ವಿಟ್ಲ

ಯುವಸಂಗಮದಿಂದ ಉಚಿತ ಆರೋಗ್ಯ ಶಿಬಿರ

ವೀರಕಂಭ ಗ್ರಾಮದ ಮಂಗಳಪದವು ಯುವಸಂಗಮ ಪಾದೆ ವತಿಯಿಂದ ಉಚಿತ ವೈದ್ಯಕೀಯ, ಕಣ್ಣಿನ ತಪಾಸಣೆ, ಹಾಗೂ ದಂತ ಚಿಕಿತ್ಸಾ ಶಿಬಿರ ಮತ್ತು ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ಭಾನುವಾರ ನಡೆಯಿತು.

ಜಾಹೀರಾತು

ಯುವ ಸಂಗಮ ಪಾದೆ ಮಂಗಳಪದವು, ವೀರಕಂಬ ಗ್ರಾಮ, ಬಂಟ್ವಾಳ ತಾಲ್ಲೂಕು ಮತ್ತು ಕೆಎಂಸಿ ಆಸ್ಪತ್ರೆ ಅತ್ತಾವರ  ಮಂಗಳೂರು ಸಹಭಾಗಿತ್ವದಲ್ಲಿ ಯುವ ಸಂಗಮ ಪಾದೆ ದಶಮಾನೋತ್ಸವದ ಪ್ರಯುಕ್ತ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಂಗಳಪದವು ಅಧ್ಯಕ್ಷ ಮಹಾಲಿಂಗ ಭಟ್ ಉಗ್ಗಪ್ಪಕೋಡಿ  ಉದ್ಘಾಟಿಸಿದರು.

ಮಂಗಳೂರು ಅತ್ತಾವರ ಕೆಎಂಸಿ ವೈದ್ಯಾಧಿಕಾರಿ ಮಿಥುನ್, ಮೆಡಿಕಲ್ ಕೋಅರ್ಡಿನೇಟರ್ ಹರ್ಬರ್ಟ್, ಸ್ಥಳೀಯ ವೈದ್ಯ ಗಿರಿಧರ ಭಟ್, ಶುಭ ಹಾರೈಸಿದರು. ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಸಂಕಪ್ಪ ಗೌಡ ಕೈಂತಿಲ, ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ನವೀಕರಣ ಸಮಿತಿಯ ಸದಸ್ಯ ಚಂದಪ್ಪ ಟೈಲರ್ ಮಂಗಳಪದವು, ಗಾಯತ್ರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ವಿಷ್ಣು ಭಟ್ ಅಡ್ಯೆಯಿ, ಯುವ ಸಂಗಮ ಪಾದೆ ಅಧ್ಯಕ್ಷ ರಾಮಣ್ಣ ಗೌಡ ಪಾದೆ , ಯುವ ಸಂಗಮ ಪಾದೆ ಸಲಹೆಗಾರರಾಗಿರುವ ಶೀನ ಗೌಡ ಸುಳ್ಯ ಇದ್ದರು. ಈ ಸಂದರ್ಭ 150  ಜನರಿಗೆ ಉಚಿತ ಕನ್ನಡಕ ವಿತರಣೆಯನ್ನು ನಡೆಸಲಾಯಿತು. ಗಣ್ಯ ಪೂಜಾ ಪೂರ್ಣಿಮಾ ಮತ್ತು ವೈಷ್ಣವಿ ಪಾದೆ ಪ್ರಾರ್ಥಿಸಿದರು. ಯತೀಶ್ ಪಾದೆ ಸ್ವಾಗತಿಸಿದರು. ಶ್ರುತಿ ಚೊಕ್ಕಾಡಿ ವಂದಿಸಿದರು. ತ್ರಿವೇಣಿ ಕುದ್ಕೋಳಿ ಕಾರ್ಯಕ್ರಮ ನಿರ್ವಹಿಸಿದರು. ಲೋಹಿತ್ ಕರ್ಮಾಜೆ ಶಿಬಿರವನ್ನು ಸಂಯೋಜಿಸಿದರು. ಸುಮಾರು 400 ಹೆಚ್ಚು ಜನರು ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಮಂಗಳಪದವು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಂಗಳಪದವು, ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ನವೀಕರಣ ಸಮಿತಿ ಮಂಗಳಪದವು, ಶಿವಾಜಿ ಫ್ರೆಂಡ್ಸ್ ಮಂಗಳಪದವು ಹಾಗೂ ಹಿಂದೂ ಧಾರ್ಮಿಕ ಸೇವಾ ಸಮಿತಿ ಕೆಲಿಂಜ ಸಹಕಾರ ನೀಡಿದರು.

www.bantwalnews.com Editor: Harish Mambady

For Advertisements Contact: 9448548127

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts