ಬಂಟ್ವಾಳ: ಬಿ.ಸಿ.ರೋಡಿನ ಹಿರಿಯ ನೋಟರಿ ಪಬ್ಲಿಕ್ ಮತ್ತು ನ್ಯಾಯವಾದಿ ಎಂ.ಚಂದ್ರಶೇಖರ ಪೂಜಾರಿ ಅವರ ನೂತನ ಕಚೇರಿಯ ಉದ್ಘಾಟನೆ ಅಕ್ಟೋಬರ್ 6ರಂದು ಬಿ.ಸಿ.ರೋಡಿನ ಮಿನಿ ವಿಧಾನಸೌಧ ಎದುರು ಅಚ್ಚುತ ಕಾಂಪ್ಲೆಕ್ಸ್ ನಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ.
ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ಮಿನಿ ವಿಧಾನಸೌಧದ ಎದುರು ಅಚ್ಯುತ ಕಾಂಪ್ಲೆಕ್ಸ್ ನಲ್ಲಿರುವ ಕಚೇರಿಯನ್ನು ಹೈಕೋರ್ಟ್ ನ್ಯಾಯವಾದಿ, ರಾಜ್ಯ ವಕೀಲರ ಸಂಘದ ಅಧ್ಯಕ್ಷ ಪದ್ಮಪ್ರಸಾದ್ ಹೆಗ್ಡೆ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಯು.ಟಿ.ಖಾದರ್, ವಿಧಾನಪರಿಷತ್ತು ಸದಸ್ಯರಾದ ಐವನ್ ಡಿಸೋಜ, ಕೆ.ಹರೀಶ್ ಕುಮಾರ್, ಎಎಸ್ಪಿ ಸೈದುಲು ಅದಾವತ್, ಮಾಜಿ ಶಾಸಕರಾದ ಕೆ.ವಸಂತ ಬಂಗೇರ, ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಬಂಟ್ವಾಳ ತಾಪಂ ಅಧ್ಯಕ್ಷ ಕೆ.ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಸಿಂಗಾರಿ ಬೀಡಿ ಮಾಲೀಕ ಹಾಜಿ ಎನ್.ಸುಲೈಮಾನ್, ಭಾರತ ಕಮ್ಯುನಿಷ್ಟ್ ಪಕ್ಷದ ದಕ, ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಎರ್ಮಾಳ್ ಕಲ್ಪನಾ ಚಂದ್ರಶೇಖರ್, ಚೆನ್ನಪಟ್ಟಣ, ರಾಮನಗರ, ಫೈಸ್ಟಾರ್ ಕಾಂಪ್ಲೆಕ್ಸ್ ಮಾಲೀಕ ದಾಮೋದರ ಸಾಲಿಯಾನ್, ಮಕ್ಕಳ ತಜ್ಞ ಡಾ. ವಸಂತ ತಲಪಾಡಿ, ದುಬೈನ ರಿತೇಶ್ ತಲಪಾಡಿ, ಸ್ಫೂರ್ತಿ ರಿತೇಶ್ ದುಬೈ, ಹೈಕೋರ್ಟ್ ನ್ಯಾಯವಾದಿ ಸ್ವೀಕೃತಿ ಚಂದ್ರಶೇಖರ್, ಪತ್ರಕರ್ತರಾದ ರಾಜಾ ಬಂಟ್ವಾಳ, ಹರೀಶ ಮಾಂಬಾಡಿ, ಮುಂಬೈ ಕನ್ನಡ ಪತ್ರಕರ್ತರ ಸಂಘ ಅಧ್ಯಕ್ಷ ರೋನ್ಸ್ ಬಂಟ್ವಾಳ, ಜಿಪಂ, ತಾಪಂ, ಪುರಸಭೆ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಚಂದ್ರಶೇಖರ ಪೂಜಾರಿ ತಿಳಿಸಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ: ಎಂ. ಚಂದ್ರಶೇಖರ ಪೂಜಾರಿ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಮುಗ್ಗಗುತ್ತು ಮನೆತನದಲ್ಲಿ ಕೊರಗಪ್ಪ ಪೂಜಾರಿ, ಮುತ್ತಮ್ಮ ದಂಪತಿ ಪುತ್ರರಾಗಿ ಜನಿಸಿದ ಅವರು, ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರಕಾರಿ ಶಾಲೆಯಲ್ಲಿ ಕಲಿತು, ಹೈಸ್ಕೂಲ್ ವಿದ್ಯಾಭ್ಯಾಸವನ್ನು ಪಾಣೆಮಂಗಳೂರು ಶಾರದಾ ಹೈಸ್ಕೂಲಿನಲ್ಲಿ ಪೂರೈಸಿದ್ದಾರೆ. ವಿಟ್ಲ ಜ್ಯೂನಿಯರ್ ಕಾಲೇಜಿನಲ್ಲಿ ಪಿಯುಸಿ, ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಬಿಎ, ಎಲ್.ಎಲ್.ಬಿ ಪೂರೈಸಿ 1984ರಲ್ಲಿ ವಕೀಲವೃತ್ತಿಯನ್ನು ಆರಂಭಿಸಿದ್ದಾರೆ. ಮಂಗಳೂರಿನಲ್ಲಿ ಜನಾರ್ದನ ಪೂಜಾರಿ ಮಾರ್ಗದರ್ಶನದಲ್ಲಿ ಜಗನ್ನಾಥ ಪೂಜಾರಿ ಮತ್ತು ವಸಂತ ಕಾರಂದೂರು ಜೊತೆ ವಕೀಲ ತರಬೇತಿ ಪೂರೈಸಿ, 1989ರಲ್ಲಿ ಬಿ.ಸಿ.ರೋಡಿನಲ್ಲಿ ಸ್ವಂತ ಕಚೇರಿ ಆರಂಭಿಸಿದರು. 1999ರಲ್ಲಿ ಕರ್ನಾಟಕ ಸರಕಾರ ನೋಟರಿ ಪಬ್ಲಿಕ್ ಆಗಿ ಮಾಡಿದೆ. ಬಂಟ್ವಾಳ ತಾಲೂಕು ಟೂರಿಸ್ಟ್ ಕಾರು ಚಾಲಕರ ಸಂಘದ ಅಧ್ಯಕ್ಷರಾಗಿ, ರೋಟರಿ ಕ್ಲಬ್ ಸದಸ್ಯರಾಗಿ, ವಕೀಲರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 1994ರಿಂದ 1997ರವರೆಗೆ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷರಾಗಿದ್ದರು. ಕರ್ನಾಟಕ ಸರಕಾರದ ಉಚಿತ ಕಾನೂನು ಸೇವಾ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸದಸ್ಯರಾಗಿ ಸೇವೆ ಮಾಡಿದ್ದಾರೆ. ಇವರ ಪತ್ನಿ ಎರ್ಮಾಳ್ ಕಲ್ಪನಾ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯಾಗಿ ಚೆನ್ನಪಟ್ಟಣ ರಾಮನಗರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಗಳು ಸ್ಫೂರ್ತಿ ರಿತೇಶ್, ಅಳಿಯ ರಿತೇಶ್ ತಲಪಾಡಿ ದುಬೈನಲ್ಲಿ ಉದ್ಯೋಗದಲ್ಲಿದ್ದರೆ, ಇನ್ನೋರ್ವ ಮಗಳು ಸ್ವೀಕೃತಿ ಚಂದ್ರಶೇಖರ್ ಬೆಂಗಳೂರಿನಲ್ಲಿ BBA, LLB ಪದವಿ ಪೂರೈಸಿ, ಹೈಕೋರ್ಟ್ ನ್ಯಾಯವಾದಿಯಾಗಿ ಹಿರಿಯ ನ್ಯಾಯವಾದಿ ಸಂದೀಪ್ ಪಾಟೀಲ್ ಮಾರ್ಗದರ್ಶನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಬಿ.ರಮಾನಾಥ ರೈ ಮಾರ್ಗದರ್ಶನದಂತೆ ಸೇವೆ ಸಲ್ಲಿಸುತ್ತಿರುವ ಇವರು ಸರಕಾರಿ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರು. ಮುಗ್ಗಗುತ್ತು ಟ್ರಸ್ಟ್ ಬೆಳ್ತಂಗಡಿ ಸದಸ್ಯರಾಗಿದ್ದಾರೆ.