www.bantwalnews.com Editor: Harish Mambady
ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ ಮಂಗಳೂರು, ಬಂಟ್ವಾಳ ಘಟಕ ವತಿಯಿಂದ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಗೆ ಶನಿವಾರ ಸಂಜೆ ಚಾಲನೆ ದೊರಕಿತು. ಭಾನುವಾರ ಇದರ ಸಮಾರೋಪ ನಡೆಯಲಿದೆ.
8 ವರ್ಷದಿಂದ 80 ವರ್ಷದವರೆಗಿನ ವಯೋಮಾನದವರಿಗೆ ಇಲ್ಲಿ ಸ್ಪರ್ಧೆ ಆಯೋಜಿಸಲಾಗಿದ್ದು, ಅಂದಾಜು 300ರಷ್ಟು ಸ್ಪರ್ಧಾಳುಗಳು ಶನಿವಾರ ನೋಂದಾವಣಿ ಮಾಡಿಕೊಂಡರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ಆಳ್ವಾಸ್ ವಿದ್ಯಾರ್ಥಿಗಳು ಯೋಗ ಪ್ರದರ್ಶನ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ, ಬೌದ್ಧಿಕ, ಮಾನಸಿಕ, ಶಾರೀರಿಕ ನೆಮ್ಮದಿಗೆ ಯೋಗ ಸಹಕಾರಿ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ಯೋಗಾಸನ ನಿಯಮಿತ ವ್ಯಾಯಾಮದಿಂದ ದೇಹವನ್ನು ಆರೋಗ್ಯದಿಂದಿಡಲು ಸಾಧ್ಯ ಎಂದು ಶುಭ ಹಾರೈಸಿದರು. ದ.ಕ.ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ನ್ಯಾಯವಾದಿ ಅಶ್ವನಿ ಕುಮಾರ್ ರೈ, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಸಮಾಜ ಸೇವಕ ಪ್ರಕಾಶ್ ಕಾರಂತ, ರೋಟರಿ ಟೌನ್ ಅಧ್ಯಕ್ಷ ಜಯರಾಜ್ ಬಂಗೇರ, ಬಿಲ್ಲವ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ, ಉದ್ಯಮಿ ಯೋಗಾಸನ ಸ್ಪರ್ಧೆ ಆಯೋಜಕ ಸಮಿತಿಯ ಗೌರವಾಧ್ಯಕ್ಷ ಸೇಸಪ್ಪ ಕೋಟ್ಯಾನ್, ಅಧ್ಯಕ್ಷ ಡಾ. ಶಿವಪ್ರಸಾದ್ ಶೆಟ್ಟಿ, ಪ್ರಧಾನ ಸಂಚಾಲಕ ಚಂದ್ರಹಾಸ ಶೆಟ್ಟಿ ರಂಗೋಲಿ, ಪ್ರಸಾದ್ ಕುಮಾರ್ ಮತ್ತು ಸುರೇಶ್ ನಾಯಕ್ ಕಾರ್ಯದರ್ಶಿಯಾಗಿ ಡಾ. ರಘವೀರ್ ಅವಧಾನಿ, ಕೋಶಾಧಿಕಾರಿ ಡಾ. ಸುಬ್ರಹ್ಮಣ್ಯ ಭಟ್ ಟಿ., ಲೆಕ್ಕಪರಿಶೋಧಕ ಯತೀಶ್ ಭಂಡಾರಿ ಉಪಸ್ಥಿತರಿದ್ದರು. ಇದೇ ವೇಳೆ ಯೋಗಗುರು ಡಾ. ರಘುವೀರ ಅವಧಾನಿ ಮತ್ತು ಹಿರಿಯ ಯೋಗಪಟು, ತೀರ್ಪುಗಾರ ಮೋನಪ್ಪ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಡಾ. ರಘುವೀರ ಅವಧಾನಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಡಾ. ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಸಂಚಾಲಕ ನ್ಯಾಯವಾದಿ ಪ್ರಸಾದ್ ಕುಮಾರ್ ವಂದಿಸಿದರು. ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮೋನಪ್ಪ ಪೂಜಾರಿ, ದಾಮೋದರ ರಾಮಕುಂಜ ನೇತೃತ್ವದಲ್ಲಿ ರಾಜ್ಯ ಮಟ್ಟದ ಮೂವತ್ತು ತೀರ್ಪುಗಾರರು ಈ ಸ್ಪರ್ಧಾಕೂಟದಲ್ಲಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.