ ( ಡಾ. ರವೀಂದ್ರ ಕಾಟೋಟಿಯವರ ಶಿಷ್ಯ) ಸಂವಾದಿನಿಯಲ್ಲೂ ಶಶಿಕಿರಣ್ ಮಣಿಪಾಲ ತಬಲಾದಲ್ಲೂ ಉತ್ತಮವಾದ ಸಾಥ್ ಸಂಗತ್ ನೀಡಿದರು.

Dr.Mithun Chakravarti

ನಂತರದ ಕಛೇರಿಯಲ್ಲಿ ವಿದುಷಿ ಅದಿತಿ ಉಪಾಧ್ಯ ಶಿಷ್ಯೆ ಮುಂಬೈಯ ಪ್ರಿಯಾ ಪುರುಷೋತ್ತಮನ್  ತನ್ನ ನೋಂತೊಂ ಆಲಾಪದ ಮೂಲಕ ಸಾಲಗವರಾಳಿ ರಾಗವನ್ನು ಆರಂಭಿಸಿ ಬಳಿಕ ಯಮನೀ ಬಿಲಾವಲ್ ರಾಗದಲ್ಲಿ ಎರಡು ಬಂಧಿಶ್ಗಳನ್ನು ಪ್ರಸ್ತುತಪಡಿಸಿದರು. ಇವರಿಗೆ ಭಾರವಿ ದೇರಾಜೆ ಹಾಗೂ ಮುಂಬೈಯಲ್ಲಿ ನೆಲೆಸಿರುವ ಉಡುಪಿಯ ಪ್ರಸಾದ್ ಕಾಮತ್ ತಬಲಾ ಹಾಗೂ ಹಾರ್ಮೋನಿಯಂನಲ್ಲಿ  ಸಹಕರಿಸಿದರು.

Chaitanya

ಬೆಳಗ್ಗಿನ ಕೊನೆಯ ಕಛೇರಿಯನ್ನು ಧಾರವಾಡದ ಮೊಹಸಿನ್ಖಾನ್ ತನ್ನ ಸಿತಾರ್ ವಾದನದ ಮೂಲಕ ನಡೆಸಿಕೊಟ್ಟರು. ಸಿಮೇಂದ್ರ ಮದ್ಯಮ ರಾಗವನ್ನು ಪ್ರಸ್ತುತಪಡಿಸಿದ ಇವರು ಧುನ್ನೊಂದಿಗೆ ಕೊನೆಗೊಳಿಸಿದರು. ಬೆಂಗಳೂರಿನ ಶೈಲೇಶ್ ಶೆಣೈ ತಬಲಾದಲ್ಲಿ ಉತ್ತಮ ಸಾಥ್ ನೀಡಿದರು.

ಅಪರಾಹ್ನದ ಸಂಗೀತ ಗೋಷ್ಠಿಯನ್ನು ಆರಂಬಿಸಿದ ವಾರಣಾಸಿಯಲ್ಲಿ ರಾಮಕೃಷ್ಣ ಮಿಷನ್ ನಡೆಸುತ್ತಿರುವ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಸ್ವಾಮಿ ಕೃಪಾಕರಾನಂದಜಿ ಇವರು ಭೀಮ್ ಪಲಾಸಿ ರಾಗವನ್ನು ಪ್ರಸ್ತುತಪಡಿಸಿದರು ಕೊನೆಯಲ್ಲಿ ಎರಡು ಸುಂದರ ಭಜನ್ಗಳನ್ನು ಹಾಡಿದರು. ಇವರಿಗೆ ದೀಪಕ್ ನಾಯಕ್ ಹರಿಕಂಡಿಗೆ ಹಾಗೂ ಶಿರಸಿಯ ಭರತ್ ಹೆಗಡೆ ಉತ್ತಮವಾಗಿ ಸಾಥ್ ನೀಡಿದರು.

ಬಳಿಕ ಪಂ. ಹರಿಪ್ರಸಾದ್ ಚೌರಾಸಿಯರ ಶಿಷ್ಯರಾದ ದೇಬೊಪ್ರಿಯಾ ಹಾಗೂ ಸುಚಿಸ್ಮಿತಾ ಚಟರ್ಜಿ, ಮುಂಬೈ ಅವರಿಂದ ಕೊಳಲು ವಾದನ ನಡೆಯಿತು. ರಾಗ ಮಧುವಂತಿಯ ಬಳಿಕ ಧುನ್ ನುಡಿಸಿದ ಇವರಿಗೆ ಕೋಟೇಶ್ವರದ ವಿಘ್ನೇಶ್ ಕಾಮತ್ ಸುಂದರವಾಗಿ ತಬಲಾ ಸಾಥ್ ನೀಡಿದರು.

priya purushottaman

ಪಂ. ಅಜಯ್ ಚಕ್ರವರ್ತಿಯವರ ಶಿಷ್ಯರಾದ ಗುರುದತ್ ಅಗ್ರ್ರಹಾರ ಕೃಷ್ಣಮೂರ್ತಿ, ಕಲ್ಕತ್ತ ಪುರಿಯಾ ಕಲ್ಯಾಣ್ ಹಾಗೂ ಮೀರಾಬಾಯಿ ಮಲ್ಹಾರ್ ರಾಗಗಳನ್ನು ಪ್ರಸ್ತುತಪಡಿಸಿ ಒಂದು ಠುಮ್ರಿಯನ್ನು ಚುಟುಕಾಗಿ ಪ್ರಸ್ತುತಪಡಿಸಿದರು. ಇವರಿಗೆ ಬೆಂಗಳೂರಿನ ಗುರುಮೂರ್ತಿ ವೈದ್ಯ ಅವರ ಪುತ್ರ 9ನೆಯ ತರಗತಿಯ ಬಾಲ ಪ್ರತಿಭೆ ರೂಪಕ್ ವೈದ್ಯ ತಬಲದಲ್ಲೂ ಪ್ರಸಾದ್ ಕಾಮತ್ ಸಂವಾದಿನಿಯಲ್ಲೂ ಹಾಗೂ ಸರ್ಫ಼ರಾಜ಼್ ಖಾನ್ ಸಾರಂಗಿಯಲ್ಲೂ ಸಾಥ್ ನೀಡಿದರು.

ಕೊನೆಯಲಿ ಪಂ. ಗಣಪತಿ ಭಟ್ ಹಾಸಣಗಿ ಇವರ ಶಿಷ್ಯರಾದ ನಾಗಭೂಷಣ ಹೆಗಡೆ, ಶಿವಮೊಗ್ಗ ಹೇಮಂತ್ ಹಾಗೂ ಮಧುಕಂಸ್ ರಾಗಗಳನ್ನು ಬಹಳ ಸುಂದರವಾಗಿ ಪ್ರಸ್ತುತಪಡಿಸಿದರು. ಇವರಿಗೆ ಹೊನ್ನಾವರದ ಗುರುರಾಜ್ ಹೆಗಡೆ ಹಾಗೂ ಅಂಕೋಲ ಸಮೀಪದ ಸತೀಶ್ ಭಟ್ ಹೆಗ್ಗಾರ ತಬಲಾ ಹಾಗೂ ಸಂವಾದಿನಿ ಸಾಥ್ ನೀಡಿದರು. ಭೈರವಿಯ ದಯಾನಿ ಬವಾನಿ ಭಜನ್ ನೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಗೌರವ್ ನಾಯಕ್, ಸತೀಶ್ ಕಾಮತ್, ಶ್ರವಣ್ ಪೈ, ಸಂಗೀತಾ ಹೆಗೆಡೆ ಗಿಳಿಗುಂಡಿ, ವೀಣಾನಾಯಕ್ ಹಾಗೂ ಸುಧನ್ವ ತಾನ್ಪುರವಾದನದಲ್ಲಿ ಹಾಗೂ ರಾಮಕೃಷ್ಣ ಆಶ್ರಮದ ವಿದ್ಯಾರ್ಥಿ ಶ್ರೀಷ ಮಂಜೀರದಲ್ಲಿ ಸಹಕರಿಸಿದರು. ಇತ್ತೀಚೆಗೆ ನಮ್ಮನ್ನಗಲಿದ ಸಾಕ್ಸೋಫೋನ್ ಮಾಂತ್ರಿಕ ಪದ್ಮಶ್ರೀ ಕದ್ರಿ ಗೋಪಾಲನಾಥರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪಂಚಮದ ಇಂಚರ ಬಳಗದ ರಾಮಪ್ರಸಾದ್ ಕಾಂಚೋಡು, ಡಾ. ಜಯಪ್ರಸಾದ್ ಅನೇಕಾರ್, ಸೌಮ್ಯಲಕ್ಷ್ಮಿ ಭಟ್, ಕೃಷ್ಣಮೂರ್ತಿ ಹಾಗೂ ಶಂಕರ್ ಜೂನಿಯರ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

www.bantwalnews.com Editor: Harish Mambady For Advertisements Contact: 9448548127

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ