ಸಾಂಸ್ಕೃತಿಕ

ಮಂಗಳೂರಿನಲ್ಲಿ 20ರಂದು ಮಂಥನ – ನೃತ್ಯಪ್ರದರ್ಶನ

ಮಂಗಳೂರಿನ ಮಾನಸಾ ಕುಲಾಲ್, ಬೆಂಗಳೂರಿನ ದಿವ್ಯಾ ಹೊಸಕೆರೆ, ಮುಂಬೈನ ಪ್ರಾಚಿ ಸಾಠಿ ಅವರಿಂದ ಕಾರ್ಯಕ್ರಮ

Prachi Saathi

ಮಂಗಳೂರು ಬಿಜೈಯ ನೃತ್ಯಾಂಗನ್ ಸಂಸ್ಥೆ ಅ.20ರಂದು ಮಂಗಳೂರಿನ ಡಾನ್‌ಬಾಸ್ಕೋ ಸಭಾಂಗಣದಲ್ಲಿ ಮಂಥನ-2019 ನೃತ್ಯ ಕಾರ್ಯಕ್ರಮ ಆಯೋಜಿಸಿದೆ. ಅಂತಾರಾಷ್ಟ್ರೀಯ ಮಟ್ಟದ ಕಲಾವಿದೆ, ಚೆನ್ನೈಯ ನೃತ್ಯಗುರು ಪ್ರಿಯದರ್ಶಿನಿ ಗೋವಿಂದ್ ಸಂಜೆ 5.30ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಜಾಹೀರಾತು

Divya Hoskere

ಬಳಿಕ ಮಂಗಳೂರಿನ ನೃತ್ಯಗುರು ಪ್ರತಿಮಾ ಶ್ರೀಧರ್-ಶ್ರೀಧರ್ ಹೊಳ್ಳರ ಶಿಷ್ಯೆ ಮಾನಸಾ ಕುಲಾಲ್, ಬೆಂಗಳೂರಿನ ಗುರು ಪ್ರವೀಣ್ ಕುಮಾರ್ ಅವರ ಶಿಷ್ಯೆ ದಿವ್ಯಾ ಹೊಸಕೆರೆ ಹಾಗೂ ಮುಂಬೈಯ ಕಲಾವಿದೆ ಪ್ರಾಚಿ ಸಾಠಿ ಅವರ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ಇರಲಿದೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶ.

ಈ ಕಾರ್ಯಕ್ರಮದ ಜತೆಗೆ ಅ.18ರಿಂದ 20ರವರೆಗೆ ಭಾರತೀಯ ವಿದ್ಯಾಭವನದಲ್ಲಿ ಗುರು ಪ್ರಿಯದರ್ಶಿನಿ ಗೋವಿಂದ್ ಅವರ ನೃತ್ಯ ಕಾರ್ಯಾಗಾರವೂ ಇರಲಿದೆ ಎಂದು ಸಂಸ್ಥೆ ನಿರ್ದೇಶಕಿ, ಕಲಾವಿದೆ ರಾಧಿಕಾ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

www.bantwalnews.com Editor: Harish Mambady For Advertisements Contact: 9448548127

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts