ಗ್ರಾಮೀಣ ಜನರಿಗೆ ಸ್ಥಳದಲ್ಲೇ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಕಾರ್ಯ ಶ್ಲಾಘನಾರ್ಹ ಎಂದು ಮಜಿ ಶಾಲಾ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಹೇಳಿದರು.
www.bantwalnews.com Editor: Harish Mambady
ವೀರಕಂಭದ ಮಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಗಣೇಶಕೋಡಿ ಅಂಕದಡ್ಕ ವತಿಯಿಂದ ಕೆಎಂಸಿ ವತಿಯಿಂದ ಉಚಿತ ವೈದ್ಯಕೀಯ, ದಂತ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂಜೀವ ಮೂಲ್ಯ ಅಧ್ಯಕ್ಷತೆ ವಹಿಸಿದ್ದರು. ಕೆಎಂಸಿಯ ಡಾ. ಹರ್ಬಿಟ್ ಮರಿಯೋ ಪಿರೇರ ಶಿಬಿರದ ಕುರಿತು ವಿವರಿಸಿದರು. ತಾಪಂ ಸದಸ್ಯೆ ಗೀತಾ ಚಂದ್ರಶೇಖರ್, ಗ್ರಾಪಂ ಅಧ್ಯಕ್ಷೆ ಪ್ರೇಮಲತಾ, ಮಣಿಪಾಲ ದಂತ ವೈದ್ಯಕೀಯ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಮೃಣಾಲಿನಿ ಶೆಟ್ಟಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ಸಾಮಾನ್ಯ ರೋಗ ತಜ್ಞರು, ಎಲುಬು ಮತ್ತು ಕೀಲು ತಜ್ಞರು, ಸ್ತ್ರೀರೋಗ ತಜ್ಞರು ,ಕಣ್ಣಿನ ತಜ್ಞರು ,ಕಿವಿ ಮೂಗು ಮತ್ತು ಗಂಟಲು ತಜ್ಞರು, ಮಕ್ಕಳ ರೋಗ ತಜ್ಞರು, ಹಾಗೂ ದಂತ ಚಿಕಿತ್ಸಾ ತಜ್ಞರು ಭಾಗವಹಿಸಿದ್ದರು. ಅಗತ್ಯ ಫಲಾನುಭವಿಗಳಿಗೆ ಉಚಿತ ಕನ್ನಡಕ ಹಾಗೂ ಔಷಧಿಯನ್ನು ವಿತರಿಸಲಾಯಿತು. ಸಂಘಟಕರಾದ ಸ್ವಸ್ತಿಕ್ ಫ್ರೆಂಡ್ಸ್ ಗಣೇಶ್ಕೋಡಿ ಅಂಕದಡ್ಕ ವೀರಕಂಬ ಅಧ್ಯಕ್ಷ ಮೋಹನ್ ದಾಸ್ ಸ್ವಾಗತಿಸಿ ಕಾರ್ಯದರ್ಶಿ ವಿಘ್ನೇಶ ಆಚಾರ್ಯ ವಂದಿಸಿದರು. ರವೀಶ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.