ಬಂಟ್ವಾಳ

ತುಳು ನೃತ್ಯ ಭಜನಾ ಸ್ಪರ್ಧೆ: ತಂಡಗಳಿಗೆ ಆಹ್ವಾನ

ತುಳುಕೂಟ ಬಂಟ್ವಾಳ ದ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ  ಬಂಟ್ವಾಳ ತಾಲೂಕು ಮಟ್ಟದ ತುಳು ನ್ರತ್ಯಭಜನಾ ಸ್ಪರ್ಧೆ ನ. 24ರಂದು ನಡೆಯಲಿದ್ದು, ಭಜನಾ ತಂಡಗಳನ್ನು ಆಹ್ವಾನಿಸಲಾಗಿದೆ.

ಬಿ.ಸಿ.ರೋಡಿನ ಸ್ಪರ್ಷಾ ಕಲಾ ಮಂದಿರ ದಲ್ಲಿ ಬೆಳಿಗ್ಗೆ 8.30ರಿಂದ ಸಂಜೆ 6-30 ರ ತನಕ ಸ್ಪರ್ಧೆ ನಡೆಯುವುದು. ತಾಲೂಕಿನ ಎಲ್ಲಾ ಉತ್ಸಾಹಿ ಭಜನಾ ಮಂಡಳಿಗಳು, ಭಜನಾ ತಂಡಗಳು ಭಾಗವಹಿಸಬೇಕೆಂದು ತುಳುಕೂಟ ಬಂಟ್ವಾಳದ ಅಧ್ಯಕ್ಷರಾದ ಸುದರ್ಶನ್ ಜೈನ್ ಮತ್ತು ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸುವ ಭಜನಾ ತಂಡಗಳು ನವಂಬರ್ 14 ಸಂಜೆ 4ಗಂಟೆಯ ಒಳಗೆ ಪ್ರವೇಶ ಪತ್ರವನ್ನು ತಲುಪಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸ್ಪರ್ಧಾ ಸಂಯೋಜಕರಾದ ಮಂಜು ವಿಟ್ಲ 7975155486 ಮತ್ತು ಕಾರ್ಯದರ್ಶಿ ಎಚ್ಕೆ ನಯನಾಡು 9449105907 ಇವರನ್ನು ಸಂಪರ್ಕಿಸಬಹುದು . ಪ್ರಥಮ, ದ್ವಿತೀಯ, ತ್ರತೀಯ ನಗದು ಬಹುಮಾನ, ಸ್ಮರಣಿಕೆ, ಮತ್ತು ಪ್ರಮಾಣ ಪತ್ತ ನೀಡಲಾಗುವುದು, ಭಾಗವಹಿಸಿದ ಎಲ್ಲಾ ತಂಡದ ಭಜನಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ.

ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts